ಚುನಾವಣಾ ಸೇಕ್ಟರ ಅಧಿಕಾರಿಗಳ ಸಭೆ
ಮೂಡಲಗಿ: ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಸಭಾ ಭವನದಲ್ಲಿ 2023 ರ ವಿಧಾನ ಸಭೆಯ ಸಾರ್ವತ್ರಿಕ ಚುನಾವಣೆ ನಿಮಿತ್ಯ ಅರಭಾವಿ ಮತ ಕ್ಷೇತ್ರದಲ್ಲಿ ಚುನಾವಣಾ ಸೇಕ್ಟರ ಅಧಿಕಾರಿಗಳ ಸಭೆ ಬೈಲಹೊಂಗಲ ಉಪವಿಭಾಗಾಧಿಕಾರಿ ಶ್ರೀಮತಿ ಪ್ರಭಾವತಿ ಫಕೀರಪೂರ ಅಧ್ಯಕ್ಷತೆಯಲ್ಲಿ ಜರುಗಿತು.
ಉಪವಿಭಾಗಾಧಿಕಾರಿ ಶ್ರೀಮತಿ ಪ್ರಭಾವತಿ ಫಕೀರಪೂರ ಮಾತನಾಡಿ, ಮುಂಬರುವ ವಿಧಾನ ಸಭೆ ಸಾರ್ವತ್ರಿಕ ಚುನಾವಣೆಯ ನಿಮಿತ್ಯ ಅರಭಾವಿ ಮತ ಕ್ಷೇತ್ರದಲ್ಲಿ 281 ಮತಗಟ್ಟೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಅರಭಾವಿ ಮತ ಕ್ಷೇತ್ರದ ಸೇಕ್ಟರ ಅಧಿಕಾರಿಗಳು ಮತಗಟ್ಟೆಗಳಿಗೆ ಖುದ್ದಾಗಿ ಭೇಟಿ ಪರೀಶಿಲಿಸಿ ವರದಿ ಸಲ್ಲಿಸಬೇಕೆಂದು ಹೇಳಿದರು.
ಸಭೆಯಲ್ಲಿ ತಾಲೂಕಾ ಮಟ್ಟದ ಅಧಿಕಾರಿಗಳಾದ ತಾ.ಪಂ ಇ.ಒ ಎಫ್.ಜಿ.ಚಿನ್ನನವರ, ಬಿಇಒ ಅಜೀತ ಮನ್ನಿಕೇರಿ, ಸಿಡಿಪಿಒ ಯಲ್ಲಪ್ಪ ಗದಾಡಿ, ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಸಿ.ಬಿ.ಪಾಟೀಲ, ಗ್ರೇಡ್ ಟು ತಹಶೀಲ್ದಾರ ಶಿವಾನಂದ ಬಬಲಿ, ಚುನಾವಣಾ ಶಿರಸ್ತೆದಾರ ಪಿ.ಕೆ.ನಾಯ್ಕ, ಚುನಾವಣೆ ವಿಷಯ ನಿರ್ವಹಕ ಪಿ.ಎಸ್.ಕುಂಬಾರ ಹಾಗೂ 20 ಜನ ಚುನಾವಣಾ ಸೇಕ್ಟರ ಅಧಿಕಾರಿಗಳು ಉಪಸ್ಥಿತರಿದ್ದರು.