Breaking News
Home / Recent Posts / ಕಿರು ಸಾಲ ಅರ್ಜಿ ಆಹ್ವಾನ

ಕಿರು ಸಾಲ ಅರ್ಜಿ ಆಹ್ವಾನ

Spread the love

 

ಕಿರು ಸಾಲ ಅರ್ಜಿ ಆಹ್ವಾನ

ಮೂಡಲಗಿ: ಪುರಸಭೆ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಸ್ಥರಿಗೆ ಪ್ರಧಾನ ಮಂತ್ರಿ ಆತ್ಮ ನಿರ್ಭರ ನಿಧಿ ಯೋಜನೆಯಡಿ ಕಿರು ಸಾಲ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಮಾರ್ಚ 31 ರ ಒಳಗಾಗಿ ಬ್ಯಾಂಕುಗಳಿಂದ ಇದೇ ಯೋಜನೆಯಡಿ 10,000-00 (ಹತ್ತು ಸಾವಿರ) ಸಾಲ ಪಡೆದು ಪೂರ್ಣ ಪ್ರಮಾಣದಲ್ಲಿ ಸಾಲ ಮರುಪಾವತಿ ಮಾಡಿದ ವ್ಯಾಪಾರಿಗಳಿಗೆ ಎರಡನೇ ಬಾರಿ 20,000-00 (ಇಪ್ಪತ್ತು ಸಾವಿರ) ಸಾಲ ನೀಡಲಾಗುತ್ತಿದೆ. ಅರ್ಜಿದಾರರು ಬ್ಯಾಂಕಿನಿಂದ ಸಾಲ ಮರುಪಾವತಿ ಮಾಡಿರುವ ಬಗ್ಗೆ ಪ್ರಮಾಣ ಪತ್ರ ಪಡೆದು ಆನ್‍ಲೈನ್ ಮೂಲಕ ದಿನಾಂಕ 20-07-2021 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಪುರಸಭೆಯ ಡೇ ನಲ್ಮ್ ಶಾಖೆಯನ್ನು ಸಂಪರ್ಕಿಸಬೇಕೆಂದು ಮುಖ್ಯಾಧಿಕಾರಿ ಡಿ. ಎಸ್.ಹರ್ದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 


Spread the love

About inmudalgi

Check Also

ವಿದ್ಯಾರ್ಥಿಗಳು ಜ್ಞಾನ ಮತ್ತು ಬುದ್ಧಿಯನ್ನು ಬೆಳಸಿಕೊಳ್ಳಬೇಕು – ಸದಾಶಿವ ಬೆಳಗಲಿ

Spread the love ಮೂಡಲಗಿ : ವಿದ್ಯಾರ್ಥಿಗಳು ಜ್ಞಾನ ಮತ್ತು ಬುದ್ಧಿಯನ್ನು ಬೆಳಸಿಕೊಳ್ಳಬೇಕು ಇಂದು ಸಾಮಾಜಿಕ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ