ಬೆಳಗಾವಿ: ಭಾರತ ಸರಕಾರ ನೆಹರು ಯುವ ಕೇಂದ್ರ ಬೆಳಗಾವಿ ವತಿಯಿಂದ ಯುವ ಉತ್ಸವ 2022 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಪೇಟಿಂಗ್ ಸ್ಪರ್ಧೆ, ಕವನ ಬರವಣಿಗೆ ಸ್ಪರ್ಧೆ, ಮೊಬೈಲ್ ಪೋಟೋಗ್ರಾಫಿ ಸ್ಪರ್ಧೆ, ಸಾಂಸ್ಕøತಿಕ ಜಾನಪದ ಮತ್ತು ಸಾಂಪ್ರದಾಯಕ ನೃತ್ಯ ಸ್ಪರ್ಧೆ, ಭಾಷಣ ಸ್ಪರ್ಧೆ,ಯುವ ಸಂವಾದ ಈ ಎಲ್ಲಾ ಸ್ಪರ್ಧೆಗಳಲ್ಲಿ ಯಾವುದಾದರೂ ಒಂದರಲ್ಲಿ ಮಾತ್ರ ಭಾಗವಹಿಸಬಹುದು. ಎಂದು ಅಧಿಕಾರಿ ರೋಹಿತ ಕಲರಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೇಟಿಂಗ್ ಸ್ಪರ್ಧೆ ಮತ್ತು ಮೊಬೈಲ್ ಪೋಟೋಗ್ರಾಫಿ ಸ್ಪರ್ಧೆ ಹಾಗೂ ಕವನಗಳ ಬರವಣಿಗೆ ಈ ಮೂರು ಸ್ಪರ್ಧೆಯಲ್ಲಿ ಪೇಟಿಂಗ್‍ದಲ್ಲಿ 3 ಜನ, ಮೊಬೈಲ್ ಪೋಟೋಗ್ರಾಪಿಯಲ್ಲಿ 3 ಜನ ಕವನಗಳ ಬರವಣಿಗೆ 3 ಜನ ವಿಜೇತರನ್ನ ಆಯ್ಕೆ ಮಾಡಲಾಗುತ್ತದೆ. ವಿಜೇತರಾದವರಿಗೆ 1ನೇ ಬಹುಮಾನ 1000 ರೂ, 2ನೇ ಬಹುಮಾನ 750 ರೂ, 3ನೇ ಬಹುಮಾನ 500 ರೂ. ಇದರಲ್ಲಿ 1 ಮತ್ತು 2 ವಿಜೇರಾದವರು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಸಾಂಸ್ಕøತಿಕ ಜಾನಪದ ಮತ್ತು ಸಾಂಪ್ರದಾಯಕ ಗುಂಪು ನೃತ್ಯ ಸ್ಪರ್ಧೆಯಲ್ಲಿ ವಿಜೇತರಾದವರಿಗೆ 1ನೇ ಬಹುಮಾನ 5000 ರೂ, 2ನೇ ಬಹುಮಾನ 2000 ರೂ, 3ನೇ ಬಹುಮಾನ 1000 ರೂ. ಇದ್ದು 1ನೇ ಬಹುಮಾನ ವಿಜೇತರು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ. ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ 1ನೇ ಬಹುಮಾನ 5000 ರೂ, 2ನೇ ಬಹುಮಾನ 2000 ರೂ, 3ನೇ ಬಹುಮಾನ 1000 ರೂ. ಇದ್ದು 1ನೇ ಬಹುಮಾನ ವಿಜೇತರು ರಾಜ್ಯ ಮಟ್ಟದ ಸ್ಪರ್ಧೆಗೆ ಭಾಗವಹಿಸುತ್ತಾರೆ. ಕಳೆದ 4ವರ್ಷಗಳಲ್ಲಿ ಈ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದವರು ಅರ್ಹರಲ್ಲ. ಯುವ ಸಂವಾದ ಸ್ಪರ್ಧೆಯಲ್ಲಿ 4 ಜನರಿಗೆ ಈ ಪ್ರತಿಯೊಬ್ಬರಿಗೂ 1500 ರೂ ಬಹುಮಾನವಾಗಿ ನೀಡಲಾಗುವದು. ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ರೋಹಿತ ಕಲರಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂ. 0831-2453496 ಮೊ. 9620646488, 9053708116 ಸಂಪರ್ಕಿಸಿ.