ಬೆಟಗೇರಿ:ಗ್ರಾಮದ ಗಣ್ಯರು, ಸ್ಥಳೀಯರ ಸಹಯೋಗದಲ್ಲಿ ತಾಲೂಕಾ ಶಿರಸ್ತದಾರ ಮೇಳೆಯ್ಯ ಹಿರೇಮಠ ಅವರು ಕಂದಾಯ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಇಚೆಗೆ ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಸೇವಾ ನಿವೃತ್ತಿ ಸನ್ಮಾನ ಕಾರ್ಯಕ್ರಮ ಮಾ.8ರಂದು ನಡೆಯಿತು.
ಗ್ರಂಥಾಲಯ ಮೇಲ್ವೆಚಾರಕ ಬಸವರಾಜ ಪಣದಿ ಅವರು ನಿವೃತ್ತಿ ಹೊಂದಿದ ತಾಲೂಕಾ ಶಿರಸ್ತದಾರ ಮೇಳೆಯ್ಯ ಹಿರೇಮಠ ಅವರ ಸಾರ್ಥಕ 42 ವರ್ಷಗಳ ಸೇವಾ ದಿನಗಳ ಕುರಿತು ಮಾತನಾಡಿದರು. ವಿಶ್ರಾಂತ ಗಾಮಲೆಕ್ಕಾಧಿಕಾರಿ ಪತ್ರೇಪ್ಪ ನೀಲಣ್ಣವರ ಅಧ್ಯಕ್ಷತೆ ವಹಿಸಿ, ಸೇವಾ ನಿವೃತ್ತಿ ಹೊಂದಿದ ತಾಲೂಕಾ ಶಿರಸ್ತದಾರ ಮೇಳೆಯ್ಯ ಹಿರೇಮಠ ದಂಪತಿಯನ್ನು ಗ್ರಾಮಸ್ಥರ ಪರವಾಗಿ ನೆನಪಿನ ಕಾಣಿಕೆ ನೀಡಿ, ಶಾಲು ಹೊದಿಸಿ ಸನ್ಮಾನಿಸಿದರು.
ಸಂಗಯ್ಯ ಹಿರೇಮಠ, ಈರಯ್ಯ ಹಿರೇಮಠ, ಎಂ.ಐ.ನೀಲಣ್ಣವರ, ಶ್ರೀಶೈಲ ಗಾಣಗಿ, ಬಸನಗೌಡ ದೇಯಣ್ಣವರ, ಪುಂಡಲೀಕಪ್ಪ ಪಾರ್ವತೇರ, ಶಿವಾಜಿ ನೀಲಣ್ಣವರ, ಲಕ್ಷ್ಮಣ ನೀಲಣ್ಣವರ, ರಾಮಣ್ಣ ಬಳಿಗಾರ, ಸುರೇಶ ಸಿದ್ನಾಳ, ಚಂದ್ರಶೇಖರ ನೀಲಣ್ಣವರ, ಬಸಪ್ಪ ದೇಯಣ್ಣವರ, ಗೌಡಪ್ಪ ದೇಯಣ್ಣವರ, ಮನೋಹರ ಕತ್ತಿ, ಯುವಕರು, ಗಣ್ಯರು, ಸ್ಥಳೀಯರು ಇದ್ದರು.
Check Also
ತಾಯಿಯ ಎದೆ ಹಾಲಿನ ಮಹತ್ವ” ಬಗ್ಗೆ ಜಾಗೃತಿ ಕಾರ್ಯಕ್ರಮ
Spread the love ಮೂಡಲಗಿ : ಮೊದಲ ಹೆರಿಗೆಯ ಬಳಿಕ ತಾಯಂದಿರಿಗೆ ಹಾಲುಣಿಸುವ ಪ್ರಕ್ರಿಯೆ ಬಗ್ಗೆ ತಿಳಿದಿರುವುದಿಲ್ಲ. ಮಕ್ಕಳಿಗೆ ಎದೆಹಾಲು …