Breaking News
Home / Recent Posts / ಕುರುಹಿನಶೆಟ್ಟಿ ಸೊಸಾಯಿಟಿಗೆ 2.72 ಕೋಟಿ ಲಾಭ.

ಕುರುಹಿನಶೆಟ್ಟಿ ಸೊಸಾಯಿಟಿಗೆ 2.72 ಕೋಟಿ ಲಾಭ.

Spread the love

ಕುರುಹಿನಶೆಟ್ಟಿ ಸೊಸಾಯಿಟಿಗೆ 2.72 ಕೋಟಿ ಲಾಭ.

ಮೂಡಲಗಿ: ಇಲ್ಲಿಯ ಪ್ರತಿಷ್ಟಿತ ಕುರಹಿನಶೆಟ್ಟಿ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸಾಯಿಟಿಯು ಪ್ರಸಕ್ತ ಸಾಲಿನಲ್ಲಿ 31-03-2021 ಕ್ಕೆ ರೂ 2.72 ಕೋಟಿ ರೂ ನಿವ್ಹಳ ಲಾಭ ಗಳಿಸಿದ್ದು ಪ್ರಗತಿಪಥದತ್ತ ಮುನ್ನುಗ್ಗುತ್ತಿದೆ.
ಸಂಸ್ಥೆಯು 1995 ರಲ್ಲಿ ಸ್ಥಾಪನೆಯಾಗಿ ಪ್ರಧಾನಕಛೇರಿ ಹಾಗೂ 9 ಶಾಖೆಗಳನ್ನು ಹೊಂದಿದ್ದು ಪ್ರಧಾನಕಛೇರಿ ಹಾಗೂ ಮಹಾಲಿಂಗಪೂರ ಶಾಖೆಯು ಸ್ವಂತ ಭವ್ಯವಾದ ಕಟ್ಟಡಗಳನ್ನು ಹೊಂದಿರುತ್ತದೆ. ದಿನಾಂಕ 31-3-2021 ಕ್ಕೆ ಸಂಸ್ಥೆಯು ಶೇರು ಬಂಡವಾಳ ರೂ 2.81 ಕೋಟಿ , ಠೇವುಗಳು ರೂ 126.02 ಕೋಟಿ, ಗುಂತಾವಣಿ ರೂ 51.12 ಕೋಟಿ, ಸಾಲಗಳು ರೂ 82.32 ಕೋಟಿ, ದುಡಿಯುವ ಬಂಡವಾಳ ರೂ 150.36 ಕೋಟಿ ಸಂಸ್ಥೆಯು ಹೊಂದಿರುತ್ತದೆ ಎಂದು ಸಂಘದ ಚೇರಮನ್ನರಾದ ಬಸಪ್ಪ ಮುಗಳಖೋಡ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಲಕ್ಕಪ್ಪ ಪೂಜೇರಿ ನಿರ್ದೇಶಕರುಗಳಾದ ಸುಭಾಸ ಬೆಳಕೂಡ, ಇಸ್ಮಾಯಿಲ್ ಕಳ್ಳಿಮನಿ, ಗೊಡಚಪ್ಪ ಮುರಗೋಡ, ಬಸವರಾಜ ಬೆಳಕೂಡ, sಶ್ರೀಮತಿ ಉಮಾ ಬೆಳಕೂಡ, ಶ್ರೀಮತಿ ಮಾಲಾ ಬೆಳಕೂಡ, , ಮಹಾಬೂಬಿ ಕಳ್ಳಿಮನಿ, ಶಾಂತವ್ವಾ ಬೋರಗಲ್, ಶ್ಯಾಲನ್ ಕೊಡತೆ, ಪ್ರಧಾನ ವವ್ಯಸ್ಥಾಪಕರಾದ ರಮೇಶ ವಂಟಗೂಡಿ ಹಾಗೂ ಪ್ರಧಾನಕಚೇರಿಯ ಎಲ್ಲ ಸಿಬ್ಬಂದಿಯವರು ಹಾಜರಿದ್ದರು.


Spread the love

About inmudalgi

Check Also

 ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ 103ನೇ ಅನ್ನದಾಸೋಹ

Spread the loveಅನ್ನ ನೀಡುವುದು ಪುಣ್ಯದ ಕಾರ್ಯವಾಗಿದೆ ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ