ಬನವಾಸಿ: ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ, ಬನವಾಸಿ ತಾಲೂಕು ವತಿಯಿಂದ ಅಯೋಧ್ಯ ಶ್ರೀರಾಮಜನ್ಮ ಭೂಮಿ ಮಂದಿರದ ನಿಧಿ ಸಮರ್ಪಣ ಮಹಾ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ಸಮೀಪದ ಗುಡ್ನಾಪೂರ ಶ್ರೀರಾಮ ಮಂದಿರದಲ್ಲಿ ವಿಷೇಶ ಪೂಜೆ ನೇರವೇರಿಸಿದ ಶಿರಸಿ ಜಿಲ್ಲಾ ಸಾಮರಸ್ಯ ಪ್ರಮುಖ ರವೀಶ ಬೆಂಗಳೆ ಅಭಿಯಾನಕ್ಕೆ ಚಾಲನೆ ನೀಡಿದರು. ಚಾಲನೆ ನೀಡಿ ಮಾತನಾಡಿದ ಅವರು ದೇಶದಾದ್ಯಂತ ಜ. 15ರಂದು ಅಯೋಧ್ಯ ಶ್ರೀರಾಮಜನ್ಮ ಭೂಮಿ ಮಂದಿರದ ನಿಧಿ ಸಮರ್ಪಣ ಮಹಾ ಅಭಿಯಾನಕ್ಕೆ ಚಾಲನೆ ದೊರೆತ್ತಿದ್ದು ನಿಧಿ ಸಂಗ್ರಹಣೆಗಾಗಿ ಸ್ವಯಂಸೇವಕರು ರಾಮನ ಸೇವೆಯಲ್ಲಿ ಉತ್ಸುಹಕದಿಂದ ಪಾಲ್ಗೋಂಡಿದ್ದಾರೆ. ನಾವೇಲ್ಲರೂ ಧನ್ಯತಾ ಭಾವದಿಂದ ಈ ಪುಣ್ಯಕಾರ್ಯದಲ್ಲಿ ಪಾಲ್ಗೋಳ್ಳೋಣ ಎಂದರು.
ಮುಂಜಾನೆ 9 ಗಂಟೆಯಿಂದ ಶ್ರೀರಾಮಸೇವಕರು ಬನವಾಸಿ ಪಟ್ಟಣ ಮತ್ತು ಸುತ್ತಲಿನ ಗ್ರಾಮಗಳಾದ ಅಜ್ಜರಣಿ, ಮತ್ತುಗುಣಿ, ಗುಡ್ನಾಪೂರ, ಅಡಲಗಿ, ಮುತಾಳಕೊಪ್ಪ, ಬೆಂಗಲೆ ಗ್ರಾಮಗಳಲ್ಲಿನ ದೇವಸ್ಥಾನಗಳಲ್ಲಿ ವಿಷೇಶ ಪೂಜೆ ನೇರವೇರಿಸಿದ ನಂತರ ಅಲಂಕೃತ ವಾಹನಗಳಲ್ಲಿ ಶ್ರೀ ರಾಮನ ಭಾವಚಿತ್ರದೊಂದಿಗೆ ರಾಮ ಭಜನೆಗಳನ್ನು ಹಾಡುತ್ತಾ, ಜೈ ಶ್ರೀ ರಾಮ್ ಎಂಬ ಘೋಷಣೆ ಕೂಗುತ್ತ ಪ್ರತಿ ಮನೆ ಮನೆಗೆ ತೆರಳಿ ನಿಧಿ ಸಂಗ್ರಹಣೆ ಮಾಡಿದರು. ಪ್ರತಿ ಮನೆಗಳಲ್ಲಿ ತಳಿರು ತೋರಣಗಳನ್ನು ಕಟ್ಟಿ ರಂಗೋಲಿ ಹಾಕಿ ರಾಮಭಕ್ತರನ್ನು ಸ್ವಾಗತಿಸಿದರು. ಶ್ರೀರಾಮನಿಗೆ ಹಣ್ಣುಕಾಯಿ ಸಮರ್ಪಿಸಿ ಪೂಜೆಸಲ್ಲಿಸಿ ತಮ್ಮ ಶತ್ಯನುಸಾರವಾಗಿ ಧನ್ಯತಾ ಭಾವದಿಂದ ನಿಧಿ ಸಮರ್ಪಣೆ ಮಾಡಿ ಭಕ್ತಿ ಮೆರೆದರು.
ಅಭಿಯಾನದಲ್ಲಿ ಬನವಾಸಿ ತಾಲೂಕು ಪ್ರಮುಖರಾದ ಅರವಿಂದ ಬಳಿಗಾರ, ಸುಧೀರ ನಾಯರ್, ಆರ್.ಜಿ. ಭಟ್ಟ, ಪ್ರಶಾಂತ್ ಶೆಟ್, ಸಾಯಿರಾಮ್ ಖಾನಳ್ಳಿ, ಗುಡ್ನಾಪೂರದ ರಾಘವೇಂದ್ರ ನಾಯ್ಕ, ಪ್ರೇಮ್‍ಕುಮಾರ, ಅಡಲಗಿಯ ಮಂಜು ಅಡಲಗಿ, ಬೆಂಗಳೆಯ ಅನಂತ ಹೆಗ್ಡೆ, ದಿನೇಶ ಹೆಗ್ಡೆ, ಗೌತಮ್ ಹೆಗ್ಡೆ, ಧರ್ಮ ನಾಯ್ಕ, ಪ್ರಸನ್ನ ಹೆಗ್ಡೆ, ಪರಶುರಾಮ್ ಹೆಗ್ಡೆ, ಮುತಾಳಕೊಪ್ಪದ ರವೀಂದ್ರ ನಾಯ್ಕ್ ಹಾಗೂ ನೂರಾರು ಶ್ರೀರಾಮ ಸೇವಕರು ಪಾಲ್ಗೋಂಡಿದ್ದರು.
Check Also
‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’
Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …