ಬನವಾಸಿ: ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಯಾವುದೇ ಸಮುದಾಯ, ಪಕ್ಷ, ಜಾತಿಗೆ ಸೇರಿದ ನಾಯಕರಲ್ಲ. ಅವರು ನಮ್ಮ ಭಾರತ ದೇಶವನ್ನು ಪ್ರತಿನಿಧಿಸಿದ ಸಾಂಸ್ಕøತಿಕ ರಾಯಭಾರಿಯಾಗಿದ್ದರು. ಇತ್ತಿಚಿನ ದಿನಗಳಲ್ಲಿ ನವಭಾರತ ನಿರ್ಮಾಣದಲ್ಲಿ ಯುವಶಕ್ತಿಯ ಪಾತ್ರ ಅತ್ಯಂತ ಮಹತ್ವವಾದದ್ದು ನಮ್ಮ ದೇಶದ ಯುವ ಜನಾಂಗದ ಮೇಲೆ ಭಾರತ ದೇಶ ಮಾತ್ರವಲ್ಲದೇ ವಿಶ್ವವೇ ಸಾಕಷ್ಟು ನೀರಿಕ್ಷೆಗಳನ್ನು ಇಟ್ಟುಕೊಂಡಿದೆ ನವ ಪರಿವರ್ತನೆಯಲ್ಲಿ ಯುವಶಕ್ತಿ ಬಲಿಷ್ಠವಾಗಲಿ ಎಂದು ಬನವಾಸಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಎಚ್. ದೇವೇಂದ್ರ ಹೇಳಿದರು.
ಅವರು ಸ್ಥಳೀಯ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ಸ್ವಾಮಿ ವಿವೇಕಾನಂದರ 158ನೇ ಜಯಂತ್ಯೋತ್ಸವದಲ್ಲಿ ಮಾತನಾಡಿ, ಸ್ವಾಮಿ ವಿವೇಕಾನಂದರು ದೇಶದ ಯುವ ಶಕ್ತಿಯನ್ನು ಇಡೀ ವಿಶ್ವಕ್ಕೆ ಪರಿಚಯಿಸಿಕೊಟ್ಟ ಮಹಾನ್ ಚೇತನ. ಇಂದು ಭಾರತದ ಯುವಶಕ್ತಿ ಪ್ರಪಂಚದ ಏಳ್ಗೆಗಾಗಿ ದುಡಿಯುತ್ತಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಎಂ.ಕೆ. ನಾಯ್ಕ್ ಹೊಸಳ್ಳಿ ಅಧ್ಯಕ್ಷತೆವಹಿಸಿ ಮಾತನಾಡುತ್ತ, ವಿವೇಕಾನಂದರ ಚಿಂತನೆಗಳು ಸರ್ವಕಾಲಿಕ ಮೌಲ್ಯಗಳು, ಯುವ ಸನ್ಯಾಸಿಯ ಮನುಷ್ಯ ಪ್ರೀತಿ P್ಫ್ರಂತಿಯ ಮಾತುಗಳು ಜಗತ್ತನ್ನು ಆಕರ್ಷಿಸಲು ಕಾರಣವಾಯಿತು. ಯುವಕರು ವಿವೇಕಾನಂದರ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನೇಹಾ ಕೆಳಗಿನಮನೆ ಪ್ರಾರ್ಥಿಸಿದರು. ಉಪನ್ಯಾಸಕಿ ತನುಜಾ ನಾಯ್ಕ್ ಸ್ವಾಗತಿಸಿದರು. ಅಶೋಕ ಶೆಟ್ಟಿ ವಂದಿಸಿದರು.