ಬೆಟಗೇರಿ ಗ್ರಾಮ ಧಾರ್ಮಿಕ ಆಚರಣೆಗಳಿಗೆ ಹೆಸರುವಾಸಿಯಾಗಿದೆ : ಬಸವಂತ ಕೋಣಿ
ಬೆಟಗೇರಿ:ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ಧಾರ್ಮಿಕ ಕಾರ್ಯಗಳಿಗೆ ಸಹಾಯ, ಸಹಕಾರ ನೀಡಬೇಕು. ಬೆಟಗೇರಿ ಗ್ರಾಮ ಧಾರ್ಮಿಕ ಆಚರಣೆಗಳಿಗೆ ಹೆಸರುವಾಸಿಯಾಗಿದೆ ಎಂದು ಬೆಟಗೇರಿ ತಾಪಂ ಸದಸ್ಯ ಬಸವಂತ ಕೋಣಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ರವಿವಾರ ಫೆ.5ರಂದು ನಡೆದ ಶ್ರೀಯಲ್ಲಮ್ಮದೇವಿ ನೂತನ ಬಾಣಿ ಕಟ್ಟೆ ಉದ್ಘಾಟನೆ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮುಖ್ಯಅತಿಥಿಗಳಾಗಿ ಮಾತನಾಡಿ, ಬೆಟಗೇರಿ ಗ್ರಾಮದಲ್ಲಿ ಆಗಾಗ ಆಯೋಜಿಸುತ್ತಿರುವ ವಿವಿಧ ಧಾರ್ಮಿಕ, ಶಿಕ್ಷಣ, ಸಾಮಾಜಿಕ ಕಾರ್ಯಕ್ರಮಗಳಿಗೆ ಸ್ಥಳೀಯರ ಸಹಾಯ, ಸಹಕಾರ ಶ್ಲಾಘನೀಯವಾಗಿದೆ ಎಂದರು.
ಮೇಳಯ್ಯ ಹಿರೇಮಠ, ಸಂಗಯ್ಯ ಹಿರೇಮಠ ಸಾನಿಧ್ಯ, ಮುತ್ತೆಪ್ಪ ವಡೇರ ಸಮ್ಮುಖ ವಹಿಸಿದ್ದರು. ಸ್ಥಳೀಯ ಶ್ರೀ ರೇಣುಕಾದೇವಿ ಜಾತ್ರಾ ಸಮಿತಿ ಅಧ್ಯಕ್ಷ ಮುತ್ತೆಪ್ಪ ಮಾಕಾಳಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಮಾಜಿ ಸದಸ್ಯ ಶ್ರೀಯಲ್ಲಮ್ಮದೇವಿ ನೂತನ ಬಾಣಿ ಕಟ್ಟೆ ಉದ್ಘಾಟನೆ ನೆರವೇರಿಸಿದರು. ಇಲ್ಲಿಯ ಶ್ರೀ ರೇಣುಕಾದೇವಿ ಜಾತ್ರಾ ಮಹೋತ್ಸವ ಸಮಿತಿ ವತಿಯಿಂದ ಗಣ್ಯರು, ದಾನಿಗಳನ್ನು ಶಾಲು ಹೊದಿಸಿ ಸತ್ಕರಿಸಲಾಯಿತು.
ಸಡಗರದಿಂದ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು: ಫೆ.4ರಂದು ಮುಂಜಾನೆ ಮತ್ತು ಸಂಜೆ 7 ಗಂಟೆಗೆ ಸ್ಥಳೀಯ ಶ್ರೀ ರೇಣುಕಾದೇವಿ ದೇವಾಲಯದ ಶ್ರೀ ಯಲ್ಲಮ್ಮದೇವಿಯ ಗದ್ಗುಗೆ ಮಹಾಪೂಜೆ, ನೈವೇಧ್ಯ ಸಮರ್ಪನೆ, ಸಾಯಂಕಾಲ 5 ಗಂಟೆಗೆ ಪುರದೇವರ ಪಲ್ಲಕ್ಕಿಗಳನ್ನು ಬರಮಾಡಿಕೊಳ್ಳುವ ಕಾರ್ಯಕ್ರಮಗಳು ನಡೆದವು. ಫೆ.5ರಂದು ಇಲ್ಲಿಯ ಶ್ರೀ ರೇಣುಕಾದೇವಿ ದೇವಾಲಯದಲ್ಲಿ ಶ್ರೀದೇವಿಯ ಗದಗುಗೆ ಮಹಾಪೂಜೆ, ಮಹಾಭಿಷೇಕ, ಉಡಿ ಮತ್ತು ಹಡಲಗಿ ತುಂಬುವದು, ನೈವೇಧ್ಯ ಸಮರ್ಪನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಧರ್ಮಸಭೆ, ಮಹಾಪ್ರಸಾದ ಸಡಗರದಿಂದ ನಡೆದು ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.
ಲಕ್ಷ್ಮಣ ನೀಲಣ್ಣವರ, ಈಶ್ವರ ಬಳಿಗಾರ, ಲಕ್ಷ್ಮಣ ಚಿನ್ನಯ್ಯನವರ, ವೀರಭದ್ರ ನೀಲಣ್ಣವರ, ದುಂಡಪ್ಪ ಹಾಲಣ್ಣವರ, ಸಿದ್ರಾಮ ಚಂದರಗಿ, ಶಿವಾನಂದ ತೋಟಗಿ, ವಿಠಲ ಚಂದರಗಿ, ಪತ್ರೇಪ್ಪ ನೀಲಣ್ಣವರ, ಸಿದ್ದಪ್ಪ ಬಾಣಸಿ, ರಾಮಣ್ಣ ನೀಲಣ್ಣವರ, ಸುಭಾಷ ಕರೆಣ್ಣವರ, ರವಿ ದಾನವ್ವಗೋಳ, ಸುಭಾಷ ಜಂಬಗಿ, ವೀರನಾಯ್ಕ ನಾಯ್ಕರ, ಗಣ್ಯರು, ರಾಜಕೀಯ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು, ಸ್ಥಳೀಯ ಎಲ್ಲ ಸಮುದಾಯದ ಹಿರಿಯ ನಾಗರಿಕರು, ಮಹಿಳೆಯರು, ಶ್ರೀ ರೇಣುಕಾದೇವಿ ಜಾತ್ರಾ ಮಹೋತ್ಸವ ಸಮಿತಿ ಸದಸ್ಯರು, ಭಕ್ತರು ಇದ್ದರು.