ಅವಶ್ಯಕ ಸೌಲಭ್ಯ ಕಲ್ಪಿಸಿಕೊಡುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯ ಶ್ಲಾಘನೀಯವಾಗಿದೆ: ಲಕ್ಷ್ಮಣ ಚಂದರಗಿ
ವರದಿ: ಅಡಿವೇಶ ಮುಧೋಳ
ಬೆಟಗೇರಿ:ಕೆಎಂಎಫ್ ಅಧ್ಯಕ್ಷ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವ ಹಾಗೂ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಮಾರ್ಗದರ್ಶನದಂತೆ ಈಗಾಗಲೇ ಬೆಟಗೇರಿ ಗ್ರಾಮದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಬೆಟಗೇರಿ ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ ಹೇಳಿದರು.
ಗೋಕಾಕ ಉಪ ವಿಭಾಗದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಯೋಗದಲ್ಲಿ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬಸವನಗರದಲ್ಲಿ ಫೆ.7ರಂದು ನಡೆದ ರಾಷ್ಟ್ರೀಯ ಜಲಜೀವನ ಮಿಷನ್ ಯೋಜನೆಯ ಅನುದಾನದಡಿಯಲ್ಲಿ ಕುಡಿಯುವ ನೀರಿನ ಓವರ್ ಟ್ಯಾಂಕ್ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸ್ಥಳೀಯ ಗ್ರಾಮಸ್ಥರ ಅವಶ್ಯಕ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ರಾಷ್ಟ್ರೀಯ ಜಲಜೀವನ ಮಿಷನ್ ಯೋಜನೆಯ ಸುಮಾರು 39ಲಕ್ಷ ರೂ.ಗಳ ಅನುದಾನದಡಿಯಲ್ಲಿ ಸುಮಾರು 25 ಸಾವಿರ ಲೀಟರ್ ನೀರು ಸಂಗ್ರಹ ಸಾಮಥ್ರ್ಯದ ಕುಡಿಯುವ ನೀರಿನ ಓವರ್ ಟ್ಯಾಂಕ್ ನಿರ್ಮಾಣ, ಪೈಪಲೈನ್ ಹಾಗೂ ಸ್ಥಳೀಯ 100ಕ್ಕೂ ಹೆಚ್ಚು ಪ್ರತಿ ಮನೆಗೆ ನಳದ ವ್ಯವಸ್ಥೆ ಮೂಲಕ ಕುಡಿಯುವ ನೀರು ಸರಬರಾಜು ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಗುತ್ತಿಗೆದಾರ ಬಸವರಾಜ ಹೊಸಮನಿ ತಿಳಿಸಿದ್ದಾರೆ.
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಐ.ಎಮ್.ದಪ್ಪೆದಾರ, ಅಶೋಕ ಕೋಣಿ, ಬಾಲಚಂದ್ರ ಬಣವಿ, ಈಶ್ವರ ಮುಧೋಳ, ಈರಣ್ಣ ಬಳಿಗಾರ, ಶಿವನಪ್ಪ ಮಾಳೇದ, ಮಲ್ಲಿಕಾರ್ಜುನ ಬಣವಿ, ಸಿದ್ದಪ್ಪ ಬಾಣಸಿ, ಸಿದ್ಧಾರೂಢ ವಡೇರ, ಬಸಪ್ಪ ಪಾರ್ವತೇರ, ಈಶ್ವರ ಬಲೋದಾರ, ಹನುಮಂತ ಮುಗಳಿಹಾಳ, ವಿಠಲ ಪೇದನ್ನವರ, ನೀಲಪ್ಪ ಪಾರ್ವತೇರ, ಹನುಮಂತ ಸವತಿಕಾಯಿ, ಕೆಂಪಣ್ಣ ಪೇದನ್ನವರ, ಗುರುಸಿದ್ಧ ಕಲ್ಲೂರ, ಅಡಿವೆಪ್ಪ ಕತ್ತಿ, ರಾಮಣ್ಣ ಕತ್ತಿ, ರಾಮಣ್ಣ ಯಾದವಾಡ, ಪರಪ್ಪ ಗಿರೇಣ್ಣವರ, ಬಸವರಾಜ ಬಾಣಸಿ, ಯಲ್ಲಪ್ಪ ಪಾರ್ವತೇರ, ಮಾಹಾಂತೇಶ ದೇಯಣ್ಣವರ, ಮುತ್ತೇಪ್ಪ ವಡೇರ, ಸ್ಥಳೀಯರು, ಇತರರು ಇದ್ದರು.