ಮೂಡಲಗಿ: ತಾಲೂಕಿನ ಅವರಾದಿ ಗ್ರಾಮದಲ್ಲಿ ಶ್ರೀ ಹನುಮಾನ ಸೇವಾ ಸಮೀತಿ ಆಶ್ರಯದಲ್ಲಿ ಶ್ರೀ ಹನುಮಾನ ಮೂತಿ ಪ್ರತಿಷ್ಠಪನೆ ಕಾರ್ಯಕ್ರಮ ಎ.25ರಂದು ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಜರುಗಲಿದೆ.
ಎ.25 ರಂದು ಬೆಳ್ಳಿಗೆ 5-05ಕ್ಕೆ ಶ್ರೀ ಹನುಮಂತ ದೇವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಹೊಮ ಹವನ, ರುದ್ರಾಭಿಷೇಕ ಜರುಗುವುದು. 10 ಗಂಟೆಗೆ ಜರುಗುವ ಸಮಾರಂಭದ ಸಾನಿಧ್ಯವನ್ನು ಮರೆಗುದ್ದಿಯ ಡಾ.ನಿರುಪಾದೇಶ್ವರ ಮಹಾಸ್ವಾಮಿಗಳು ವಹಿಸುವರು, ಕಲಬುರ್ಗಿ ಜಿಲ್ಲೆ ಕುಂದಗೊಳದ ಶ್ರೀ ಸಿದ್ಧರಾಮ ಮಹಾಸ್ವಾಮಿಗಳು ಜ್ಯೋತಿ ಬೆಳಗಿಸುವರು, ಶ್ರೀ ಗಂಗಾಧರ ಹಿರೇಮಠ ಶ್ರೀಗಳು ಮತ್ತು ಸೋಮಯ್ಯ ಹಿರೇಮಠ ಶ್ರೀಗಳು, ಮಹಾಂತಯ್ಯಾಬ ಹಿರೇಮಠ ಶ್ರೀಗಳ ಉಪಸ್ಥಿತರಿರುವರು, ಕಹಾಮಾ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಸಂಸದರು ಹಾಗೂ ಶಾಸಕರು, ರಾಜಕೀಯ ಮುಖಂಡರು, ಅಧಿಕಾರಿಗಳು, ಹಿರಿಯರು ಭಾಗವಹಿಸುವರು.
IN MUDALGI Latest Kannada News