ಹಿರಿಯ ಪತ್ರಕರ್ತ ರವಿ ಬೆಳಗೆರೆಯವರು ತಡ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. 62 ವರ್ಷದ ರವಿ ಬೆಳಗೆರೆಯವರಿಗೆ ಮಧ್ಯರಾತ್ರಿ ಸುಮಾರು 12 ಗಂಟೆಗೆ ಹೃದಯಾಘಾತವಾದ ಹಿನ್ನೆಲೆಯಲ್ಲಿ, ಕೂಡಲೇ ಸ್ಥಳೀಯ ಖಾಸಗೀ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ .
ಕರಿಷ್ಮಾ ಹಿಲ್ಸ್ ನಲ್ಲಿರುವ ರವಿಬೆಳಗೆರೆ ಪಾರ್ಥಿವ ಶರೀರವನ್ನು ಪ್ರಾರ್ಥನಾ ಸ್ಕೂಲ್ ಗ್ರೌಂಡ್ ಗೆ ರವಾನೆ ಮಾಡಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು.
ಬಳ್ಳಾರಿಯಲ್ಲಿ ಜನಸಿದ್ದ ಬೆಳಗೆರೆಯವರು ಇತಿಹಾಸ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ್ದರು. 1995ರಲ್ಲಿ ಹಾಯ್ ಬೆಂಗಳೂರ್ ಪತ್ರಿಕೆ ಪ್ರಾರಂಭಿಸಿದರು. ಹಲವಾರು ಪುಸ್ತಕ ಬೆರೆದಿರುವ ಇವರು ಕಾದಂಬರಿಗಾರ, ಕವಿ, ಅಕ್ಷರ ಬ್ರಹ್ಮ ಎಂದೇ ಖ್ಯಾತಿ ಪಡೆದಿದ್ದರು.
ಪಾರ್ಥನಾ ಸ್ಕೂಲ್ ಮೂಲಕ ಅನೇಕರಿಗೆ ಉಚಿತ ಶಿಕ್ಷಣವನ್ನು ನೀಡಿದ ಕೀರ್ತಿ ರವಿ ಬೆಳಗೆರೆ ಅವರಿಗೆ ಸಲ್ಲುತ್ತದೆ.
ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅವರಿಗೆ ಮೊದಲ ಪತ್ನಿಯಿಂದ ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರ ಮತ್ತು ಎರಡನೇ ಪತ್ನಿಯಿಂದ ಒಬ್ಬ ಪುತ್ರನಿದ್ದು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.ಸಂಜೆ 4 ಗಂಟೆಗೆ ಅಂತ್ಯ ಸಂಸ್ಕಾರ ನೆರವೇರಲಿದೆ.