ಬೆಳಗಾವಿ : ಗುಜರಾತ್ ದಲ್ಲಿರುವ ಎನ್ಸಿಡಿಎಫ್ಐ ಹೊಸ ಕಟ್ಟಡ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿರುವ ಎನ್ಡಿಡಿಬಿ ಚೇರಮನ್ನರೂ ಆಗಿರುವ ಎನ್ಸಿಡಿಎಫ್ಐ ಚೇರಮನ್ ಡಾ. ಮೀನೇಶ್ ಭಾಯಿ ಷಾ ಅವರನ್ನು ಆಡಳಿತ ಮಂಡಳಿಯ ಸದಸ್ಯರು ಸತ್ಕರಿಸಿ, ಗೌರವಿಸಿದರು.
ಎನ್ಸಿಡಿಎಫ್ಐ ನಿರ್ದೇಶಕರೂ ಆಗಿರುವ ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರ ನೇತೃತ್ವದಲ್ಲಿ ಸಂಸ್ಥೆಯ ಚೇರಮನ್ ಡಾ. ಮೀನೇಶ್ ಭಾಯಿ ಷಾ ಅವರಿಗೆ ಇತರ ಆಡಳಿತ ಮಂಡಳಿಯ ಸದಸ್ಯರು ನಿನ್ನೆ ಸೋಮವಾರದಂದು ಜರುಗಿದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಬೆಳ್ಳಿಯ ಗಣೇಶನ ವಿಗ್ರಹವನ್ನು ನೀಡಿ ಗೌರವಿಸಿದರು.
ಎನ್ಸಿಡಿಎಫ್ಐ ಸಂಸ್ಥೆಯ ನೂತನ ಕಟ್ಟಡದ ನಿರ್ಮಾಣಕ್ಕಾಗಿ ಚೇರಮನ್ ಡಾ. ಮೀನೇಶ್ ಭಾಯಿ ಷಾ ಅವರು ಅಪಾರವಾಗಿ ಶ್ರಮಿಸಿದ್ದಾರೆ. ಸುಮಾರು ೩೦ ಕೋಟಿ ರೂಪಾಯಿ ಮೌಲ್ಯದ ನೂತನ ಕಚೇರಿಯ ಅತ್ಯಾಧುನಿಕ ಕಟ್ಟಡವಾಗಲು ಡಾ. ಮೀನೇಶ್ ಭಾಯಿ ಅವರ ಶ್ರಮ ತುಂಬ ದೊಡ್ಡದಿದೆ. ತನು,ಮನ,ಧನದ ಸಹಾಯ ಮಾಡಿದ್ದಾರೆಂದು ಎನ್ಸಿಡಿಎಫ್ಐ ಸಂಸ್ಥೆಯ ನಿರ್ದೇಶಕರು ಇದೇ ಸಂದರ್ಭದಲ್ಲಿ ಡಾ. ಮೀನೇಶ್ ಭಾಯಿ ಅವರನ್ನು ಅಭಿನಂದಿಸಿ ಮಾತನಾಡಿದರು.
ಎನ್ಸಿಡಿಎಫ್ಐ ಸಂಸ್ಥೆಯ ಸಭೆಯಲ್ಲಿ ಕರ್ನಾಟಕದಿಂದ ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮತ್ತು ಸಿಂಧನೂರಿನ ಮಾಜಿ ಶಾಸಕ ವೆಂಕಟರಾವ್ ನಾಡಗೌಡ ಅವರು ಭಾಗವಹಿಸಿ, ಎನ್ಸಿಡಿಎಫ್ಐ ನಡೆಸುತ್ತಿರುವ ಸರಣಿ ಸಭೆಗಳಲ್ಲಿ ಭಾಗವಹಿಸಿದ್ದಾರೆ.
ಈ ಸಂದರ್ಭದಲ್ಲಿ ಎನ್ಸಿಡಿಎಫ್ಐ ನಿರ್ದೇಶಕರಾದ ಮಂಗಲ್ ಜೀತ್ ರಾಯ್, ಶ್ಯಾಮಲ್ ಭಾಯಿ ಪಟೇಲ್, ಕೆ.ಎಸ್.ಮಣಿ, ನರೀಂದರ್ ಸಿಂಗ್ ಶರ್ಗಿಲ್ಲ್, ಎಸ್. ರಘುರಾಮ್, ಸಮೀರಕುಮಾರ ಫರೀದ, ಎಂಡಿ ಶ್ರೀನಿವಾಸ ಸಜ್ಜಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
*ಫೋಟೋ ಕ್ಯಾಪ್ಶನ್ : ೮ ಬಿಜಿಎಂ- ೦೧*
*ಬೆಳಗಾವಿ*- ಗುಜರಾತಿನ ಆನಂದ್ ನಗರದಲ್ಲಿ ನಡೆಯುತ್ತಿರುವ ಎನ್ಸಿಡಿಎಫ್ಐನ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಸಂಸ್ಥೆಯ ನಿರ್ದೇಶಕರೂ ಆಗಿರುವ ಶಾಸಕ, ಎನ್ಸಿಡಿಎಫ್ಐ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರು ಚೇರಮನ್ ಡಾ. ಮೀನೇಶ್ ಭಾಯಿ ಷಾ ಅವರನ್ನು ಸತ್ಕರಿಸಿ ಬೆಳ್ಳಿಯ ಗಣೇಶನ ವಿಗ್ರಹವನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರು ಉಪಸ್ಥಿತರಿದ್ದರು.