ಬೆಟಗೇರಿ:ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವ ಮತ್ತು ಮಾರ್ಗದರ್ಶನದಂತೆ ಬೆಟಗೇರಿ ಗ್ರಾಮದಲ್ಲಿ ಈಗಾಗಲೇ ವಿವಿಧ ಯೋಜನೆಗಳ ಮೂಲಕ ಸಾಕಷ್ಟು ಅಭಿವೃದ್ಧಿ ಪರ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಕೌಜಲಗಿ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಹೇಳಿದರು.
ಬೆಟಗೇರಿ ಗ್ರಾಮದಲ್ಲಿ ಬುಧವಾರ ಜು.7ರಂದು ಅತಿವೃಷ್ಠಿ ಯೋಜನೆಯ ಸುಮಾರು 2 ಲಕ್ಷ ರೂ.ಗಳ ಅನುದಾನದಡಿಯಲ್ಲಿ ಬೆಟಗೇರಿ-ಕೆಮ್ಮನಕೋಲ ಮುಖ್ಯ ರಸ್ತೆಯಿಂದ ಸುಮಾರು 2ಕಿ.ಮೀವರೆಗೆ ಬೆಟಗೇರಿ ಗ್ರಾಮದ ಅಡ್ಡಪಟ್ಟಿ ರಸ್ತೆ ದುರಸ್ತಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸ್ಥಳೀಯರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದರು.
ಗ್ರಾಪಂ ಉಪಾಧ್ಯಕ್ಷ ಬಸವಂತ ಕೋಣಿ, ವಿಜಯ ಹಿರೇಮಠ, ಸದಾಶಿವ ಕುರಿ, ರಾಮಣ್ಣ ಕತ್ತಿ, ಈಶ್ವರ ಬಳಿಗಾರ, ಬಸವರಾಜ ದೇಯಣ್ಣವರ, ಮಾಯಪ್ಪ ಬಾಣಿಸಿ, ಸುಭಾಷ ಕರೆಣ್ಣವರ, ಸಿದ್ದಪ್ಪ ಬಾಣಸಿ, ಪುಂಡಲೀಕ ಹಾಲನ್ನವರ, ಮುತ್ತೆಪ್ಪ ಕುರುಬರ, ಶ್ರೀಧರ ದೇಯಣ್ಣವರ, ಹನುಮಂತ ವಗ್ಗರ, ಬೀರಪ್ಪ ಕರೆನ್ನವರ, ಪ್ರಕಾಶ ಹಾಲನ್ನವರ, ವಿಠಲ ಬಾನಿ, ವಿಠಲ ಖಿಲಾರಿ, ಬಸವರಾಜ ನೀಲಣ್ಣವರ, ಇಲ್ಲಿಯ ರೈತರು, ಇತರರು ಇದ್ದರು.