ಕಾಮನ್ ಸರ್ವಿಸ್ ಸೆಂಟರ್ ಜಿಲ್ಲಾ ಕಾರ್ಯಲಯದ ಉದ್ಘಾಟನೆ
ಬೆಳಗಾವಿ: ನಗರದಲ್ಲಿ ಹೊಸದಾಗಿ ಕಾಮನ್ ಸರ್ವಿಸ್ ಸೆಂಟರ್ ಜಿಲ್ಲಾ ಕಾರ್ಯಲಯದ ಉದ್ಘಾಟನಾ ಸಮಾರಂಭ ಮಂಗಳವಾರ ಮುಂಜಾನೆ 10 ಗಂಟೆಗೆ ನಗರದ ಶಿವಾಲಯ ರಸ್ತೆ ಸದಾಶಿವ ನಗರದಲ್ಲಿ ಜರುಗಲಿದೆ ಎಂದು ಜಿಲ್ಲಾ ವ್ಯವಸ್ಥಾಪಕ ಸಿಎಸ್‍ಸಿ ವಿರೇಶ ಪುರಾಣಿಕ ತಿಳಿಸಿದ್ದಾರೆ.
ಎಂ ಜಿ ಹಿರೇಮಠ ಜಿಲ್ಲಾಧಿಕಾರಿಗಳು ಬೆಳಗಾವಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ವಿಜಯ ವಜ್ರಂಗಿ ರಾಜ್ಯ ಮುಖ್ಯಸ್ಥ ಸಿ ಎಸ್‍ಸಿ ಬೆಂಗಳೂರು ವಹಿಸುವರು, ವಿಶೇಷ ಆಹ್ವಾನಿತರಾಗಿ ದರ್ಶನ ಎಚ್ ವಿ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ ಬೆಳಗಾವಿ. ಮುಖ್ಯ ಅತಿಥಿಗಳಾಗಿ ರವಿ ಬಂಣಾರೆಪ್ಪನ್ನವರ ಜಿಲ್ಲಾ ಯೋಜನಾ ಅಭಿವೃದ್ದಿ ಅಧಿಕಾರಿಗಳು ಜಿಲ್ಲಾ ಪಂಚಾಯತ ಬೆಳಗಾವಿ, ಡಾ. ಸಂಜಯ ಡುಮ್ಮಗೋಳ ಆರೋಗ್ಯ ಅಧಿಕಾರಿಗಳು ಮಹಾನಗರ ಪಾಲಿಕೆ, ಬೆಳಗಾವಿ ಆಗಮಿಸುವರು ಎಂದು ಜಿಲ್ಲಾ ವ್ಯವಸ್ಥಾಪಕರು ಸಿ ಎಸ್ ಸಿ ಕಿರಣಕುಮಾರ ಜೋಶಿ ಮತ್ತು ಮಲ್ಲಿಕಾರ್ಜುನ ಕರೆರುದ್ರನ್ನವರ ತಿಳಿಸಿದ್ದಾರೆ.
IN MUDALGI Latest Kannada News