ಬೆಟಗೇರಿ ಗ್ರಾಮದಲ್ಲಿ ಸಡಗರದಿಂದ ನಡೆದ ಶಿವನಾಮಸ್ಮರಣೆ ಕಾರ್ಯಕ್ರಮ
ಬೆಟಗೇರಿ:ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಮಾ.1ರಂದು ಬೆಟಗೇರಿ ಗ್ರಾಮದ ವಿವಿಧ ದೇವಾಲಯಗಳಲ್ಲಿ ಹಾಗೂ ಮನೆಗಳಲ್ಲಿಯೂ ಶಿವನ ಆರಾಧನೆ, ಶಿವ ನಾಮಸ್ಮರಣೆ, ಶಿವ ಭಜನೆ, ಜಾಗರಣೆ, ಮಹಾಪ್ರಸಾದ ಕಾರ್ಯಕ್ರಮಗಳು ಜರುಗಿದವು.
ಸ್ಥಳೀಯ ಈಶ್ವರ ಭಜನಾ ಮಂಡಳಿಯವರ ಸಹಯೋಗದಲ್ಲಿ ಗ್ರಾಮದ ಈಶ್ವರ ದೇವರ ದೇವಸ್ಥಾನದಲ್ಲಿ ಗದ್ಗುಗೆಗೆ ಅಭಿಷೇಕ, ಮಹಾಪೂಜೆ, ನೈವೇಧ್ಯ ಸಮರ್ಪನೆ, ಶಿವ ಭಜನೆ, ಜಾಗರಣೆ, ಈಶ್ವರಲಿಂಗಕ್ಕೆ ಅಲಂಕಾರ ಮಾಡುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಡಗರದಿಂದ ನಡೆದವು. ಭಕ್ತರು ಈಶ್ವರಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿ ಇಷ್ಟಾರ್ಥ ಪೂರೈಸಿಕೊಳ್ಳಲು ಪ್ರಾರ್ಥಿಸಿದರು. ಮಹಾಶಿವರಾತ್ರಿ ಹಬ್ಬವನ್ನು ಸಂಭ್ರಮ, ಭಕ್ತಿ ಭಾವದಿಂದ ಆಚರಿಸಲಾಯಿತು.
ಗ್ರಂಥಾಲಯ ಮೇಲ್ವಿಚಾರಕ ಬಸವರಾಜ ಪಣದಿ, ದೇವಸ್ಥಾನ ಅರ್ಚಕ ಗಂಗಪ್ಪ ಹೂಗಾರ, ಶಿವಲಿಂಗಪ್ಪ ಭಾಗೋಜಿ, ನಿಂಗಪ್ಪ ಕಂಬಿ, ಮಹಾದೇವಪ್ಪ ಬೆಟಗೇರಿ, ಚಿಂತಪ್ಪ ಸಿದ್ನಾಳ, ಸಿದ್ರಾಮ ಪಡಶೆಟ್ಟಿ, ವಿಠಲ ಕೋಣಿ, ಮನೋಹರ ಕತ್ತಿ, ಗೌಡಪ್ಪ ದೇಯಣ್ಣವರ, ಬಸವರಾಜ ನೀಲಣ್ಣವರ, ಶಿವನಪ್ಪ ಕಂಬಿ, ಈಡಪ್ಪ ರಾಮಗೇರಿ, ಶಿವಾನಂದ ಮುಧೋಳ, ಭಕ್ತರು, ಸ್ಥಳೀಯರು ಇದ್ದರು.