ಜಿಲ್ಲೆಯ ಪ್ರತಿ ಗ್ರಾಮಗಳನ್ನು ಮಾದರಿಯನ್ನಾಗಿ ಮಾಡುವೆ : ಲಖನ್ ಜಾರಕಿಹೊಳಿ
ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಆಯ್ಕೆಯಾದ ಬಳಿಕ ಗ್ರಾಮೀಣ ಭಾಗದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು. ಹೆಚ್ಚೆಚ್ಚು ಅನುದಾನ ತಂದು ಪ್ರತಿಯೊಂದು ಹಳ್ಳಿ ಹಳ್ಳಿಗಳಲ್ಲೂ ಸಿಸಿ ರಸ್ತೆ, ಚರಂಡಿ ನಿರ್ಮಾಣ ಮಾಡಿ ಮಾದರಿ ಹಳ್ಳಿಗಳನ್ನಾಗಿ ರೂಪಿಸಲಾಗುವುದು ಎಂದು ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಹೇಳಿದರು.
ಬೆಳಗಾವಿ ತಾಲ್ಲೂಕಿನ ಯಳ್ಳೂರ ಗ್ರಾಮ ಪಂಚಾಯತ್ ಸದಸ್ಯರನ್ನು ಭೇಟಿಯಾಗಿ ಮತಯಾಚಿಸಿದ ಬಳಿಕ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದಿಂದ ಈಗ ಗ್ರಾಮ ಪಂಚಾಯತ್‍ಗಳಿಗೆ ಬರುತ್ತಿರುವ ಅನುದಾನಕ್ಕಿಂತಲೂ ಅತಿ ಹೆಚ್ಚು ಅನುದಾನ ತರಲು ವಿಶೇಷ ಪ್ರಯತ್ನ ಮಾಡಲಾಗುವುದು. ಗ್ರಾಮ ಪಂಚಾಯತ್‍ನ ಪ್ರತಿಯೊಂದು ವಾರ್ಡ್‍ನಲ್ಲಿಯೂ ಆಯಾ ಸದಸ್ಯರು ಅಭಿವೃದ್ಧಿ ಕೆಲಸಗಳನ್ನು ಮಾಡಲು ಬೇಕಾಗುವ ಅಗತ್ಯ ಅನುದಾನ ಸರ್ಕಾರದಿಂದ ತರುವ ಜವಾಬ್ದಾರಿ ನನ್ನದು ಎಂದು ಹೇಳಿದರು.
ಜನರ ಸೇವೆ ಸದಾ ದುಡಿಯುತ್ತಿರುವ ಜಾರಕಿಹೊಳಿ ಕುಟುಂಬ ಇನ್ನು ಮುಂದೆಯೂ ಜನರೊಂದಿಗೆ ಮುಂದೆ ಸಾಗಲಾಗುವುದು. ಯಾವುದೇ ಕಾರಣಕ್ಕೂ ಯಾರೂ ಆಸೆ-ಆಮಿಷಗಳಿಗೆ ಒಳಗಾಗಬಾರದು. ನಾನು ಯಾವುದೇ ಪಕ್ಷದ ಪರವಾಗಿ ನಿಲ್ಲುವ ವ್ಯಕ್ತಿ ಅಲ್ಲ. ಪಕ್ಷೇತರನಾಗಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಪಕ್ಷಾತೀತವಾಗಿ ಎಲ್ಲ ಸೇವೆ ಮಾಡುತ್ತೇನೆ. ಅಮೂಲ್ಯವಾದ ಮತ ನೀಡಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಗ್ರಾಮ ಪಂಚಾಯತಿ ಅಧ್ಯಕ್ಷ ಸತೀಶ ಬಾಲಕೃಷ್ಣ ಪಾಟೀಲ, ಉಪಾಧ್ಯಕ್ಷೆ ಲಕ್ಷ್ಮೀ ಮಾಸೇಕರ, ಪರುಶರಾಮ ಪರೀಟ, ರಾಕೇಶ ಪರೀಟ, ವಿಲಾಸ ಬೆಡ್ರೆ, ಪ್ರಮೋದ ಪಾಟೀಲ, ದಯಾನಂದ ಉಗಾಡೆ, ರಮೇಶ ಮೆಣಸೆ, ಜ್ಯೋತಿಬಾ ಚೌಗುಲೆ, ಶಶಿಕಾಂತ ಧುಳಜೆ, ರಾಜು ಡೋಣೆನ್ನವರ, ಅರವಿಂದ ಪಾಟೀಲ, ಸುವರ್ಣಾ ಬಿಜಗರಕರ, ರೂಪಾ ಪುಣೆನ್ನವರ, ಮನಿμÁ ಘಾಡಿ, ಪಾರ್ವತಿ ರಜಪೂತ, ಸೋನಾಲಿ ಯಳ್ಳೂರಕರ, ಶಾಲೀನಿ ಪಾಟೀಲ, ವನಿತಾ ಪರೀಟ ಸೇರಿದಂತೆ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು.
———————————————————-
ಜನಸೇವೆಗಾಗಿಯೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವೆ : ಲಖನ್ ಜಾರಕಿಹೊಳಿ
ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಒಂದು ಮತ, ಒಂದು ಲಕ್ಷ ಮತಕ್ಕೆ ಸಮಾನ. ನಿಮ್ಮ ಒಂದೊಂದು ಮತ ಅಮೂಲ್ಯವಾದದ್ದು. ಹೀಗಾಗಿ ಆಯ್ಕೆಯಾದ ಬಳಿಕ ನಿಮ್ಮೊಂದಿಗೆ ನಾನು ನಿರಂತರವಾಗಿ ಇರುತ್ತೇನೆ ಎಂದು ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಅಭಯ ನೀಡಿದರು.
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಹಿಂಡಲಗಾ ಗ್ರಾಮದಲ್ಲಿ ಭಾನುವಾರ ನಡೆದ ವಿವಿಧ ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳ ಸಭೆಯಲ್ಲಿ ಅವರು ಮತದಾರರನ್ನು ಉದ್ದೇಶಿಸಿ ಮಾತನಾಡಿದರು.
ಈ ಚುನಾವಣೆಯಲ್ಲಿ ನಾನು ಬಿಜೆಪಿ ಮತ್ತು ಕಾಂಗ್ರೆಸ್ ಟಿಕೆಟ್ ಪಡೆಯದೇ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ನಿಂತಿದ್ದೇನೆ. ಜನ ಸೇವೆ ಮಾಡುವ ಒಂದೇ ಉದ್ದೇಶ ನನ್ನದು. ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿಶೇಷವಾಗಿ ಗಮನಹರಿಸಲಾಗುವುದು. ಎಲ್ಲ ಕಡೆಗೂ ಅಭಿವೃದ್ಧಿ ಮಂತ್ರ ಜಪಿಸಲಾಗುವುದು. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡಲಾಗುವುದು ಎಂದು ಲಖನ್ ಜಾರಕಿಹೊಳಿ ಹೇಳಿದರು.
ಗೋಕಾಕ ತಾಲೂಕು ಈಗಾಗಲೇ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದೆ. ಜಿಲ್ಲೆಯ ಅನೇಕ ಕ್ಷೇತ್ರಗಳತ್ತ ಗಮನಹರಿಸಿ ಅಭಿವೃದ್ಧಿ ಮಾಡುವುದೇ ನಮ್ಮ ಸಂಕಲ್ಪವಾಗಿದೆ. ಇನ್ನು ಮುಂದೆ ಬೆಳಗಾವಿ ಸುತ್ತಮುತ್ತಲಿನ ಜನರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಗೋಕಾಕಕ್ಕೆ ಬರುವ ಅಗತ್ಯವಿಲ್ಲ. ಬೆಳಗಾವಿಯ ನಮ್ಮ ಕಚೇರಿಗೆ ಬಂದರೆ ಎಲ್ಲ ಸಮಸ್ಯೆಗೆ ಸ್ಪಂದಿಸಲಾಗುವುದು. ಏನೇ ಕೆಲಸ ಇದ್ದರೂ ನೇರವಾಗಿ ಬಂದು ನಮ್ಮನ್ನು ಭೇಟಿಯಾಗಬೇಕು. ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿಯ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು. ಆರು ವರ್ಷಗಳ ಕಾಲಾವಧಿಯಲ್ಲಿ ನನ್ನ ಕೈಲಾಗದಷ್ಟು ಕೆಲಸ ಮಾಡಿ ಕೊಡಲಾಗುವುದು. ಸ್ಥಳಿಯ ಸಂಸ್ಥೆಗಳ ಅನುದಾಣ ಹೆಚ್ಚಿಸಿ ಗ್ರಾಮಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು ಎಂದು ಹೇಳಿದರು.
ಹಿಂಡಲಗಾ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗೇಶ ಮನ್ನೋಳಕರ ಮಾತನಾಡಿ, ಕಾಂಗ್ರೆಸ್ ಸೋಲಿಸಬೇಕಾದರೆ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರನ್ನು ಗೆಲ್ಲಿಸಬೇಕಾಗಿದೆ. ಒಂದು ವೇಳೆ ಲಖನ್ ಜಾರಕಿಹೊಳಿ ಈ ಚುನಾವಣೆಗೆ ಸ್ಪರ್ಧಿಸದಿದ್ದರೆ ಕಾಂಗ್ರೆಸ್ ಅಭ್ಯರ್ಥಿ ಮನೆಯಲ್ಲಿಯೇ ಕುಳಿತು ಆಯ್ಕೆ ಆಗಿರುತ್ತಿದ್ದರು. ಕಾಂಗ್ರೆಸ್ ಮುಕ್ತ ಮಾಡಬೇಕಾಗಿದೆ ಎಂದರು.
ವಿಧಾನಸಭಾ ಕ್ಷೇತ್ರದ ಇಂಗ್ಲಿμï ಮಾಧ್ಯಮ ಶಾಲೆಗಳು ಇಲ್ಲ. ನಗರ ಪ್ರದೇಶದಲ್ಲಿ ಇರುವ ಖಾಸಗಿ ಶಾಲೆಗಳಿಗೆ ಲಕ್ಷಾಂತರ ರೂ. ಶುಲ್ಕ ಇರುವುದರಿಂದ ಮಕ್ಕಳನ್ನು ಇಂಥ ಶಾಲೆಗಳಿಗೆ ಸೇರಿಸುವುದು ಕಷ್ಟಕರವಾಗಿದೆ. ಆದ್ದರಿಂದ ಲಖನ್ ಜಾರಕಿಹೊಳಿ ಅವರು ಆಯ್ಕೆಯಾದ ಬಳಿಕ ಈ ಭಾಗದ ಹಿಂಡಲಗಾದಲ್ಲಿ ಸರ್ಕಾರಿ ಇಂಗ್ಲಿμï ಮಾಧ್ಯಮ ಶಾಲೆಯನ್ನು ಒಂದು ಎಕರೆ ಜಾಗದಲ್ಲಿ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಾಗೇಶ ಮನ್ನೋಳಕರ ಮನವಿ ಮಾಡಿದರು.
ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎಸ್.ಎಸ್. ಮುಗಳಿ ಮಾತನಾಡಿ, ಮೇಲ್ಮನೆಗೆ ಲಖನ್ ಜಾರಕಿಹೊಳಿ ಅವರನ್ನು ಆಯ್ಕೆ ಮಾಡಿ ಕಳುಹಿಸಬೇಕಾಗಿದೆ. ವಿರೋಧಿಗಳ ಬಣ್ಣದ ಮಾತುಗಳಿಗೆ ಯಾರೂ ಮರುಳಾಗಬಾರದು. ಆಸೆ-ಆಮಿಷಳಿಗೆ ಯಾರೂ ಬಲಿಯಾಗಬಾರದು. ನಿಮ್ಮ ಬೆನ್ನಿಗೆ ನಿಂತು ಕೆಲಸ ಮಾಡುತ್ತಿರುವ ಜಾರಕಿಹೊಳಿ ಕುಟುಂಬಕ್ಕೆ ಸಹಾಯ ಮಾಡಬೇಕು ಎಂದರು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಟಿ.ಆರ್. ಕಾಗಲ್, ಮಹಾನಗರ ಪಾಲಿಕೆ ಸದಸ್ಯೆ ವೈಶಾಲಿ ಭಾತಕಾಂಡೆ, ಪುಂಡಲೀಕ ಪಾವಸೆ, ಅಪ್ಪಾ ಜಾಧವ, ಎಂ.ಆರ್. ಪಾಟೀಲ, ಕಲ್ಲಪ್ಪ ಗಿರೆನ್ನವರ, ಪೃಥ್ವಿ ಸಿಂಗ್ ಫೌಂಡೇಶನ್ ಸದಸ್ಯ ಜಸವೀರ ಸಿಂಗ್ ಹೀಗೆ ಹಿಂಡಲಗಾ, ಅಂಬೇವಾಡಿ, ಉಚಗಾಂವ, ಕುದ್ರೇಮನಿ, ಬೆಳಗುಂದಿ, ಬೆನಕನಹಳ್ಳುಇ, ಕಂಗ್ರಾಳಿ ಕೆಎಚ್, ಕಂಗ್ರಾಳಿ ಬಿಕೆ, ಧಾಮಣೆ, ನಂದಿಹಳ್ಳಿ, ದೇಸೂರ, ಯಳ್ಳೂರ ಕಿಣಯೇ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.