ಬಣಜಿಗ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಮೂಡಲಗಿ: ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಮೂಡಲಗಿ ಘಟಕದಿಂದ ಮೂಡಲಗಿ ತಾಲ್ಲೂಕು ವ್ಯಾಪ್ತಿಯಲ್ಲಿ 2021-22ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ. 90 ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ. 85 ಅಂಕಗಳನ್ನು ಪಡೆದುಕೊಂಡು ಉತ್ತೀರ್ಣರಾಗಿರುವ ಬಣಜಿಗ ಸಮಾಜದ ವಿದ್ಯಾರ್ಥಿಗಳಿಗೆ ಆ. 24ರಂದು ಬೆಳಿಗ್ಗೆ 10ಕ್ಕೆ ಪ್ರತಿಭಾ ಪುರಸ್ಕಾರವನ್ನು ಏರ್ಪಡಿಸಿದೆ. ಅರ್ಹ ವಿದ್ಯಾರ್ಥಿಗಳು ಅಂಕಪಟ್ಟಿ ಮತ್ತು ಆಧಾರ ಕಾರ್ಡ್ ಝರಾಕ್ಸ್ ಪ್ರತಿ, 2 ಭಾವಚಿತ್ರಗಳನ್ನು ಮೂಡಲಗಿಯ ಲಕ್ಷ್ಮೀನಗರದಲ್ಲಿರುವ ಸಮಾಜದ ಕಚೇರಿಗೆ ಇದೇ ಆಗಷ್ಟ 20ರ ಸಂಜೆ ಒಳಗಾಗಿ ತಲುಪಿಸಲು ತಿಳಿಸಿರುವರು. ಅಧಿಕ ಮಾಹಿತಿಗಾಗಿ ಶಿವಾನಂದ ಗಾಡವಿ ಮೊ. 9886969624, ಚಿದಾನಂದ ಶೆಟ್ಟರ ಮೊ .9743876694, ಶಿವಬಸು ಶೆಟ್ಟರ ಮೊ. 9902898113 ಇವರನ್ನು ಸಂಪರ್ಕಿಸಲು ಅಧ್ಯಕ್ಷ ಶಿವಪ್ಪ ಭುಜನ್ನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.