Breaking News
Home / Recent Posts / ವಿಜೃಂಭನೆಯಿಂದ ನಡೆದ ಬೆಟಗೇರಿ ವೀರಭದ್ರೇಶ್ವರ ಜಾತ್ರಾಮಹೋತ್ಸವ

ವಿಜೃಂಭನೆಯಿಂದ ನಡೆದ ಬೆಟಗೇರಿ ವೀರಭದ್ರೇಶ್ವರ ಜಾತ್ರಾಮಹೋತ್ಸವ

Spread the love

*ಪುರವಂತರ ಭಕ್ತಿಯ ಪರಾಕಷ್ಟೇ ಪ್ರದರ್ಶನ

*ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ* ಉತ್ಸವ*

*ಗಣ್ಯರಿಗೆ ಸತ್ಕಾರ*

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜಾಗೃತ ವೀರಭದ್ರೇಶ್ವರ ದೇವರ ದೇವಾಲಯದಲ್ಲಿ ನೂಲ ಹುಣ್ಣಿಮೆ ಮತ್ತು ಶ್ರಾವಣ ಮಾಸದ ಪ್ರಯುಕ್ತ ಆ.19ರಂದು ಸ್ಥಳೀಯ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ ವಿಜೃಂಭನೆಯಿಂದ ನಡೆಯಿತು.
ಆ.19ರಂದು ಬೆಳಗ್ಗೆ 6ಗಂಟೆಗೆ ಇಲ್ಲಿಯ ವೀರಭದ್ರೇಶ್ವರ ದೇವರ ಗದ್ದುಗೆಗೆ ಮಹಾರುದ್ರಾಭಿಷೇಕ, ಮಹಾಪೂಜೆ ಜರುಗಿತು. ಮುಂಜಾನೆ 8ಗಂಟೆಗೆ ಆರತಿ, ಕರಡಿ ಮಜಲು, ವಾದ್ಯಮೇಳದೊಂದಿಗೆ ಪುರವಂತರಿಂದ ವೀರಭದ್ರೇಶ್ವರ ದೇವರ ಒಡಪು ಹೇಳುವ ಮೂಲಕ ವೀರಭದ್ರೇಶ್ವರ ದೇವರ ಮತ್ತು ಭದ್ರಕಾಳಿ ಮಾತೆಯ ಮೂರ್ತಿಗಳ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದ ಬಳಿಕ ಪುರಜನರಿಂದ ಪೂಜೆ, ನೈವೇದ್ಯ ಸಮರ್ಪನೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭನೆಯಿಂದ ನಡೆದು ಶ್ರೀಗಳಿಗೆ, ಗಣ್ಯರಿಗೆ ಸತ್ಕಾರ ಸಮಾರಂಭ, ಮಹಾಪ್ರಸಾದ ನಡೆದು ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.


ಬಾಕ್ಸ್ ಐಟಮ್:ಪುರವಂತರ ಭಕ್ತಿಯ ಪರಾಕಷ್ಟೇ ಪ್ರದರ್ಶನ: ಬೆಟಗೇರಿ ಗ್ರಾಮದಲ್ಲಿ ಸೋಮವಾರದoದು ನಡೆದ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವದಲ್ಲಿ ವೀರಭದ್ರೇಶ್ವರ ದೇವರ ಭಕ್ತರಾದ ಪುರವಂತರು ಆಹಾ..ಹಾ..ವೀರಾ..,ಆಹಾ..ಹಾ..ರುದ್ರಾ..,ಕಡೆ..ಕಡೆ…ಅಂತಾ ವೀರಭದ್ರೇಶ್ವರ ದೇವರ ಒಡಪು ಹೆಳುವ ಸನ್ನಿವೇಶ ರುದ್ರಾವೇಶದ ಭಕ್ತಿಯ ಪರಾಕಾಷ್ಟೇ ತೋರಿಸಿದರು. ಅಷ್ಟೇ ಅಲ್ಲದೆ ಪುರವಂತರು ತಮ್ಮ ಗಲ್ಲ ಹಾಗೂ ನಾಲಿಗೆಯಲ್ಲಿ ಶಸ್ತ್ರಗಳನ್ನು ಚುಚ್ಚಿಕೊಳ್ಳುವದು ರುದ್ರಾವೇಶದಿಂದ ಒಡಪು ಹೇಳುವದು, ಸೊಜಿಯಿಂದ ಶಸ್ತ್ರದ ಜೋತೆಗೆ ಸುಮಾರು ಉದ್ದದ ಶಸ್ತ್ರದಾರವನ್ನು ನಾಲಿಗೆ ಹಾಗೂ ಒಂದು ಗಲ್ಲದಿಂದ ಮತ್ತೊಂದಡೆ ತಗೆಯುವ ದೃಶ್ಯ ನೊಡುಗರ ಮೈ ನೆವರಿಳಿಸುವಂತಿತ್ತು. ಭಕ್ತಿಯಿಂದ ವಿವಿಧ ಕಸರತ್ತು ಪ್ರದರ್ಶನ ಮಾಡಿದ ಪುರವಂತರು ವೀರಭದ್ರೇಶ್ವರ ದೇವರ ಭಕ್ತಿ ಕೃಪಾರ್ಶೀವಾದಕ್ಕೆ ಪಾತ್ರರಾದರು.
ಗೋಕಾಕ ಶೂನ್ಯ ಸಂಪಾದನಾ ಮಠದ ಬಸವಪ್ರಭು ಸ್ವಾಮೀಜಿ, ಭಾಗೋಜಿಕೊಪ್ಪದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಜಿ ದಿವ್ಯ ಸಾನಿಧ್ಯ, ಸತ್ತಿಗೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ, ಗದಗ ಮಹಿಳಾ ಆಧ್ಯಾತ್ಮ ವಿದ್ಯಾಶ್ರಮದ ಶಿವಶರಣೆ ನೀಲಮ್ಮತಾಯಿ ಅಸುಂಡಿ ಸಮ್ಮುಖ ವಹಿಸಿ ಮಾತನಾಡಿದರು. ಸಂಗಯ್ಯ ಹಿರೇಮಠ, ಈರಯ್ಯ ಹಿರೇಮಠ ಜಾತ್ರಾ ಮಹೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.
ಇಲ್ಲಿಯ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ ಆಚರಣೆ ಸಮಿತಿ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗಣ್ಯರು, ರಾಜಕೀಯ ಮುಖಂಡರು, ಸಂತ ಶರಣರು, ಪುರವಂತರು, ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಭಕ್ತರು, ಗ್ರಾಮಸ್ಥರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.


Spread the love

About inmudalgi

Check Also

ಹಣಮಂತ ಹುಚರಡ್ಡಿ ನಿಧನ

Spread the loveಮೂಡಲಗಿ : ತಾಲ್ಲೂಕಿನ ಕಮಲದಿನ್ನಿ ಗ್ರಾಮದ ನಿವಾಸಿ ಹಣಮಂತ ರಾಮಪ್ಪ ಹುಚರಡ್ಡಿ (80) ಮಂಗಳವಾರ ನಿಧನರಾದರು. ಮೃತರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ