ಬೆಟಗೇರಿ:ಗ್ರಾಮದ ಶ್ರೀರಾಮ ವೃತ್ತದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀರಾಮ ಮೂರ್ತಿಯ ಅನಾವರಣ ಮತ್ತು ಹನುಮಾನ ಮೂರ್ತಿಯ ಪ್ರತಿಷ್ಠಾಪನೆ ಕಳಸಾರೋಹಣ, ದಾನಿಗಳಿಗೆ ಸತ್ಕಾರ ಹಾಗೂ ಅನ್ನಸಂತರ್ಪನೆ ಸಮಾರಂಭ ಮಾ.10ರಂದು ನಡೆಯಲಿದೆ.
ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀರಾಮ ಮತ್ತು ಹನುಮಾನ ಮೂರ್ತಿಗೆ ಮಹಾಭಿಷೇಕ, ಮಹಾಪೂಜೆ, ಹೋಮ ನಡೆದ ಬಳಿಕ ಸ್ಥಳೀಯ ಯಲ್ಲಾಲಿಂಗೇಶ್ವರ ಮಠದಿಂದ ಶ್ರೀ ಆಂಜನೇಯ ಮೂರ್ತಿಯ ಮತ್ತು ಕಳಸ, ಕುಂಭ, ಆರತಿ ಸಕಲ ವಾದ್ಯಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಜರುಗಿದ ನಂತರ ಶ್ರೀಗಳಿಂದ ಕಳಸಾರೋಹಣ ಮತ್ತು ಆಂಜನೇಯ ಮೂರ್ತಿಯ ಪ್ರತಿಷ್ಠಾಪನೆ ನೆರವೇರಲಿದೆ.
ಮುಂಜಾನೆ 10 ಗಂಟೆಗೆ ಶ್ರೀಗಳಿಂದ ಗಣ್ಯರಿಂದ ಸಮಾರಂಭ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ಉಡುಪಿ&ಮೆಕ್ಕಳಿಕೆ ರಾಜ್ಯ ರಾಜೇಶ್ವರ ಸಂಸ್ಥಾನ, ಅಖಿಲ ಭಾರತೀಯ ಕ್ಷಾತ್ರ ಧರ್ಮಪೀಠದ ವಿಶ್ವಾಧಿರಾಜ ತೀರ್ಥ, ಮನ್ನೀಕೇರಿ ವಿಜಯ ಸಿದ್ಧೇಶ್ವರ ಸ್ವಾಮೀಜಿ, ತಪಸಿ ರೇವಣಸಿದ್ಧೇಶ್ವರ ಮಠದ ಸುರೇಶ ಮಹಾರಾಜರು, ಸುಣಧೋಳಿ ಅಭಿನವ ಶಿವಾನಂದ ಸ್ವಾಮೀಜಿ, ಮಮದಾಪೂರ ಮೌನಮಲ್ಲಿಕಾರ್ಜುನ ಸ್ವಾಮೀಜಿ, ಬಸವನ ಸಂಗೊಳಗಿ&ತಳವಾಡ ಅಭಿನವ ಸಿದ್ಧರತ್ನ ಮದಗೊಂಡೇಶ್ವರ ಮಹಾರಾಜರು, ವೇದಮೂರ್ತಿ ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ಮುತ್ತೆಪ್ಪ ವಡೇರ, ಹಣಮಂತ ವಡೇರ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಕೆಎಂಎಫ್ ಅಧ್ಯಕ್ಷ & ಶಾಸಕ ಬಾಲಚಂದ್ರ ಜಾರಕಿಹೊಳಿ ಉದ್ಘಾಟನೆ, ದಿ. ಕರ್ನಾಟಕ ಪ್ರದೇಶ ಹಿಂದೂ ಕ್ಷತ್ರೀಯ ಸಂಘದ ರಾಜ್ಯಾಧ್ಯಕ್ಷ ರಾಮನಗೌಡ ಪಾಟೀಲ ಅಧ್ಯಕ್ಷತೆ, ದಿ. ಕರ್ನಾಟಕ ಪ್ರದೇಶ ಹಿಂದೂ ಕ್ಷತ್ರೀಯ ಸಂಘದ ಗೌರವಾಧ್ಯಕ್ಷ ಡಾ.ಎಚ್.ಎಫ್.ಯೋಗಪ್ಪನವರ, ಯುವ ಧುರೀಣ ಆನಂದರಾವ ನಾಯ್ಕ ಶ್ರೀರಾಮಮೂರ್ತಿ ಅನಾವರಣ ಮಾಡಲಿದ್ದು, ಕ್ಷತ್ರೀಯ ಸಮಾಜದ ಹಿರಿಯರಾದ ಯಲ್ಲಪ್ಪನಾಯ್ಕ ನಾಯ್ಕ, ಭೀಮನಾಯ್ಕ ನಾಯ್ಕ ಧರ್ಮ ಧ್ವಜಾರೋಹಣ, ಗೋಕಾಕ ಎನ್‍ಎಸ್‍ಎಫ್‍ದ ದಾಸಪ್ಪ ನಾಯ್ಕ, ನ್ಯಾಯವಾದಿ ವಿ.ಪಿ.ನಾಯ್ಕ ಭಿಮಶಿ ಪೂಜೇರ ನಾಮಫಲಕ ಅನಾವರಣ ನೆರವೇರಿಸಲಿದ್ದು, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ತಾಪಂ ಮತ್ತು ಗ್ರಾಪಂ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಜ್ಯೋತಿ ಬೆಳಗಿಸಲಿದ್ದಾರೆ.
ಸ್ಥಳೀಯ ಹಾಗೂ ವಿವಿಧ ಜಿಲ್ಲೆ, ತಾಲೂಕು, ನಗರ, ಹಳ್ಳಿಗಳ ಕ್ಷತ್ರೀಯ ಸಮಾಜದ ಹಿರಿಯ ನಾಗರಿಕರು, ಮುಖಂಡರು, ವಿವಿಧ ಸಂಘಟನೆ, ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ವಿವಿಧ ವಲಯದ ಅಧಿಕಾರಿಗಳು ಸಮಾಜ ಸೇವಕರು, ಗಣ್ಯರು ಸಮಾರಂಭಕ್ಕೆ ಮುಖ್ಯತಿಥಿಗಳಾಗಿ, ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಇಲ್ಲಿಯ ಶ್ರೀರಾಮ ಮೂರ್ತಿಯ ಅನಾವರಣ, ಹನುಮಾನ ಮೂರ್ತಿಯ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ, ದಾನಿಗಳಿಗೆ ಸತ್ಕಾರ, ಹಾಗೂ ಅನ್ನಸಂತರ್ಪನೆ ಸಮಾರಂಭದ ಆಯೋಜಕ ಸಮಿತಿ ಪ್ರಕಟನೆಗೆ ತಿಳಿಸಿದೆ.
Check Also
‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’
Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …