Breaking News
Home / Recent Posts / ಮತ್ತಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ ನೈಸರ್ಗಿಕ ಕೃಷಿಯ ಸಮಾವೇಶ,ಪೂರ್ವಜರು ತಿಪ್ಪೆಗೊಬ್ಬರ ಬಳಸಿ ಜವಾರಿ ಧಾನ್ಯಗಳನ್ನು ಬೆಳೆದು ಕೃಷಿ ಮಾಡುತ್ತಿದ್ದರು:ಸಂಸದ ಕಡಾಡಿ

ಮತ್ತಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ ನೈಸರ್ಗಿಕ ಕೃಷಿಯ ಸಮಾವೇಶ,ಪೂರ್ವಜರು ತಿಪ್ಪೆಗೊಬ್ಬರ ಬಳಸಿ ಜವಾರಿ ಧಾನ್ಯಗಳನ್ನು ಬೆಳೆದು ಕೃಷಿ ಮಾಡುತ್ತಿದ್ದರು:ಸಂಸದ ಕಡಾಡಿ

Spread the love

ಮತ್ತಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ ನೈಸರ್ಗಿಕ ಕೃಷಿಯ ಸಮಾವೇಶ,ಪೂರ್ವಜರು ತಿಪ್ಪೆಗೊಬ್ಬರ ಬಳಸಿ ಜವಾರಿ ಧಾನ್ಯಗಳನ್ನು ಬೆಳೆದು ಕೃಷಿ ಮಾಡುತ್ತಿದ್ದರು:ಸಂಸದ ಕಡಾಡಿ

ಬೆಳಗಾವಿ: ಹಿಂದಿನ ದಿನಮಾನಗಳಲ್ಲಿ ನಮ್ಮ ಪೂರ್ವಜರು ತಿಪ್ಪೆಗೊಬ್ಬರ ಬಳಸಿ ಜವಾರಿ ಧಾನ್ಯಗಳನ್ನು ಬೆಳೆದು ಕೃಷಿ ಮಾಡುತ್ತಿದ್ದರು. ಆ ಕಾಲದಲ್ಲಿ ದೇಶದ ಜನಸಂಖ್ಯೆಗೆ ಬೇಕಾಗುವ ಆಹಾರವನ್ನು ಪೂರೈಸಲು ತೊಂದರೆಯಾದಾಗ ವಿದೇಶಗಳಿಂದ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳಲಾಯಿತು ಎಂದು ರಾಜ್ಯಸಭಾ ಸದಸ್ಯ ಹಾಗೂ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.

ಗುರುವಾರ ಡಿ.16 ರಂದು ರಾಷ್ಟçಮಟ್ಟದಲ್ಲಿ ನೈಸರ್ಗಿಕ ಕೃಷಿ ಸಮಾವೇಶದ ಹಿನ್ನಲೆಯಲ್ಲಿ ಸಮೀಪದ ಮತ್ತಿಕೊಪ್ಪದ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ ನೈಸರ್ಗಿಕ ಕೃಷಿ ಮತ್ತು ರೈತರ, ವಿಜ್ಞಾನಿಗಳ ಸಂವಾದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು 1960 ರ ದಶಕದಲ್ಲಿ ಹಸಿರು ಕ್ರಾಂತಿಯನ್ನು ಮಾಡಿದಾಗ ಹೈಬ್ರಿಡ್ ತಳಿಗಳನ್ನು ಬೆಳೆಯಲು ಪ್ರಾರಂಭಿಸಿದ ನಂತರ ರೈತರು ಬಳಸುವ ರಾಸಾಯನಿಕ ಗೊಬ್ಬರದ ಪ್ರಮಾಣ ಅಧಿಕಗೊಂಡು ಮಣ್ಣಿನ ಗುಣಧರ್ಮಗಳು ನಾಶವಾಗಿ ಪೋಷಕಾಂಶಗಳ ಬಳಕೆ ಸಾಮರ್ಥ್ಯ ಕಡಿಮೆ ಆಗುವುದರೊಂದಿಗೆ ವಿಷಪೂರಿತ ಆಹಾರವನ್ನು ಬೆಳೆಯುವಂತಾಯಿತು ಎಂದು ವಿಷಾದ ವ್ಯಕ್ತ ಪಡಿಸಿದ ಅವರು ಇದರಿಂದ ರೋಗಗಗಳು ಉಲ್ಬಣಗೊಂಡು ದೇಶದ ಜನರು ಆಸ್ಪತ್ರೆಗಳಿಗೆ ಹೆಚ್ಚು ಖರ್ಚು ಮಾಡುವ ಪ್ರಸಂಗ ಉಂಟಾಗಿದೆ ಎಂದರು.

ಪಾರAಪರಿಕ ಸಾವಯವ ಕೃಷಿ, ನೈಸರ್ಗಿಕ ಕೃಷಿಯು ಮರಳಿ ಅಸ್ತಿತ್ವಕ್ಕೆ ಬಂದಿದೆ. ಆದ್ದರಿಂದ ವಿಷಮುಕ್ತ ಆಹಾರ, ರೋಗ ಮುಕ್ತ ಜೀವನ ಹಾಗೂ ವ್ಯವಸಾಯದ ಖರ್ಚನ್ನು ಕಡಿಮೆ ಮಾಡುವ ಉದ್ದೇಶದಿಂದ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಷ್ಟç ಮಟ್ಟದಲ್ಲಿ ನೈಸರ್ಗಿಕ ಕೃಷಿಯ ಸಮಾವೇಶವನ್ನು ಆಯೋಜಿಸಿ ಪ್ರತಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಒಂದು ಗ್ರಾಮದಲ್ಲಿ ನೈಸರ್ಗಿಕ ಕೃಷಿಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಕರೆ ನೀಡಿದ್ದಾರೆ. ಆದ್ದರಿಂದ ರೈತರು ಕಡಿಮೆ ಖರ್ಚಿನ ಜೀವಾಮೃತ, ಬೀಜಾಮೃತ ಇತ್ಯಾದಿಗಳನ್ನು ತಯಾರು ಮಾಡಿ ಬಳಸಬೇಕೆಂದು ರೈತರಿಗೆ ಕರೆ ನೀಡಿದರು.

ಕೇಂದ್ರದ ಮುಖ್ಯಸ್ಥೆ ಶ್ರೀಮತಿ ಶ್ರೀದೇವಿ ಬ. ಅಂಗಡಿ ಪ್ರಾಸ್ತಾವಿಕ ಮಾತನಾಡಿ, ಅಧಿಕ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಿಂದ ಭೂಮಿಯಲ್ಲಿರುವ ಉಪಯುಕ್ತ ಜೀವರಾಶಿಗಳ ಸಂಖ್ಯೆ ಕಡಿಮೆಯಾಗುವುದಲ್ಲದೆ ಪರಿಸರದ ಮಾಲಿನ್ಯ ಉಂಟಾಗುತ್ತಿದೆ. ಆದ್ದರಿಂದ ಕೇಂದ್ರದಲ್ಲಿ ರೈತರ ಮತ್ತು ವಿಜ್ಞಾನಿಗಳ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಿ ರೈತರಿಗೆ ನೈಸರ್ಗಿಕ ಕೃಷಿಯ ಕುರಿತು ಮಾಹಿತಿ ನೀಡಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ನೈಸರ್ಗಿಕ ಕೃಷಿಯ ಕುರಿತು ರಾಷ್ಟçದ ರೈತರನ್ನು ಉದ್ದೇಶಿಸಿ ಮಾತನಾಡಿದ ಕಾರ್ಯಕ್ರಮದ ನೇರಪ್ರಸಾರವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಸೋಮೇಶ್ವರ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ರಾಜು ಕುಡಸೊಮಣ್ಣವರ, ಪ್ರಗತಿಪರ ರೈತ ನಿಂಗನಗೌಡ ದೊಡಗೌಡರ ಹಾಗೂ ಕಾಡಾ ಪ್ರಾಧಿಕಾರದ ಸಹಾಯಕ ಕೃಷಿ ನಿರ್ದೇಶಕಿ ಗೀತಾ ಕಡಪಟ್ಟಿ ಉಪಸ್ಥಿತರಿದ್ದರು.

ನೈಸರ್ಗಿಕ ಕೃಷಿ ಕುರಿತು ಆಯೋಜಿಸಿದ ರೈತರ ಮತ್ತು ವಿಜ್ಞಾನಿಗಳ ಸಂವಾದ ಕಾರ್ಯಕ್ರಮದಲ್ಲಿ 116 ರೈತರು, 83 ವಿದ್ಯಾರ್ಥಿಗಳು ಹಾಗೂ ಕೇಂದ್ರದ ವಿಜ್ಞಾನಿಗಳಾದ ಡಾ. ಎಸ್. ಎಸ್. ಹಿರೇಮಠ, ಎಸ್. ಎಮ್. ವಾರದ, ಜಿ. ಬಿ. ವಿಶ್ವನಾಥ, ಪ್ರವೀಣ ಯಡಹಳ್ಳಿ, ಶಂಕರಗೌಡ ಪಾಟೀಲ, ವಿನೋದ ಕೋಚಿ,  ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಶ್ರೀಕರ ಕುಲಕರ್ಣಿ ಹಾಗೂ ಸಿಬ್ಬಂದಿ ಭಾಗವಹಿಸಿ ಚರ್ಚಿಸಿದರು ಹಾಗೂ ಪ್ರಧಾನ ಮಂತ್ರಿಗಳ ಸಂದೇಶದ ನೇರ ಪ್ರಸಾರವನ್ನು ವಿಕ್ಷೀಸಿದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ