ಬೆಟಗೇರಿ:ದೇಶದ ರಕ್ಷಣೆಯಲ್ಲಿ 17 ವರ್ಷಗಳ ಕಾಲ ಸೈನಿಕ ಸೇವೆ ಸಲ್ಲಿಸಿ, ಈಗ ಸೈನಿಕ ವೃತ್ತಿಯಿಂದ ನಿವೃತ್ತಿ ಹೊಂದಿ ಅಕ್ಕಿಸಾಗರ ಸ್ವಗ್ರಾಮಕ್ಕೆ ಆಗಮಿಸುತ್ತಿರುವ ನಿವೃತ್ತ ಯೋಧ ಚಂದ್ರಪ್ಪ ಮಾರುತಿ ನಾಯ್ಕರಗೆ ಸ್ಥಳೀಯ ಹಾಲಿ ಮತ್ತು ಮಾಜಿ ಸೈನಿಕರ ಬಳಗ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಭವ್ಯ ಸ್ವಾಗತ ಮೆರವಣಿಗೆ, ಸನ್ಮಾನ ಕಾರ್ಯಕ್ರಮ ಏ.2ರಂದು ಮುಂಜಾನೆ 9 ಗಂಟೆಗೆ ನಡೆಯಲಿದೆ.
ಸ್ಥಳೀಯ ಸಿದ್ಧಾರೂಢ ಮಠದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಸ್ವಾಗತ ಮೆರವಣಿಗೆ, ಪುರದೇವರ ದರ್ಶನ ಪೂಜೆ, ಪುಷ್ಪಾರ್ಪನೆ ನಡೆದ ಬಳಿಕ ನಿವೃತ್ತ ಸೈನಿಕ ಚಂದ್ರಪ್ಪ ಮಾರುತಿ ನಾಯ್ಕರಗೆ ಸನ್ಮಾನ, ಸಿಹಿ ವಿತರಣೆ ಜರುಗಲಿದೆ. ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ನಿವೃತ್ತ ಸೈನಿಕರು, ಗಣ್ಯರು, ಸ್ಥಳೀಯರು ಪಾಲ್ಗೊಳ್ಳಲಿದ್ದಾರೆ ಎಂದು ಅಕ್ಕಿಸಾಗರ ಗ್ರಾಮದ ಹಾಲಿ ಮತ್ತು ಮಾಜಿ