ಬೆಟಗೇರಿಯಲ್ಲಿ ವಿಜೃಂಭನೆಯಿಂದ ಕಾರ್ಗಿಲ್ ವಿಜಯೋತ್ಸವ ದಿನ ಆಚರಣೆ
ಬೆಟಗೇರಿ:ಗ್ರಾಮದ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸ್ಥಳೀಯ ಹಾಲಿ ಮತ್ತು ಮಾಜಿ ಸೈನಿಕರ ಬಳಗ ಹಾಗೂ ಯುವಬ್ರಿಗೇಡ್‍ದವರ ಸಹಯೋಗದಲ್ಲಿ ಜು.26ರಂದು ಕಾರ್ಗಿಲ್ ವಿಜಯೋತ್ಸವ ದಿನ ಆಚರಣೆ ಕಾರ್ಯಕ್ರಮ ನಡೆಯಿತು.
ಇಲ್ಲಿಯ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಮಾತನಾಡಿ, 23 ವರ್ಷಗಳ ಹಿಂದೆ ಕಾರ್ಗಿಲ್ ಯುದ್ಧ ನಡೆದು ಈ ದಿನದಂದು ಪಾಕಿಸ್ತಾನದ ವಿರುದ್ಧ ಭಾರತೀಯ ಯೋಧರು ವಿಜಯ ಪತಾಕೆ ಹಾರಿಸಿದರು. ಈ ಸಂದರ್ಭದಲ್ಲಿ ಹಲವಾರು ವೀರಯೋಧರು ದೇಶಕ್ಕಾಗಿ ತಮ್ಮ ಪ್ರಾಣ ನೀಡಿದರು. ಅವರ ತ್ಯಾಗ ಬಲಿದಾನಗಳಿಗೆ ಗೌರವ ನಮನ ಸಲ್ಲಿಸುವುದು ಈ ದಿನದ ವಿಶೇಷವಾಗಿದೆ ಎಂದರು.
ಸ್ಥಳೀಯ ಪ್ರೌಢ ಶಾಲೆಯ ಆವರಣದಲ್ಲಿರುವ ಭಾರತಾಂಬೆಯ ಮೂರ್ತಿಗೆ ಪೂಜೆ, ಪುಷ್ಪಾರ್ಪನೆ ಸಮರ್ಪಿಸಿದ ಬಳಿಕ ಇಪ್ಪತ್ತ್ಮೂರನೇಯ ಕಾರ್ಗಿಲ್ ವಿಜಯೋತ್ಸವದ ಸವಿನೆನಪಿಗಾಗಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು. ಕಾರ್ಗಿಲ್ ದಿನದ ನೆನಪಿಗಾಗಿ ಮಾಜಿ ಸೈನಿಕರಿಂದ ಸಸಿಗಳನ್ನು ನೆಡಲಾಯಿತು.
ಮಾಜಿ ಸೈನಿಕರಾದ ಮಹಾದೇವಪ್ಪ ಹಾದಿಮನಿ, ಶಂಕರ ತೊಂಡಿಕಟ್ಟಿ, ಮುತ್ತೆಪ್ಪ ನೀಲಣ್ಣವರ, ರವಿ ದೇಯಣ್ಣವರ, ಮಹಾದೇವ ಮಿಡಕನಟ್ಟಿ, ವಿಜಯ ಹಿರೇಮಠ, ಸುರೇಶ ವಡೇರ, ಈರಣ್ಣ ದಂಡಿನ, ರಾಘವೇಂದ್ರ ಬೆಟಗೇರಿ, ಪ್ರೌಢ ಶಾಲೆಯ ಶಿಕ್ಷಕರು, ಗಣ್ಯರು, ಯುವಕರು, ವಿದ್ಯಾರ್ಥಿಗಳು ಇದ್ದರು.
