Breaking News
Home / Recent Posts / ಉಳ್ಳಾಗಡ್ಡಿ ಬೆಳೆಯ ರೋಗ ಪೀಡಿತ ಕ್ಷೇತ್ರಗಳಿಗೆ ವಿಜ್ಞಾನಿಗಳು ಭೇಟಿ

ಉಳ್ಳಾಗಡ್ಡಿ ಬೆಳೆಯ ರೋಗ ಪೀಡಿತ ಕ್ಷೇತ್ರಗಳಿಗೆ ವಿಜ್ಞಾನಿಗಳು ಭೇಟಿ

Spread the love

ಯಾದವಾಡದಲ್ಲಿ ಉಳ್ಳಾಗಡ್ಡಿ ಬೆಳೆಯ ಕ್ಷೇತ್ರಕ್ಕೆ ವಿಜ್ಷಾನಿಗಳು ಭೇಟಿ

ಮೂಡಲಗಿ: ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಅರಭಾವಿ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ ಮತ್ತು ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ಹಾಗೂ ಗೋಕಾಕ ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಮೂಡಲಗಿ ತಾಲೂಕಿನ ಯಾದವಾಡÀ ಗ್ರಾಮದ ಉಳ್ಳಾಗಡ್ಡಿ ಬೆಳೆಯ ರೋಗ ಪೀಡಿತ ಕ್ಷೇತ್ರಗಳಿಗೆ ವಿಜ್ಞಾನಿಗಳು ಭೇಟಿ ನೀಡಿದರು.

ಈ ಕ್ಷೇತ್ರ ಭೇಟಿಯಲ್ಲಿ ಅರಭಾವಿ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ ವಿಜ್ಞಾನಿಗಳಾದ ಡಾ. ಕಾಂತರಾಜು, ಡಾ. ವಿಜಯಕುಮಾರ ರಾಠೋಡ, ಸಹಾಯಕ ಪ್ರಾಧ್ಯಾಪಕರಾದ ರೇಣುಕಾ ಹಿರೇಕುರಬರ ಹಾಗೂ ತೋಟಗಾರಿಕಾ ಸಹಾಯಕ ಅಧಿಕಾರಿ ಕಾವ್ಯಶ್ರೀ ಸಿಂಗಳಾಪೂರ ಭಾಗವಹಿಸಿ ರೈತರಿಗೆ ರೋಗಕ್ಕೆ ಸೂಕ್ತ ಸಲಹೆಗಳನ್ನು ನೀಡಿದ್ದರು.
8-10 ದಿನಗಳಿಂದ ಸತತ ಮಳೆಯಾಗುತ್ತಿರುವುದರಿಂದ ಅಲ್ಲಲ್ಲಿ ಕೊಳೆರೋಗ ಮತ್ತು ಥ್ರಿಪ್ಸ್ ನುಶಿ ಕಂಡು ಬಂದಿದ್ದು, ರೈತರು ಮ್ಯಾಂಕೋಜೆಬ್ ಶೇ.64+ ಕಾರ್ಬನ್‍ಡೈಜಿಮ್ ಶೇ. ಶಿಲೀಂದ್ರನಾಶಕವನ್ನು ಮತ್ತು ಅಸಿಟಮಾಪ್ರಿಡ್ 0.2 ಗ್ರಾಂ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸಬೇಕು. ನಂತರ ರೋಗದ ಬಾಧೆ ಮುಂದುವರೆದಲ್ಲಿ ಹೆಕ್ಸಾಕೊನೊಜೋಲ್ 1 ಮಿ.ಲೀ. ಮತ್ತು ಲ್ಯಾಮ್ಡಾಸೈಲೋಥ್ರೀನ್ 0.5 ಮಿ.ಲೀ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸಬೇಕು. ಬಿತ್ತನೆ ಮಾಡಿದ 6 ವಾರಗಳ ನಂತರ ಪ್ರತಿ ಎಕರೆಗೆ 63 ಕೆ.ಜಿ. ಯೂರಿಯಾವನ್ನು ಕೊಡಬೇಕು. ಗಡ್ಡೆ ಬರುವ ಸಮಯದಲ್ಲಿ ಪ್ರತಿ ಎಕರೆಗೆ 11ಕೆ.ಜಿ. ಗಂಧಕವನ್ನು ಕೊಡಬೇಕು ಎಂದು ತಿಳಿಸಿದರು.
ಕ್ಷೇತ್ರ ಭೇಟಿಯ ಸಮಯದಲ್ಲಿ ರೈತರಾದ ಸಿದ್ದಪ್ಪ ಬಸಪ್ಪ ಪೂಜೇರಿ, ಮಲ್ಲಪ್ಪ ತಟ್ಟಿನ, ಲಕ್ಷ್ಮಣ ಪೂಜೇರಿ, ಬಸವರಾಜ ಕಾಸರಡ್ಡಿ, ಗಣಪತಿ ಶಿರೋಶಿ, ಬೀರಸಿದ್ದಪ್ಪ ಪೂಜೇರಿ, ಚನ್ನಪ್ಪ ಪೂಜೇರಿ ಉಪಸ್ಥಿತರಿದ್ದರು.


Spread the love

About inmudalgi

Check Also

ಘಟಪ್ರಭಾ ನದಿಗೆ 1.36 ಲಕ್ಷ ಕ್ಯೂಸೆಕ್ಸ್ ನೀರು, ಸುರಕ್ಷತೆಯಿಂದಿರಲು ಸಂತ್ರಸ್ತರಿಗೆ ಶಾಸಕರ ಮನವಿ ನೆರೆಪೀಡಿತ 12 ಕಡೆಗಳಲ್ಲಿ ಗಂಜಿಕೇಂದ್ರಗಳು ಆರಂಭ : ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveಘಟಪ್ರಭಾ ನದಿಗೆ 1.36 ಲಕ್ಷ ಕ್ಯೂಸೆಕ್ಸ್ ನೀರು, ಸುರಕ್ಷತೆಯಿಂದಿರಲು ಸಂತ್ರಸ್ತರಿಗೆ ಶಾಸಕರ ಮನವಿ ನೆರೆಪೀಡಿತ 12 ಕಡೆಗಳಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ