Breaking News
Home / ಬೆಳಗಾವಿ / ಬೆಟಗೇರಿ ಗ್ರಾಮ ಪಂಚಾಯತಿ ಗ್ರಂಥಾಲಯಕ್ಕೆ ಪುಸ್ತಕ ಕೊಡುಗೆ

ಬೆಟಗೇರಿ ಗ್ರಾಮ ಪಂಚಾಯತಿ ಗ್ರಂಥಾಲಯಕ್ಕೆ ಪುಸ್ತಕ ಕೊಡುಗೆ

Spread the love

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯ ಮುಖ್ಯೋಪಾಧ್ಯಯರು ಸ್ಥಳೀಯ ಗ್ರಾಮ ಪಂಚಾಯತ ಗ್ರಂಥಾಲಯ ಮತ್ತು ಅರಿವು ಕೇಂದ್ರಕ್ಕೆ ಶಾಲಾ ಮಕ್ಕಳ ಓದಿಗೆ ಪ್ರಸಕ್ತ ವರ್ಷದ 6 ಮತ್ತು 7 ನೇ ತರಗತಿಯ ಪಠ್ಯ ಪುಸ್ತಕಗಳನ್ನು ನ.4 ರಂದು ಗ್ರಂಥಾಲಯ ಮತ್ತು ಅರಿವು ಕೇಂದ್ರದ ಮೇಲ್ವಿಚಾರಕರಿಗೆ ಉಚಿತವಾಗಿ ನೀಡಿದರು.

ಈ ವೇಳೆ ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯ ಮುಖ್ಯೋಪಾಧ್ಯಯ ಸಿದ್ದಪ್ಪ ಸನದಿ ಮಾತನಾಡಿ, ಇಲ್ಲಿಯ ಶಾಲಾ ಮಕ್ಕಳ ಮತ್ತು ಯುವಕರ ಓದಿಗೆ ಮತ್ತು ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಲು ಇಲ್ಲಿಯ ಗ್ರಂಥಾಲಯ ಮತ್ತು ಅರಿವು ಕೇಂದ್ರ ಸಹಕಾರಿಯಾಗಿದೆ ಎಂದರು.
ಉಭಯ ಶಾಲೆಯ ಮುಖ್ಯೋಪಾಧ್ಯರಾದ ಎಸ್.ಬಿ. ಸನದಿ, ವೈ.ಸಿ. ಶೀಗಿಹಳ್ಳಿ, ಗ್ರಾಪಂ ಗ್ರಂಥಾಲಯ ಮತ್ತು ಅರಿವು ಕೇಂದ್ರದ ಮೇಲ್ವಿಚಾರಕ ಬಸವರಾಜ ಪಣದಿ ವಿಶ್ವನಾಥ ಶೀಗಿಹಳ್ಳಿ ಸೇರಿದಂತೆ ಸ್ಥಳೀಯರು ಇದ್ದರು.

 


Spread the love

About inmudalgi

Check Also

ಬೆಟಗೇರಿ ಗ್ರಾಮದಲ್ಲಿ ಢಂ..ಢಂ.ಢುಂ..ಡೊಳ್ಳು ಬಡಿತ

Spread the loveಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ನ.1ರಂದು ನಡೆದ 70ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ಗ್ರಾಮದ ಪ್ರಮುಖ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ