ಪರಿಸರ ಸಂರಕ್ಷಣೆಗೆ ಸದಾ ಹಂಬಲಿಸುವ ಡಾ.ಸಂಜೀವ ಹಂಜಿ.!
*ನಿತ್ಯ ಸೈಕಲ್ ಸವಾರಿ ಮಾಡುತ್ತಿರುವ ವೈದ್ಯ * ಪರಿಸರ ಪ್ರೇಮಿಗಳಿಂದ ಮೆಚ್ಚುಗೆ
ವರದಿ. ಅಡಿವೇಶ ಮುಧೋಳ. ಬೆಟಗೇರಿ: ಇಂದು ದಿನದಿಂದ ದಿನಕ್ಕೆ ವಾಹನಗಳ ಓಡಾಟ ಹೆಚ್ಚಾಗುತ್ತಿರುವುದರಿಂದ ವಾಹನಗಳು ಬಿಡುವ ಹೊಗೆಯಿಂದ ಕಲುಷಿತ ವಾತಾವರಣ ಉಂಟಾಗಿ ವಾಯು ಮಾಲಿನ್ಯದಿಂದ ಪರಿಸರ ಹಾಳಾಗುತ್ತಿದೆ. ಅಲ್ಲದೇ ಶಬ್ದ ಮಾಲಿನ್ಯವೂ ಸಹ ಉಂಟಾಗುತ್ತಿದೆ. ಈ ಹಿನ್ನಲೆಯಲ್ಲಿ ಸಾಕಷ್ಟು ಸರ್ಕಾರ ಹಾಗೂ ಪರಿಸರ ಪ್ರೇಮಿಗಳು ಶುದ್ಧ ಮಾಲಿನ್ಯ ಮತ್ತು ಅತ್ಯುತ್ತಮ ಪರಿಸರ ಸಂರಕ್ಷಣೆಗಾಗಿ ಪ್ರಯತ್ನಿಸುತ್ತಿದ್ದಾರೆ. ಇಲ್ಲೊಬ್ಬರೂ ಪರಿಸರ ಸಂರಕ್ಷಣೆಗಾಗಿ ಸದಾ ಹಂಬಲಿಸುತ್ತಿರುವ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸಂಜೀವಿನಿ ಖಾಸಗಿ ಆಸ್ಪತ್ರೆ ವೈದ್ಯ ಡಾ. ಸಂಜೀವ ಲಕ್ಷ್ಮಣ ಹಂಜಿ ಅವರು ಒಬ್ಬರು.
ವೃತ್ತಿಯಲ್ಲಿ ವೈದ್ಯನಾದರೂ ಸಂಜೀವ ಹಂಜಿ ಅವರಿಗೆ ಪರಿಸರ ಸಂರಕ್ಷಣೆಯ ಅಪ್ಪಟ ಪ್ರೇಮಿ ಅನ್ನಲು ಇವರು ಸುಮಾರು 10 ವರ್ಷದಿಂದ ಶುದ್ಧ ಮಾಲಿನ್ಯಕ್ಕಾಗಿ ಸೈಕಲ್ ಸವಾರಿ ಮಾಡುತ್ತಿರುವದೇ ಸಾಕ್ಷಿ. 46 ವರ್ಷ ವಯೋಮಾನದವರಾದರೂ ಈಗ 16 ವರ್ಷದ ಹುಡಗರಂತೆ ಕ್ರೀಯಾಶೀಲರಾಗಿರುವ ಡಾ.ಸಂಜೀವ ಹಂಜಿ ಅವರು ನಿತ್ಯ ಯೋಗದ ಜೋತೆಗೆ ವ್ಯಾಯಮದ ಕ್ರೀಯಶೀಲ ಚಟುವಟಿಕೆಗಳನ್ನು ಕೈಗೊಂಡು ಯುವಕರಿಗೆ ಆರೋಗ್ಯದ ಮತ್ತು ಶಾರೀರಿಕ ಸದೃಢತೆ ಕುರಿತು ಯುವಕರಲ್ಲಿ ಅರಿವು ಮೂಡಿಸುತ್ತಿರುವ ಕಾರ್ಯಕ್ಕೆ ಪರಿಸರ ಪ್ರೇಮಿಗÀಳು, ಸ್ಥಳೀಯ ಹಿರಿಯ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜೂ.3 ವಿಶ್ವ ಸೈಕಲ್ ಸವಾರಿ ದಿನ, ಜೂ.5 ವಿಶ್ವ ಪರಿಸರ ದಿನದಂದು ಕೇವಲ ಪೋಟೊ ಪೋಜ್ ಕೊಡುವ ಕಾರ್ಯ ಆಗಬಾರದು. ಅತ್ಯುತ್ತಮ ಪರಿಸರ ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬರೂ ನಿತ್ಯ ಪ್ರಯತ್ನಿಸಬೇಕು. ಸೈಕಲ್ ಸವಾರಿ ಮನುಷ್ಯನಿಗೆ ಪೂರ್ಣ ವ್ಯಾಯಾಮ ನೀಡುತ್ತವೆ. ಪ್ರತಿನಿತ್ಯ ಸೈಕಲ್ ಹತ್ತಿ ಪ್ರಯಾಣಿಸುವ ಹವ್ಯಾಸ ಮೈಗೊಡಿಸಿಕೊಂಡಿದ್ದೇನೆ. ಪ್ರತಿಯೊಬ್ಬರೂ ಉತ್ತಮ ಆರೋಗ್ಯ, ಕ್ರೀಯಾಶೀಲದಿಂದ ಇರಲೂ ವ್ಯಾಯಮ ಮತ್ತು ವಾಯುಮಾಲಿನ್ಯ ನಿಯಂತ್ರಣದ ಹಿತದೃಷ್ಠಿಯಿಂದ ಸೈಕಲ್ ಸವಾರಿ ಹವ್ಯಾಸ ರೂಢಿಸಿಕೊಳ್ಳಬೇಕು ಎನ್ನುತ್ತಾರೆ ಡಾ.ಸಂಜೀವ ಹಂಜಿ.