Breaking News
Home / Recent Posts / ಸುಜ್ಞಾನದ ಬೆಳಕು ನೀಡುವ ಶಕ್ತಿ ಸದ್ಗುರುವಿನಲ್ಲಿದೆ: ಇಂಚಲದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಜಿ

ಸುಜ್ಞಾನದ ಬೆಳಕು ನೀಡುವ ಶಕ್ತಿ ಸದ್ಗುರುವಿನಲ್ಲಿದೆ: ಇಂಚಲದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಜಿ

Spread the love

ಬೆಟಗೇರಿ:ಪ್ರತಿಯೊಬ್ಬ ಮನುಷ್ಯನಲ್ಲಿರುವ ಅಜ್ಞಾನದ ಅಂಧಕಾರ ಕಳೆದು, ಸುಜ್ಞಾನದ ಬೆಳಕು ನೀಡುವ ಶಕ್ತಿ ಸದ್ಗುರುವಿನಲ್ಲಿದೆ. ಸದ್ಗುರುವಿನ ಕೃಪಾ ಆರ್ಶೀವಾದಕ್ಕೆ ಪಾತ್ರರಾಗಬೇಕು ಎಂದು ಇಂಚಲ ಸಾಧು ಸಂಸ್ಥಾನ ಮಠದ ಡಾ. ಶಿವಾನಂದ ಭಾರತಿ ಮಹಾಸ್ವಾಮಿಜಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗಜಾನನ ವೇದಿಕೆಯಲ್ಲಿ ಇಚೆಗೆ ನಡೆದ 38ನೇ ಸತ್ಸಂಗ ಸಮ್ಮೇಳನ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ನಾವೆಲ್ಲರೂ ಮೊದಲು ಸದ್ಗುರುವಿನಿಂದ ಸುಜ್ಞಾನ ಪಡೆದು ಪುನೀತರಾಗೋಣ ಎಂದರು.
ಹಳಕಟ್ಟಿಯ ನಿಜಗುಣ ದೇವರು, ಮಲ್ಲಾಪೂರದ ಚಿದಾನಂದ ಮಹಾಸ್ವಾಮಿಜಿ, ಗದಗ ಮಹಿಳಾ ಆಧ್ಯಾತ್ಮ ವಿದ್ಯಾಶ್ರಮದ ಶಿವಶರಣೆ ಡಾ.ನೀಲಮ್ಮತಾಯಿ ಅಸುಂಡಿ, ಹುಬ್ಬಳ್ಳಿಯ ರಾಮಾನಂದ ಭಾರತಿ ಸ್ವಾಮಿಜಿ, ಹಡಗಿನಾಳದ ಮಲ್ಲೇಶ ಮತ್ತು ಮುತ್ತೇಶ ಶರಣರು, ಶಿವಶರಣೆ ಮೈತ್ರಾದೇವಿ ಅವರಿಂದ ಗುರುವರನೊಲವಿಲ್ಲದವನೇನನೋದಲು ದೊರೆಯಲರಿಯದು ಸಮ್ಯಜ್ಞಾನ ಎಂಬ ವಿಷಯದ ಕುರಿತು ಪ್ರವಚನ ನೀಡಿದರು.
ಮಹಾಂತೇಶ ಕಲ್ಲೋಳಿ ತಬಲಾ ಸಾಥ್‍ದೊಂದಿಗೆ ಶೇಗುಣ್ಸಿಯ ಮಲ್ಲನಗೌಡ ಶಿವಲಿಂಗಪ್ಪಗೋಳ ಅವರಿಂದ ಸಂಗೀತ ಸೇವೆ ಜರುಗಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸ್ಥಳೀಯ ಶಾಲಾ ಮಕ್ಕಳು, ಗಣ್ಯರು, ದಾನಿಗಳಿಗೆ ಶ್ರೀಗಳಿಂದ ನೆನಪಿನ ಕಾಣಿಕೆ ನೀಡಿ ಶಾಲು ಹೊದಿಸಿ ಸತ್ಕರಿಸಿಲಾಯಿತು, ಸಕಲ ಶ್ರೀಗಳಿಂದ ಪ್ರವಚನ ನಡೆಯಿತು.
ಬೆಟಗೇರಿ ಗ್ರಾಮದ ಈಶ್ವರ ದೇವರ ದೇವಸ್ಥಾನದಲ್ಲಿರುವ ಈಶ್ವರ ದೇವರ ಗದ್ದುಗೆ ಸೆ.1 ರಂದು ಮುಂಜಾನೆ 6 ಗಂಟೆಗೆ ಮಹಾಪೂಜೆ, ನೈವೇದ್ಯ ಸಮರ್ಪನೆ ಜರುಗಿತು. ಪ್ರಾತ: ಕಾಲ ಬ್ರಾಹ್ಮಿ ಮೂಹೂರ್ತದಲ್ಲಿ ಶಿವನಾಮ ಸ್ಮರಣೆ, ಇಂಚಲ ಸಾಧು ಸಂಸ್ಥಾನ ಮಠದ ಶಿವಾನಂದಭಾರತಿ ಮಹಾಸ್ವಾಮಿಜಿ ಅವರ ಸ್ವಾಗತ ಮೆರವಣಿಗೆ ಸ್ಥಳೀಯ ಭಕ್ತರು, ಶರಣ ಸಂಪ್ರದಾಯ ಕುಟುಂಬದವರಿಂದ ಇಂಚ¯ದ ಡಾ.ಭಾರತಿ ಶ್ರೀಗಳಿಗೆ ಭಕ್ತಿಯ ತುಲಾಭಾರ ಸೇವೆ, ಸದ್ಗುರು ಶಿವಾನಂದ ಶ್ರೀಗಳ ಕೀರಿಟ ಮಹಾ ಪೂಜೆ, ಸ್ಥಳೀಯ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಸದ್ಭಕ್ತರಿಂದ, ಕುಳಲಿ ಮತ್ತು ಹೊಸೂರು ಗ್ರಾಮದ ಭಜನಾ ತಂಡವರಿಂದ ಶಿವ ಭಜನೆ, ಶಿವ ಜಾಗರಣೆ ನಡೆಯಿತು.
ಸ್ಥಳೀಯ ಶರಣರಾದ ಪುಂಡಲೀಕಪ್ಪ ಪಾರ್ವತೇರ, ಬಸಪ್ಪ ದೇಯಣ್ಣವರ, ಬಸವರಾಜ ಪಣದಿ, ಈಶ್ವರ ಬಳಿಗಾರ, ಚಿಂತಪ್ಪ ಸಿದ್ನಾಳ, ಮಹಾದೇವಪ್ಪ ಹಡಪದ, ಬಸಪ್ಪ ತೋಟಗಿ, ನಿಂಗಪ್ಪ ಕಂಬಿ, ಶ್ರೀಧರ ದೇಯನ್ನವರ, ರಾಮಣ್ಣ ಮುಧೋಳ, ಬಸನಗೌಡ ದೇಯನ್ನವರ, ಗೌಡಪ್ಪ ಮೆಳೆನ್ನವರ, ಬಸವರಾಜ ನೀಲನ್ನವರ, ಈರಪ್ಪ ದೇಯಣ್ಣವರ, ಶರಣರು, ಸ್ಥಳೀಯ ಈಶ್ವರ ಭಜನಾ ಮಂಡಳಿ ಸದಸ್ಯರು, ಸ್ಥಳೀಯ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಗಣ್ಯರು, ಗ್ರಾಮಸ್ಥರು, ಸಾವಿರಾರು ಜನ ಆಧ್ಯಾತ್ಮ ಪ್ರವಚನ ಶ್ರವಣಾಸಕ್ತರು ಇದ್ದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ