Breaking News
Home / Recent Posts / ಬೆಟಗೇರಿ ಗ್ರಾಮದಲ್ಲಿ ತೋಟಪಟ್ಟಿ ರಸ್ತೆ ಕಾಮಗಾರಿಗೆ ಚಾಲನೆ

ಬೆಟಗೇರಿ ಗ್ರಾಮದಲ್ಲಿ ತೋಟಪಟ್ಟಿ ರಸ್ತೆ ಕಾಮಗಾರಿಗೆ ಚಾಲನೆ

Spread the love

ಬೆಟಗೇರಿ ಗ್ರಾಮದಲ್ಲಿ ತೋಟಪಟ್ಟಿ ರಸ್ತೆ ಕಾಮಗಾರಿಗೆ ಚಾಲನೆ

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮಪಂಚಾಯತಿ ಸಹಯೋಗದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಸುಮಾರು 9 ಲಕ್ಷ ರೂ.ಗಳ ಅನುದಾನದಡಿಯಲ್ಲಿ ಸ್ಥಳೀಯ ಮರಡಿಶಿವಾಪೂರ ಮುಖ್ಯ ರಸ್ತೆಯಿಂದ ಗುರಪ್ಪ ಮಾಕಾಳಿ ಹೊಲದವರೆಗೆ ಸುಮಾರು 3 ಕಿ.ಮೀ, ತೋಟಪಟ್ಟಿ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ಕಾರ್ಯಕ್ರಮ ಫೆ.16 ರಂದು ನಡೆಯಿತು.
ಬೆಟಗೇರಿ ತಾಪಂ ಮಾಜಿ ಸದಸ್ಯ ಬಸವಂತ ಕೋಣಿ ಮಾತನಾಡಿ, ಅರಭಾಂವಿ ಮತಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ಬೆಟಗೇರಿ ಗ್ರಾಮದಲ್ಲಿ ಇನ್ನೂ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಸ್ಥಳೀಯರ ಅವಶ್ಯಕ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಶಿವನಪ್ಪ ಮಾಳೇದ, ಸಿದ್ದಪ್ಪ ಬಾಣಸಿ, ಹನುಮಂತ ವಗ್ಗರ, ಸುಭಾಷ ಕರೆಣ್ಣವರ, ಭೀಮಶೆಪ್ಪ ಅಡಿಗೇರ, ಭೀರಪ್ಪ ಧರ್ಮಟ್ಟಿ, ಗುರಪ್ಪ ಮಾಕಾಳಿ, ರಾಮಪ್ಪ ನೀಲಣ್ಣವರ, ಸುರೇಶ ಬಾಣಸಿ, ವಿಠಲ ಚಂದರಗಿ, ಮಾರುತಿ ಬಣಜಿಗೇರ, ಯಂಕವ್ವ ಬಿ.ಪಾಟೀಲ, ಶಂಕರ ದಳವಾಯಿ, ಲಕ್ಷ್ಮಣ ಚಿನ್ನನ್ನವರ, ಕರೆಪ್ಪ ಚಂದರಗಿ, ಮಂಜು ವಗ್ಗರ, ಭೀಮಶೆಪ್ಪ ವಗ್ಗರ, ಭರಮಪ್ಪ ಪೂಜೇರಿ, ಹನುಮಂತ ಆನೆಗುಂದಿ, ಗಣ್ಯರು, ಗ್ರಾಮಸ್ಥರು ಇದ್ದರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ