ಬೆಟಗೇರಿ:ದೇಶಕ್ಕಾಗಿ ತಮ್ಮ ಬದುಕನ್ನೆ ತ್ಯಾಗ ಮಾಡಿದ ಮಹಾನ್ ವ್ಯಕ್ತಿಗಳನ್ನು ಇಂದು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದು ಬೆಟಗೇರಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ ಹೇಳಿದರು.
ಬೆಟಗೇರಿ ಗ್ರಾಮದ ಕನಕಶ್ರೀ ವಿವಿಧ ಉದ್ಧೇೀಶಗಳ ಸೌಹಾರ್ದ ಸಹಕಾರಿ ಹಾಗೂ ಚೈತನ್ಯ ಅರ್ಬನ್ ಕೋ-ಆಫ್ ಕ್ರೇಡಿಟ್ ಸೊsಸೈಟಿ ಸಹಯೋಗದಲ್ಲಿ ಆ.15ರಂದು ನಡೆದ 75ನೇ ವರ್ಷದ ಸ್ವಾತ್ರಂತ್ರ್ಯ ಅಮೃತ ಮಹೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಇಂದು ಪ್ರತಿಯೊಬ್ಬರೂ ತಮ್ಮಲ್ಲಿ ದೇಶಾಭಿಮಾನ ಬೆಳಸಿಕೊಳ್ಳಬೇಕು ಎಂದರು.
ಸ್ಥಳೀಯ ಕನಕಶ್ರೀ ವಿವಿಧ ಉದ್ದೇಶಗಳ ಸೌಹಾರ್ದ ಸಹಕಾರಿ ಅಧ್ಯಕ್ಷ ಹನಮಂತ ವಡೇರ ಅಧ್ಯಕ್ಷತೆ ವಹಿಸಿದ್ದರು. ಮಹಾತ್ಮಗಾಂಧೀಜಿ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಭಾವ ಚಿತ್ರಕ್ಕೆ ಪೂಜೆ, ಪುಷ್ಪ ಸಮರ್ಪನೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಿಹಿ ವಿತರಣೆ ಸಡಗರದಿಂದ ನಡೆಯಿತು.
ರಮೇಶ ಹಾಲನ್ನವರ, ಮಹಾದೇವ ಹೊರಟ್ಟಿ, ಸುರೇಶ ವಡೇರ, ಶಂಕರ ಕೋಣಿ, ಮಾಯಪ್ಪ ಕುಬೇಟ, ಬನಪ್ಪ ಚಂದರಗಿ, ವಿಠಲ ನೇಮಗೌಡ್ರ, ಗೋವಿಂದ ಚಿಗದಿನ್ನಿ, ಬಸವರಾಜ ಹುಚ್ಚಾಡಿ, ವಿವೇಕ ಬಬಲಿ, ವೀರಣ್ಣ ಮಠದ, ಮಲ್ಲಿಕಾರ್ಜುನ ಸಣ್ಣಬಾಲಪ್ಪನ್ನವರ, ವಿಠಲ ನಾಯ್ಕ, ಉಭಯ ಸಹಕಾರಿ ಆಡಳಿತ ಮಂಡಳಿ ಸದಸ್ಯರು, ಗ್ರಾಹಕರು, ಸಿಬ್ಬಂದಿ, ಗ್ರಾಮಸ್ಥರು ಇದ್ದರು.