Breaking News
Home / Recent Posts / ಸೆ.12ರಂದು ಬೆಟಗೇರಿ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆ

ಸೆ.12ರಂದು ಬೆಟಗೇರಿ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆ

Spread the love

ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ಸನ್ 2021-22ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆ ಸಂಘದ ಅಧ್ಯಕ್ಷ ಹನುಮಂತ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಸೆ.12ರಂದು ಮುಂಜಾನೆ 11ಗಂಟೆಗೆ ಸಂಘದ ಕಾರ್ಯಾಲಯದಲ್ಲಿ ನಡೆಯಲಿದೆ.

ಸಂಘದ ವಾರ್ಷಿಕ ಆಯಾ-ವ್ಯಯ ಅನುಮೋದನೆ, ಕಾರ್ಯ ಚಟುವಟಿಕೆ, ವಾರ್ಷಿಕ ವರದಿ, 2021-22ನೇ ಸಾಲಿನ ನಿವ್ಹಳ ಲಾಭದ ವಿಭಾಗಣೆ, ಇತರೆ ಸಹಕಾರ ಸಂಘಗಳಲ್ಲಿ ಸಂಘದ ಸದಸ್ಯತ್ವದ ಅನುಮೋದನೆ ಸೇರಿದಂತೆ 27 ವಿಷಯಗಳ ಕುರಿತು ಹಾಗೂ ಸಂಘದ ಸಮಗ್ರ ಪ್ರಗತಿಗಾಗಿ ಹಲವಾರು ವಿಷಯಗಳನ್ನು ಚರ್ಚಿಸಲಿದ್ದು, ಸಂಘದ ಆಡಳಿತ ಮಂಡಳಿ ಸದಸ್ಯರು, ಸರ್ವ ಸದಸ್ಯರು, ಗ್ರಾಹಕರು ಈ ಮಹಾಸಭೆಯಲ್ಲಿ ಹಾಜರಿರಬೇಕೆಂದು ಸಂಘದ ಮುಖ್ಯಕಾರ್ಯನಿರ್ವಾಹಕ ನಿಂಗಪ್ಪ ನೀಲಣ್ಣವರ ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.

 


Spread the love

About inmudalgi

Check Also

ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ

Spread the loveಮೂಡಲಗಿ: ಮೂಡಲಗಿಯ ಪುರಸಭೆ ವಾರ್ಡ ಸಂಖ್ಯೆ 15ರಲ್ಲಿ ಚರಂಡಿ ನಿರ್ಮಾಣಕ್ಕೆ ಬುಧವಾರ ಪುರಸಭೆ ಸದಸ್ಯ ಸಂತೋಷ ಸೋನವಾಲಕರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ