ಬೆಟಗೇರಿ:ಸದ್ಗುರು ಸಿದ್ಧಾರೂಢರು ಮಾನವನ ಅಜ್ಞಾನ ಕಳೆದು ಸುಜ್ಞಾನದ ಸನ್ನಮಾರ್ಗ ತೋರಿಸಿದ ಮಹಾನ್ ದೇವತಾ ಪುರುಷ, ಹುಬ್ಬಳ್ಳಿ ಸದ್ಗುರು ಶ್ರೀ ಸಿದ್ಧಾರೂಢರು ಶಿವನ ಅವತಾರಿಯಾಗಿದ್ದಾರೆ. ಪ್ರತಿಯೊಬ್ಬರೂ ಶಿವನಾಮಸ್ಮರಣೆ ಮಾಡಿ ಪರಮಾತ್ಮನ ಕೃಪೆಗೆ ಪಾತ್ರರಾಗಬೇಕು ಎಂದು ಬೆಟಗೇರಿ ಗ್ರಾಮದ ಪ್ರವಚನಕಾರ ಪುಂಡಲೀಕಪ್ಪ ಪಾರ್ವತೇರ ಹೇಳಿದರು.
ಬೆಟಗೇರಿ ಗ್ರಾಮದ ಸದ್ಗುರು ಶ್ರೀ ಸಿದ್ಧಾರೂಢರ ಸದ್ಭಭಕ್ತರು ಫೆ.26 ರಂದು ಹುಬ್ಬಳ್ಳಿ ಸಿದ್ಧಾರೂಢ ಮಠಕ್ಕೆ ಹಮ್ಮಿಕೊಂಡ ಪಾದಯಾತ್ರೆಗೆ ಸ್ಥಳೀಯ ಡಾ.ಬೆಟಗೇರಿ ಕೃಷ್ಣಶರ್ಮ ವೃತ್ತದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಮಹಾಶಿವರಾತ್ರಿ ಪ್ರಯುಕ್ತ ಹುಬ್ಬಳ್ಳಿ ಶ್ರೀಮಠಕ್ಕೆ ಸ್ಥಳೀಯ ಯುವಕರು ಸತತ 6ನೇ ವರ್ಷ ಪಾದಯಾತ್ರೆ ಹಮ್ಮಿಕೊಂಡಿರುವುದಕ್ಕೆ ಶುಭ ಹಾರೈಸಿದರು.
ಸ್ಥಳೀಯ ಸದ್ಗುರು ಶ್ರೀ ಸಿದ್ಧಾರೂಢರ ಪಾದಯಾತ್ರೆ ವ್ಯವಸ್ಥಾಪಕ ಸಮಿತಿ ಸಂಚಾಲಕ ಈಶ್ವರ ಬಳಿಗಾರ ಪ್ರಾಸ್ತಾವಿಕವಾಗಿ ಮಾತನಾಡಿ, ನೂರಾರು ಜನ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದು, ಬೆಟಗೇರಿ ಗ್ರಾಮದಿಂದ ಅಕ್ಕಿಸಾಗರ ಮಾರ್ಗವಾಗಿ ಯರಗಟ್ಟಿ, ಸವದತ್ತಿ, ಚಂದನಮಟ್ಟಿ ಗ್ರಾಮಗಳಲ್ಲಿ ವಾಸ್ತವ್ಯ ಮಾಡಿ, ಮಾ.1ರಂದು ಹುಬ್ಬಳ್ಳಿ ಸಿದ್ಧಾರೂಢರ ಮಠಕ್ಕೆ ಪಾದಯಾತ್ರೆ ತಲುಪಲಿದೆ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವವರಿಗೆ ಮಹಾಪ್ರಸಾದ ವ್ಯವಸ್ಥೆ ಇರುತ್ತದೆ ಎಂದರು.
ಗ್ರಾಪಂ ಉಪಾಧ್ಯಕ್ಷ ಬಸವಂತ ಕೋಣಿ, ಶ್ರೀಧರ ದೇಯಣ್ಣವರ, ಗೌಡಪ್ಪ ದೇಯಣ್ಣವರ, ಬಸವರಾಜ ಪಣದಿ, ಎಚ್.ಎನ್.ಬಾವಿಕಟ್ಟಿ, ಈರಪ್ಪ ದೇಯಣ್ಣವರ, ಮಲ್ಲಪ್ಪ ಪಣದಿ, ಸುರೇಶ ಬಾಣಸಿ, ಗೌಡಪ್ಪ ಮಾಳೇದ, ಶಿವಲಿಂಗ ಮುಧೋಳ, ಬಾಳಪ್ಪ ಕನೋಜಿ, ಸಿದ್ದಪ್ಪ ಹೊರಟ್ಟಿ, ಮಹಾದೇವ ಮಾಳೇದ, ಚಂದ್ರಪ್ಪ ಸಿದ್ನಾಳ, ದುಂಡಪ್ಪ ಕಂಬಿ, ಸತ್ತೆಪ್ಪ ಮಾಳೇದ, ಬಸಪ್ಪ ಬಳಿಗಾರ, ದುಂಡಪ್ಪ ಮಾಳೇದ, ಹನುಮಂತ ನೆರಿತಲಿ, ಸ್ಥಳೀಯ ಸದ್ಗುರು ಸಿದ್ಧಾರೂಢರ ಪಾದಯಾತ್ರೆ ವ್ಯವಸ್ಥಾಪಕ ಸಮಿತಿ ಸದಸ್ಯರು, ಯುವಕರು, ಸದ್ಗುರು ಸಿದ್ಧಾರೂಢರ ಭಕ್ತರು ಇದ್ದರು.
Check Also
ಖಾನಟ್ಟಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಉತ್ತಮ ಸಹಕಾರ ಸಂಘ ಪ್ರಶಸ್ತಿ
Spread the loveಮೂಡಲಗಿ : ಬೆಳಗಾವಿ ಜಿಲ್ಲಾ ಉತ್ತಮ ಸಹಕಾರಿ ಸಂಘ ಪ್ರಶಸ್ತಿ ಬೆಳಗಾವಿಯಲ್ಲಿ ನಡೆದ 71ನೇ ಅಖಿಲ ಭಾರತ …