Breaking News
Home / Recent Posts / ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕಲಿಯುತ್ತಾರೆಯೋ ಆ ಸಂಸ್ಥೆಗೆ ಒಳ್ಳೆಯ ಭವಿಷ್ಯವಿದೆ

ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕಲಿಯುತ್ತಾರೆಯೋ ಆ ಸಂಸ್ಥೆಗೆ ಒಳ್ಳೆಯ ಭವಿಷ್ಯವಿದೆ

Spread the love

 

ಮೂಡಲಗಿ: ಯಾವ ಶಿಕ್ಷಣ ಸಂಸ್ಥೆಯಲ್ಲಿ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕಲಿಯುತ್ತಾರೆಯೋ ಆ ಸಂಸ್ಥೆಗೆ ಒಳ್ಳೆಯ ಭವಿಷ್ಯವಿದೆ. ಹೆಣ್ಣಿಲ್ಲದೇ ಪ್ರಪಂಚವೇ ಇಲ್ಲ ಎಂದು ಕೇಂದ್ರ ಸಾಹಿತ್ಯ ಪ್ರಶಸ್ತಿ ಪುರಸ್ಕøತ ಶ್ರೀ ಕುಂ. ವೀರಭದ್ರಪ್ಪ ಹೇಳಿದರು.
ಅವರು ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀ ಕುಂ. ವೀರಭದ್ರಪ್ಪ ಅವರ ಜೊತೆ ಮಾತು-ಕತೆ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿ, ನಗರ ಪ್ರದೇಶದ ಹುಡುಗರಿಗೆ ನೆಲಮೂಲದ ಜ್ಞಾನವಿಲ್ಲ. ಗ್ರಾಮೀಣ ಪ್ರದೇಶದ ಮಕ್ಕಳು ಬುದ್ಧಿವಂತರಾಗಿರುತ್ತಾರೆ. ಯಾವ ಮಗು ಕೆಲಸ ಮಾಡುತ್ತಾ ಶ್ರಮದ ಶಿಕ್ಷಣ ಪಡೆಯುತ್ತದೆ ಆ ಮಗು ಜೀವನದಲ್ಲಿ ಯಶಸ್ವಿಯಾಗುತ್ತದೆ. ವಿದ್ಯೆಯ ಕಡೆಗೆ ಹೆಚ್ಚಿನ ಗಮನಕೊಡಬೇಕು. ಮೋಬೈಲ್ ದಿಂದ ದೂರವಿರಬೇಕು ಎಂದು ಕರೆ ನೀಡಿದರು.

ಇಂ.ಗಾಂ.ರಾ.ಕ.ಕೇಂದ್ರ ಬೆಂಗಳೂರು ಸಚಿವಾಲಯದ ಪ್ರಾದೇಶಿಕ ನಿರ್ದೇಶಕ ಡಿ. ಮಹೇಂದ್ರ ಮಾತನಾಡಿ, ನಾನು ಸಾಧಿಸಿಯೇ ತಿರುತ್ತೇನೆ ಎಂಬ ಛಲವಿರಬೇಕು. ನೋಡುವ ದೃಷ್ಠಿಕೋನ ಚನ್ನಾಗಿರಬೇಕು ಎಂದರು.

ಸಂಸ್ಥೆಯ ಚೇರಮನ್ನರಾದ ಬಸಗೌಡ ಪಾಟೀಲ ಮಾತನಾಡಿದರು. ಪ್ರಾಚಾರ್ಯ ಡಾ. ಸುರೇಶ ಹನಗಂಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಜಾನಪದ ವಿದ್ವಾಂಸ ಡಾ. ಸಿ.ಕೆ. ನಾವಲಗಿ, ಸಾಹಿತಿ ಜಯಾನಂದ ಮಾದರ, ಪಾರಿಜಾತ ಕಲಾವಿದ ಈಶ್ವಚಂದ್ರ ಬೇಟಗೆರಿ, ಗೋಕಾಕದ ಜೆ.ಎಸ್.ಎಸ್. ಕಾಲೇಜಿನ ಪ್ರಾಧ್ಯಾಪಕ ಉಮೇಶ ಶಾಬೋಟಿ ಇನ್ನಿತರರು ಉಪಸ್ಥಿತರಿದ್ದರು.

ಡಾ. ಕೆ.ಎಸ್. ಪರವ್ವಗೋಳ ನಿರೂಪಿಸಿದರು, ವೀಣಾ ಕಂಕಣವಾಡಿ ಪ್ರಾರ್ಥಿಸಿದರು, ಪೆÇ್ರ. ಡಿ.ಎಸ್. ಹುಗ್ಗಿ ಸ್ವಾಗತಿಸಿದರು, ಪೆÇ್ರ. ಶಂಕರ ನಿಂಗನೂರ ವಂದಿಸಿದರು.


Spread the love

About inmudalgi

Check Also

 ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ 103ನೇ ಅನ್ನದಾಸೋಹ

Spread the loveಅನ್ನ ನೀಡುವುದು ಪುಣ್ಯದ ಕಾರ್ಯವಾಗಿದೆ ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ