Breaking News
Home / Recent Posts / ಪಟ್ಟಣವನ್ನು ಕಸ ಮುಕ್ತ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಪಟ್ಟಣವನ್ನು ಕಸ ಮುಕ್ತ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

Spread the love

ಬನವಾಸಿ: ಬನವಾಸಿ ಪಟ್ಟಣವನ್ನು ಕಸ ಮುಕ್ತ ಪಂಚಾಯಿತಿಯಾಗಿ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇದಕ್ಕೆ ನೂತನವಾಗಿ ಆಯ್ಕೆಯಾದ ಸರ್ವ ಸದಸ್ಯರ ಹಾಗೂ ಸಾರ್ವಜನಿಕರ ಸಹಕಾರ ಅತ್ಯಗತ್ಯವೆಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಫ್.ಜಿ. ಚಿನ್ನಣ್ಣನವರ ಹೇಳಿದರು.
ಅವರು ಬನವಾಸಿ ಗ್ರಾಮ ಪಂಚಾಯಿತಿಯ ವತಿಯಿಂದ ಸೋಮವಾರ ಪಂಚಾಯಿತಿ ಸಭಾ ಭವನದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದ ಕುರಿತು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತ, ಬನವಾಸಿ ಗ್ರಾಮ ಪಂಚಾಯಿತಿಯೂ ತಾಲೂಕಿನಲ್ಲಿಯೇ ದೊಡ್ಡ ಪಂಚಾಯಿತಿಯಾಗಿದ್ದು ವ್ಯಾಪಾರ ವಾಹಿವಾಟಿನ ಜೊತೆಗೆ ಜನಸಂಖ್ಯೆಯೂ ಹೆಚ್ಚಾಗಿರುವುದರಿಂದ ಕಸ ಹೆಚ್ಚು ಉತ್ಪಾದನೆಯಾಗುವುದರೊಂದಿಗೆ ವಿಲೇವಾರಿ ಬಹುದೊಡ್ಡ ಸಮಸ್ಯೆಯಾಗಿದೆ. ಪಟ್ಟಣದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾಮಾಗಾರಿಯನ್ನು ಶೀಘ್ರದಲ್ಲಿ ಆರಂಭಿಸಲಾಗುವುದು. ಘಟಕ ನಿರ್ಮಾಣ ಸಾರ್ವಜನಿಕರು ಸಹಕರಿಸಬೇಕು. ಈ ಮೊದಲು ಜನತೆಯ ಸಹಕಾರ ಇಲ್ಲವಾಗಿದ್ದರಿಂದ 9 ಲಕ್ಷ ರೂ. ಅನುದಾನ ಮರಳಿ ಹೋಗಿದ್ದು ಈ ಬಾರಿ ಆ ರೀತಿಯಾಗುವುದು ಬೇಡ ಪಂಚಾಯಿತಿಯ ಹಿಂಭಾಗದಲ್ಲಿರುವ ಜಾಗ ಅಥಾವ ಇದಕ್ಕೆ ಸೂಕ್ತವಾಗುವಂತಹ ಪಂಚಾಯಿತಿಯ ಜಾಗವನ್ನು ಪರಿಶೀಲನೆ ಮಾಡಿ ಘಟಕ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿ ಶೀಘ್ರದಲ್ಲಿಯೇ ಕಾಮಗಾರಿ ಕೈಗೊಳ್ಳಲಾಗುವುದು, ಸಾರ್ವಜನಿಕರು ಕಸ ಮುಕ್ತ ಪಂಚಾಯಿತಿಯಾಗಲು ಪಂಚಾಯಿತಿಯೊಂದಿಗೆ ಸಹಕರಿಸಿ ಎಂದು ಮನವಿ ಮಾಡಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ರೀಲತಾ ಕಾಳೆರಮನೆ ಅಧ್ಯಕ್ಷತೆವಹಿಸಿದ್ದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಮಮತಾ ನಾಯ್ಕ್, ಕಂದಾಯ ನಿರೀಕ್ಷಕರು ಮಂಜುಳಾ ನಾಯ್ಕ್ ಮಾತನಾಡಿದರು.
ಸಭೆಯಲ್ಲಿ ಬನವಾಸಿ ಗ್ರಾಮ ಪಂಚಾಯಿತಿಯ ನೂತನ ಸದಸ್ಯರು, ಸಿಬ್ಬಂದಿಗಳಾದ ಗಣೇಶ, ಅನುಪಮ ಮತ್ತಿತರರು ಉಪಸ್ಥಿತರಿದ್ದರು.
ಪೋಟೊ ಪೈಲ್ ನೇಮ್: 4ಬನವಾಸಿ4


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ