Breaking News
Home / Recent Posts / ಕಲ್ಲೋಳಿಯ ಶ್ರೀ ಬಸವೇಶ್ವರ ಸೊಸಾಯಿಟಿಗೆ ರೂ.3.16 ಕೋಟಿ ಲಾಭ

ಕಲ್ಲೋಳಿಯ ಶ್ರೀ ಬಸವೇಶ್ವರ ಸೊಸಾಯಿಟಿಗೆ ರೂ.3.16 ಕೋಟಿ ಲಾಭ

Spread the love

ಕಲ್ಲೋಳಿಯ ಶ್ರೀ ಬಸವೇಶ್ವರ ಸೊಸಾಯಿ”ಟಿಗೆ ರೂ.3.16 ಕೋಟಿ ಲಾಭ

ಮೂಡಲಗಿ: ಕಲ್ಲೋಳಿಯ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘವು ಪ್ರಸಕ್ತ ಹಣಕಾಸಿ ವರ್ಷದ ಕೊನೆಯಲ್ಲಿ ರೂ. 3.16 ಕೋಟಿ ಲಾಭವನ್ನ ಗಳಿಸಿ ಪ್ರಗತಿಯಲ್ಲಿ ಸಾಗಿದೆ ಎಂದು ಸೊಸಾಯಿಟಿಯ ಅಧ್ಯಕ್ಷ ಬಾಳಪ್ಪ ಬ. ಬೆಳಕೂಡ ಹೇಳಿದರು.
ತಾಲ್ಲೂಕಿನ ಕಲ್ಲೋಳಿಯ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಪ್ರತಿ ವರ್ಷವೂ ಶೇ.25ರಷ್ಟು ಲಾಭಾಂಶವನ್ನು ಸದಸ್ಯರಿಗೆ ವಿತರಿಸುತ್ತಿರುವೆವು ಎಂದರು.
ಸದ್ಯ ರೂ.78.91 ಲಕ್ಷ ಶೇರು ಬಂಡವಾಳ, ರೂ.16.57 ಕೋಟಿ ನಿಧಿಗಳು, ರೂ. 42.20 ಕೋಟಿ ಠೇವುಗಳು, ರೂ. 59.56 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದ್ದು, ವಿವಿಧ ಕ್ಷೇತ್ರಗಳಿಗೆ ರೂ. 54.07 ಕೋಟಿ ಸಾಲವನ್ನು ವಿತರಿಸಲಾಗಿದೆ ಎಂದರು.
ಪ್ರತಿ ವರ್ಷವೂ ಶೇ. 100ರಷ್ಟು ಸಾಲ ವಸೂಲಾತಿ ಮಾಡುತ್ತಿದ್ದು ಅಡಿಟ್‍ದಲ್ಲಿ ‘ಅ’ ವರ್ಗವನ್ನು ಪಡೆದುಕೊಂಡಿದೆ ಎಂದರು.
ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡಿರುವ ಸೊಸಾಯಿಟಿ ಪ್ರತಿಭಾವಂತ ಮಕ್ಕಳಿಗೆ ನಗದು ಹಣವನ್ನು ನೀಡಿ ಸನ್ಮಾನಿಸಿದರು.
ದ್ವಿತೀಯ ಪಿಯುಸಿಯ ರಾಹುಲ ದಾನನ್ನವರ, ಹರೀಶ ಸೋರಬನ್ನವರ, ರಕ್ಷತಾ ಢವಳೇಶ್ವರ ಹಾಗೂ ಎಸ್‍ಎಸ್‍ಎಲ್‍ಸಿ ನಿರ್ಮಲ ಕಂಕಣವಾಡಿ, ಸಹನಾ ಗೋರೋಶಿ, ಸುಜಾತಾ ಸೌಂಸುದ್ದಿ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿದರು.
ಸೊಸಾಯಿಟಿ ಉಪಾಧ್ಯಕ್ಷ ಶಿವರುದ್ದ ಬಿ. ಪಾಟೀಲ, ನಿರ್ದೇಶಕರಾದ ಬಸಗೌಡ ಪಾಟೀಲ, ಬಸವಣ್ಣಪ್ಪ ಗೋರೋಶಿ, ಮಲ್ಲಪ್ಪ ಖಾನಾಪುರ, ರಾಮಪ್ಪ ದಬಾಡಿ, ಹಣಮಂತ ಪರಕನಟ್ಟಿ, ಸುಭಾಷ ಖಾನಾಪುರ, ಬಸಪ್ಪ ಹೆಬ್ಬಾಳ, ದುಂಡವ್ವ ಕಡಾಡಿ, ಲಕ್ಷ್ಮೀಬಾಯಿ ಕಂಕಣವಾಡಿ, ಪ್ರಕಾಶ ಕಲಾಲ, ಮಹ್ಮದಶಫಿ ಮೋಕಾಶಿ, ಕಲ್ಲೋಳೆಪ್ಪ ತೆಳಗಡೆ ಹಾಗೂ ಭೀಮಪ್ಪ ಕಡಾಡಿ ಇದ್ದರು.
ಪ್ರಧಾನ ವ್ಯವಸ್ಥಾಪಕ ಹನಮಂತ ಖಾನಗೌಡ್ರ ಪ್ರಾಸ್ತಾವಿಕ ಮಾತನಾಡಿದರು.
ಈರಯ್ಯ ಕರಗಾಂವಮಠ ಸ್ವಾಗತಿಸಿದರು, ರಮೇಶ ಕವಟಗೊಪ್ಪ ವಂದಿಸಿದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ