ವಿವಿಧ ಕ್ಷೇತ್ರದಲ್ಲಿ ಪಾರ್ವತೇರ ಸಲ್ಲಿಸಿದ ಸೇವೆ ಅವಿಸ್ಮರಣಿಯವಾಗಿದೆ: ಬಸವರಾಜ ಪಣದಿ
ಬೆಟಗೇರಿ:ಪುಂಡಲೀಕಪ್ಪ ಮಹಾರಾಜರು ನಾಮಾಂಕಿತದಿಂದ ಪ್ರಚಲಿತರಾದ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಆಧ್ಯಾತ್ಮಜೀವಿ ದಿ.ಪುಂಡಲೀಕಪ್ಪ ಪಾರ್ವತೇರ ಅವರ ಸಾಮಾಜಿಕ, ಶೈಕ್ಷಣಿಕ, ಸಹಕಾರ ಹಾಗೂ ಆಧ್ಯಾತ್ಮ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಅವಿಸ್ಮರಣೀಯವಾಗಿದೆ ಎಂದು ಬೆಟಗೇರಿ ಗ್ರಾಮ ಪಂಚಾಯ್ತಿ ಗ್ರಂಥಾಲಯ ಮೇಲ್ವಿಚಾರಕ ಬಸವರಾಜ ಪಣದಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ವ್ಯವಸ್ಥಾಪಕ, ಆಧ್ಯಾತ್ಮಜೀವಿ ಪುಂಡಲೀಕಪ್ಪ ಪಾರ್ವತೇರ ನ.28 ರಂದು ಶಿವಾಧೀನರಾದ ಪ್ರಯುಕ್ತ ಸಂಘದ ಕಾರ್ಯಾಲಯದಲ್ಲಿ ನ.29 ರಂದು ಆಯೋಜಿಸಿದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಸ್ಥಳೀಯ ಪಿಕೆಪಿಎಸ್ ಸಂಘದ ವ್ಯವಸ್ಥಾಪಕರಾಗಿ ಪಿ.ಆರ್.ಪಾರ್ವತೇರ ಅವರು ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿ ಸಂಘದ ಸಮಗ್ರ ಪ್ರಗತಿಗೆ ಕಾರಣಿಕರ್ತರಾಗಿದ್ದರು ಎಂದು ಅವರ ಅವಿರತ ಸೇವೆಯನ್ನು ಈ ವೇಳೆ ಸ್ಮರಿಸಿದರು.
ಈರಯ್ಯ ಹಿರೇಮಠ ಅವರು ಶ್ರದ್ಧಾಂಜಲಿ ಸಭೆಯ ಸಾನಿಧ್ಯ ವಹಿಸಿ ಆಧ್ಯಾತ್ಮಜೀವಿ ದಿ.ಪುಂಡಲೀಕಪ್ಪ ಪಾರ್ವತೇರ ಅವರ ಭಾವಚಿತ್ರಕ್ಕೆ ಪೂಜೆ, ಪುಷ್ಪ ಸಮರ್ಪಿಸಿದ ಬಳಿಕ ಒಂದು ನಿಮಿಷ ಮೌನಾಚರಣೆ ಸಮರ್ಪಿಸುವುದರ ಮೂಲಕ ಪಿ.ಆರ್.ಪಾರ್ವತೇರ ಅವರ ನಿಧನಕ್ಕೆ ತೀವ್ರ ಸಂತಾಪ ಶೋಕ ವ್ಯಕ್ತಪಡಿಸಿ, ಶ್ರದ್ಧಾಂಜಲಿ ಸಲ್ಲಿಸಿದರು.
ಮುಖ್ಯಕಾರ್ಯನಿವಾಹಕ ಅಡಿವೆಪ್ಪ ಮುರಗೋಡ, ಚಂದ್ರಶೇಖರ ನೀಲಣ್ಣವರ, ಎಂ.ಐ.ನೀಲಣ್ಣವರ, ಶ್ರೀಶೈಲ ಗಾಣಗಿ, ಈಶ್ವರ ಮುಧೋಳ, ಗೌಡಪ್ಪ ಮೇಳೆಣ್ಣವರ, ಈರಪ್ಪ ದೇಯಣ್ಣವರ, ಸುಭಾಸ ಜಂಬಗಿ, ಧರೆಪ್ಪ ಚಂದರಗಿ, ಬಸಪ್ಪ ಮೇಳೆಣ್ಣವರ, ಮುತ್ತೆಪ್ಪ ದೇಯಣ್ಣವರ, ಮಹಾದೇವ ಕೋಣಿ, ಮಲ್ಲಿಕಾರ್ಜುನ ಸೋಮಗೌಡ್ರ, ಶಿವಲಿಂಗ ಜಾಡರ ನಿಂಗಪ್ಪ ಕಂಬಿ, ಮಲ್ಲಪ್ಪ ಪೇದಣ್ಣವರ, ಸಂಘದ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ, ಸ್ಥಳೀಯರು, ಮತ್ತೀತರರು ಇದ್ದರು.