Breaking News
Home / Recent Posts / ಶ್ರೀ ಮಹಾಲಕ್ಷ್ಮೀದೇವಿ ದೇವಸ್ಥಾನದ ನೂತನ ಕಟ್ಟಡದ ಉದ್ಘಾಟನೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಣ ಹಾಗೂ ನವಗ್ರಹ ಮೂರ್ತಿಗಳ ಪ್ರತಿಷ್ಠಾನಾ ಸಮಾರಂಭ

ಶ್ರೀ ಮಹಾಲಕ್ಷ್ಮೀದೇವಿ ದೇವಸ್ಥಾನದ ನೂತನ ಕಟ್ಟಡದ ಉದ್ಘಾಟನೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಣ ಹಾಗೂ ನವಗ್ರಹ ಮೂರ್ತಿಗಳ ಪ್ರತಿಷ್ಠಾನಾ ಸಮಾರಂಭ

Spread the love

ಮೂಡಲಗಿ: ಭಾರತವು ಧರ್ಮ ಮತ್ತು ದೇವಾಲಯಗಳ ತಾನವಾಗಿದು, ಜಗತ್ತಿನಲ್ಲಿ ಅತ್ತಿ ಹೆಚ್ಚು ದೇವಸ್ಥಾನ ಹೊಂದಿದ ದೇಶವಾಗಿದೆ, ಎಲ್ಲ ಕಡೆಯಲ್ಲಿ ದೇವರಿದ್ದು ಆದರೆ ದೇವಸ್ಥಾನದಲ್ಲಿರುವ ಮೂರ್ತಿಗಳ ಮೂಲಕ ದೇವರು ಪ್ರಕಟವಾಗುತ್ತಾನೆ, ಧಾನ, ಧರ್ಮ, ಪರೋಪಕಾರ, ಪುಣ್ಯ ಕಾರ್ಯಗಳನ್ನು ಮಾಡುವ ಮೂಲಕ ಲಕ್ಷ್ಮೀದೇವಿಯನ್ನು ಒಲಸಿಕೊಳ್ಳಬೇಕು ಎಂದು ಶ್ರೀಶೈಲ ಪೀಠದ ಜಗದ್ದುರು ಡಾ// ಚನ್ನಸಿದ್ದರಾಮ ಪಂಡಿತರಾದ್ಯ ಶಿವಾಚಾರ್ಯ ಭಗವತ್ಪಾದರರು ಹೇಳಿದರು.
ಅವರು ಮಂಗಳವಾರದಂದು ತಾಲೂಕಿನ ಮಸಗುಪ್ಪಿ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮೀದೇವಿ ದೇವಸ್ಥಾನದ ನೂತನ ಕಟ್ಟಡದ ಉದ್ಘಾಟನೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಣ ಹಾಗೂ ನವಗ್ರಹ ಮೂರ್ತಿಗಳ ಪ್ರತಿಷ್ಠಾನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ದೇವರಲ್ಲಿ ಇಡುವ ಭಕ್ತಿ ಮೂಲಕ ನಮ್ಮ ಬಧುಕಿನಲ್ಲಿ ಶಾಂತಿ , ನೆಮ್ಮದಿ, ಸಂತೃಪ್ತಿ ಪಡೆದುಕೊಳ್ಳಬೇಕು. ಮಸಗುಪ್ಪಿ ಭಕರು ಸೇರಿ ಕಟ್ಟಿರುವ ಭವ್ಯ ದೇವಸ್ಥಾನವು ಮಾದರಿಯಾಗಿದೆ ಎಂದರು.
ನಿಡಸೋಸಿಯ ಶ್ರೀ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಜಿ ಮಾತನಾಡಿ, ದೇವಸ್ಥಾನಗಳನ್ನು ನಿರ್ಮಿಸುವದರಿಂದ ಮನುಷ್ಯನಿಗೆ ಶಾಂತಿ, ನೆಮ್ಮದಿ ನೀಡುತ್ತದೆ. ದೇವಸ್ಥಾನಗಳ ಕಳಸಾರೋಹಣ ನಿರ್ಮಿಸಿವದರಿಂದ ದೇವಸ್ಥಾನದ ಶಕ್ತಿ ಹೆಚ್ಚುತದೆ, ದೇವಸ್ಥಾನಕ್ಕೆ ಬೇಟ್ಟಿ ನೀಡಿದ ಭಕ್ತರಲ್ಲಿ ಬದಲಾವಣೆ ಕಾಣಬಹುದು ಎಂದ ಅವರು ಮಸಗುಪ್ಪಿ ಮಹಾಲಕ್ಷ್ಮೀದೇವಿ ದೇವಸ್ಥಾ ಹಿಂದಿನ ಕಾಲ ಕೆತ್ತನೆ ಕಾರ್ಯ ನೆನಪಿಸುವಂತಿದೆ, ದೇವಸ್ಥನಕ್ಕೆ ಕಳಸಾರೋಹಣ ಸೇರಿದಂತೆ ನವಗ್ರಹಗಳು ಎಲ್ಲವನ್ನು ನಿರ್ಮಿಸಿರುವುದು ಶ್ಲಾಘನಿವಾದದ್ದು ಎಂದರು.
ಹೊಸದುರ್ಗದ ಶ್ರೀ ಪುರುಷೋತ್ತಮಾನಂದ ಪುರಿ ಮಹಾಸ್ವಾಮಿಜಿ ಮಾತನಾಡಿ, ಮನುಷ್ಯನಿಗೆ ಸುಖ, ಶಾಂತಿ, ನೆಮ್ಮದಿ ಬೇಕಾದರೆ ಧರ್ಮ ಮಾರ್ಗದಲ್ಲಿ ನಡೆಯಬೇಕು, ಧರ್ಮವನ್ನು ಯಾರು ರಕ್ಷಿಸುತ್ತಾರೆ ಅಂತವರನ್ನು ಧರ್ಮ ಕಾಪಡುತ್ತದೆ ಎಂದರು.
ಗೋಕಾಕ ಲಕ್ಷ್ಮೀ ಶಿಕ್ಷಣ ಸಂಸ್ಥೆಯ ನಿರ್ದೇಶಕ ಜಾರಕಿಹೊಳಿ ಮಾತನಾಡಿ, ಇಂದಿನ ಯುವ ಪೀಳಿಗೆ ದುಶ್ಚಟದಿಂದ ದೂರವಿದು, ಧಾರ್ಮಿಕತೆಗೆ ಒಲವುತೋರುವ ಮೂಲಕ ತಮ್ಮ ಜೀವನವನ್ನು ಪಾವನಗೋಳಿಸಿಕೊಳ್ಳ ಬೇಕೆಂದರು.
ಸುಣಧೋಳಿ ಜಡಿಸಿದ್ಧೇಶ್ವರ ಮಠದ ಪೀಠಾಧಿಪತಿ ಶ್ರೀ ಶಿವಾನಂದ ಸ್ವಾಮೀಜಿಗಳ ನೇತೃತ್ವ ವಹಿಸಿದ್ದರು,
ವೇದಿಕೆಯಲ್ಲಿ ಬಾಗೋಜಿಕೊಪ್ಪದ ಡಾ:ಶಿವಲಿಂಗಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಬೈಲಹೊಂಗಲದ ಮಹಾಂತೇಶ ಶಾಸ್ತ್ರೀಗಳು, ಕಪರಟ್ಟಿಯ ಶ್ರೀ ಬಸವರಾಜ ಹಿರೇಮಠ ಶ್ರೀಗಳು, ಜೋಕನಟ್ಟಿ ಶ್ರೀಗಳು ಇದ್ದರು.
ಸಮಾರಂಭ ದೇವಸ್ಥಾನದ ಕಮೀಟಿಯ ಪದಾಧಿಕಾರಿಗಳು ಮತ್ತು ಮಸಗುಪ್ಪಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿದರು
ದೇವಸ್ಥಾನ ನಿರ್ಮಾಣಕ್ಕೆ ಅವಿರತ ಶ್ರಮೀಸಿದ ಕಲ್ಲಪ್ಪ ಮಳಲಿ ದಂಪತಿಗಳನ್ನು ಹಾಗೂ ದಾನಿಗಳನ್ನು, ಕಟ್ಟಡ ನಿರ್ಮಾಪಕರನ್ನು ಪೂಜ್ಯರು ಸತ್ಕರಿಸಿ ಗೌರವಿಸಿದರು. ಬಸವರಾಜ ಬುಜನ್ನವರ ಪ್ರಾಸ್ತಾವಿಕವಾಗಿ ಮಾತನಾಡಿದರು, ರಾಮಚಂದ್ರ ಕಾಕಡೆ ನಿರೂಪಿಸಿದರು, ಭರಮಪ್ಪ ಗಂಗಣ್ಣವರ ಸ್ವಾಗತಿಸಿದರು. ಈಶ್ವರ ಗಾಡವಿ ವಂದಿಸಿದರು


Spread the love

About inmudalgi

Check Also

ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ

Spread the loveಮೂಡಲಗಿ: ಮೂಡಲಗಿಯ ಪುರಸಭೆ ವಾರ್ಡ ಸಂಖ್ಯೆ 15ರಲ್ಲಿ ಚರಂಡಿ ನಿರ್ಮಾಣಕ್ಕೆ ಬುಧವಾರ ಪುರಸಭೆ ಸದಸ್ಯ ಸಂತೋಷ ಸೋನವಾಲಕರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ