ಗ್ರಾಮಸ್ಥರ ಅವಶ್ಯಕ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯ ಶ್ಲಾಘನೀಯ: ಲಕ್ಷ್ಮಣ ಚಂದರಗಿ
ಬೆಟಗೇರಿ:ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವ, ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಮಾರ್ಗದರ್ಶನದಲ್ಲಿ ಬೆಟಗೇರಿ ಗ್ರಾಮದ ನಾಗರಿಕರಿಗೆ ಈಗಾಗಲೇ ಹಲವಾರು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯತಿ ಸಹಯೋಗದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಸುಮಾರು 6 ಲಕ್ಷ ರೂ.ಗಳ ವೆಚ್ಚದಲ್ಲಿ ತಿಗಡಿ ಮುಖ್ಯ ರಸ್ತೆಯಿಂದ ಸ್ಥಳೀಯ ಲಕ್ಷ್ಮೀ ನಗರದ ಮಹೇಶ ಹೊರಟ್ಟಿ ಹೊಲದ ತನಕ ಸುಮಾರು 2 ಕಿ.ಮೀ, ತೋಟಪಟ್ಟಿ ರಸ್ತೆ ನಿರ್ಮಾಣ ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಕೆಎಂಎಫ್ ಅಧ್ಯಕ್ಷ, ಅರಭಾಂವಿ ಮತಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ಬೆಟಗೇರಿ ಗ್ರಾಮದಲ್ಲಿ ಇನ್ನೂ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಗ್ರಾಮಸ್ಥರ ಅವಶ್ಯಕ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ ಅಭಿಪ್ರಾಯಪಟ್ಟರು.
ಗೋಕಾಕ ಎನ್ಎಸ್ಎಫ್ ಪ್ರತಿನಿಧಿ ಚನ್ನಮಲ್ಲಿಕಾರ್ಜುನ ಯಕ್ಸಂಬಿ, ಗ್ರಾಪಂ ಕಾರ್ಯದರ್ಶಿ ಗೌಡಪ್ಪ ಮಾಳೇದ, ಸುರೇಶ ಬಾಣಸಿ, ವಿಠಲ ಚಂದರಗಿ, ಈಶ್ವರ ಮುಧೋಳ, ಅಶೋಕ ಕೋಣಿ, ಈರಣ್ಣ ಬಳಿಗಾರ, ಮಾರುತಿ ಚಂದರಗಿ, ಅಪ್ಪಣ್ಣ ಆಶೆಪ್ಪಗೋಳ, ಲಕ್ಕಪ್ಪ ಚಂದರಗಿ, ಸುರೇಶ ವಡೇರ, ಶಂಕರ ಕೋಣಿ, ಮುತ್ತೆಪ್ಪ ವಡೇರ, ಹನುಮಂತ ಸವತಿಕಾಯಿ, ಬಸಪ್ಪ ಚಿಕ್ಕೂಡಿ, ಚಿದಾನಂದ ಮಾಕಾಳಿ, ಭೀಮಶೆಪ್ಪ ಹೊಂಗಲ, ಸಂತಮಹಾರಾಜ ಹೊರಟ್ಟಿ, ಯಂಕಪ್ಪ ಕಿಲೇದಾರ, ಬಸಪ್ಪ ವೆಂಕಟಾಪೂರ, ಲಕ್ಷ್ಮೀ ನಗರ ಶಾಲೆಯ ಎಸ್ಡಿಎಂಸಿ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಸದಸ್ಯರು, ಗಣ್ಯರು, ಗ್ರಾಮಸ್ಥರು ಇದ್ದರು.