ಬೆಟಗೇರಿ:ಶ್ರೀಕೃಷ್ಣನು ಭಗವದ್ಗೀತೆಯ ಮೂಲಕ ಆಧ್ಯಾತ್ಮ ತತ್ವವನ್ನು ಉಪದೇಶಿಸಿದ ಯೋಗಾಚಾರ್ಯ ಎನಿಸಿದ್ದಾನೆ ಎಂದು ಬೆಟಗೇರಿ ಗ್ರಾಮದ ಚೈತನ್ಯ ಗ್ರುಪ್ಸ್‍ನ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಕಮಲಾಕ್ಷಿ ನಾಯ್ಕ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಚೈತನ್ಯ ಗ್ರುಪ್ಸ್‍ನ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಆ.19 ರಂದು ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಕೃಷ್ಣನ ಸಿದ್ಧಾಂತ ಪ್ರತಿಪಾದನೆ ಬಹಳ ವಿಶಿಷ್ಟವಾಗಿದೆ. ಶ್ರೀಕೃಷ್ಣನು ಶಿಷ್ಟರ ರಕ್ಷಕನಾಗಿದ್ದನು ಎಂದರು.
ಬೆಟಗೇರಿ ಗ್ರಾಮದ ಚೈತನ್ಯ ಗ್ರುಪ್ಸ್‍ನ ಉಭಯ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಕೃಷ್ಣ-ರಾಧಾ ವೇಷಭೂಷಣ ಹಾಕಿಕೊಂಡು ಎಲ್ಲರ ಗಮನ ಸೆಳೆದರು. ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿವಿಧ ಸ್ಪರ್ಧೆ ಆಯೋಜಿಸಿ, ವಿಜೇತರಾದ ಉಭಯ ಮಾಧ್ಯಮ ಶಾಲೆಯ ಮಕ್ಕಳಿಗೆ, ಕೃಷ್ಣ-ರಾಧೆ ವೇಷಭೂಷಣ ತೊಟ್ಟು ಕಣ್ಮನ ಸೆಳೆದ ಮಕ್ಕಳಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನ ನೀಡಿ, ಸಿಹಿ ವಿತರಿಸಲಾಯಿತು.
ಸ್ಥಳೀಯ ಚೈತನ್ಯ ಗ್ರುಪ್ಸ್‍ನ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸಂಜಯ ಮೆಳವಂಕಿ ಮಹಾಭಾರತ ಮತ್ತು ಶ್ರೀಕೃಷ್ಣನ ತತ್ವ ಸಿದ್ಧಾಂತದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಕೃಷ್ಣನ ಭಾವ ಚಿತ್ರಕ್ಕೆ ಪೂಜೆ ಸಮರ್ಪನೆ, ಸಡಗರದಿಂದ ನಡೆಯಿತು.
ಇಲ್ಲಿಯ ಚೈತನ್ಯ ಗ್ರುಪ್ಸ್‍ನ ಕನ್ನಡ ಮತ್ತು ಆಂಗ್ಲ ಮಾಧ್ಯಮ ಮಾಧ್ಯಮ ಪ್ರಾಥಮಿಕ ಶಾಲೆಯ ಆಡಳಿತಾಧಿಕಾರಿ ರವಿ ಭರಮನಾಯ್ಕ, ನಭಿಸಾಬ ನದಾಫ್, ಉಭಯ ಮಾಧ್ಯಮ ಪ್ರಾಥಮಿಕ ಶಾಲೆಯ ಶಿಕ್ಷಕರು, ಶಿಕ್ಷಕಿಯರು, ಸಿಬ್ಬಂದಿವರ್ಗ, ವಿದ್ಯಾರ್ಥಿಗಳು, ಪಾಲಕರು, ಗ್ರಾಮಸ್ಥರು ಇದ್ದರು.