ಇಂದಿನ ದಿನಮಾನದಲ್ಲಿ ಗ್ರಾಮೀಣ ಕ್ರೀಡೆಗಳು ಅವನತಿ ಅಂಚಿನಲ್ಲಿವೆ:ಅಶೋಕ ಕೋಣಿ
ಬೆಟಗೇರಿ:ಗ್ರಾಮೀಣ ವಲಯದಲ್ಲಿ ವಿವಿಧ ಕ್ರೀಡಾಕೂಟಗಳನ್ನು ಆಗಾಗ ಆಯೋಜನೆ ಮಾಡಿ ಹಳ್ಳಿಯಲ್ಲಿರುವ ಮಕ್ಕಳಿಗೆ, ಯುವಕರಿಗೆ ಕ್ರೀಡಾ ಆಸಕ್ತಿ ಬೆಳಸಬೇಕು ಎಂದು ಬೆಟಗೇರಿ ಗ್ರಾಪಂ ಸದಸ್ಯ ಅಶೋಕ ಕೋಣಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಮಾರುತಿ ದೇವರ ಓಕುಳಿ ಪ್ರಯುಕ್ತ ಸ್ಥಳೀಯ ಶ್ರೀ ಯಲ್ಲಾಲಿಂಗ ಮಠದ ಆವರಣದಲ್ಲಿ ಕರವೇ ಸ್ವಾಭಿಮಾನ ಬಣದ ನೇತೃತ್ವದಲ್ಲಿ ಮೇ.27ರಂದು ನಡೆದ 38-40ಕೆಜಿ ಕಬಡ್ಡಿ ಪಂದ್ಯಾವಳಿಗಳ ಉದ್ಘಾಟನೆ, ಬಹುಮಾನ ವಿತರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿ, ಇಂದಿನ ದಿನಮಾನದಲ್ಲಿ ಗ್ರಾಮೀಣ ಕ್ರೀಡೆಗಳು ಅವನತಿ ಅಂಚಿನಲ್ಲಿವೆ ಎಂದರು.
ಸ್ಥಳೀಯ ಗ್ರಾಪಂ ಸದಸ್ಯ ಅಶೋಕ ಕೋಣಿ, ಯುವ ಮುಖಂಡ ಈರಣ್ಣ ಬಳಿಗಾರ ಪಂದ್ಯಾವಳಿಗಳ ಉದ್ಘಾಟನೆ ನೆರವೇರಿಸಿದರು. ಹಲವು ಕಬಡ್ಡಿ ತಂಡಗಳ ನಡುವೆ ಸ್ಪರ್ಧೆ ನಡೆದ ಬಳಿಕ ವಿಜೇತ ತಂಡಗಳಿಗೆ ನಗದು ಬಹುಮಾನ, ಪದಕ, ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಟಗೇರಿ ಜೈ ಶ್ರೀರಾಮ ಕಬಡ್ಡಿ ತಂಡ ಪ್ರಥಮ, ನಿಪ್ನಾಳ ಕಬಡ್ಡಿ ತಂಡ ದ್ವಿತೀಯ, ತೋರಣಗಟ್ಟಿ ಕಬಡ್ಡಿ ತಂಡ ತೃತೀಯ, ಸವದತ್ತಿ ಪ್ರತಿಷ್ಠಾನ ಕಬಡ್ಡಿ ತಂಡ ಚತುರ್ಥ ಸ್ಥಾನ ಪಡೆದುಕೊಂಡಿವೆ ಎಂದು ಕಬಡ್ಡಿ ಪಂದ್ಯಾವಳಿ ಆಯೋಜಕ ಸಮಿತಿ ಸಂಚಾಲಕ, ಕರವೇ ಸ್ವಾಭಿಮಾನಿ ಬಣದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸುಭಾಷ ರಡ್ಡÀರಟ್ಟಿ ತಿಳಿಸಿದ್ದಾರೆ.
ಭರಮಪ್ಪ ಪೂಜೇರಿ, ಸಂಗಪ್ಪ ವೆಂಕಟಾಪೂರ, ಬಸವರಾಜ ಗುದಗಾಪೂರ, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗಣ್ಯರು, ಯುವಕರು ವಿವಿಧ ಕಬಡ್ಡಿ ತಂಡಗಳ ಪ್ರತಿನಿಧಿಗಳು, ಆಟಗಾರರು, ಕ್ರೀಡಾಭಿಮಾನಿಗಳು, ಗ್ರಾಮಸ್ಥರು, ಇದ್ದರು.