ಬಕ್ರೀದ್ ಹಬ್ಬವನ್ನು ಶಾಂತಿ-ಸೌಹಾರ್ದತೆಯಿಂದ ಆಚರಿಸಬೇಕು: ಡಿವೈಎಸ್‍ಪಿ ಡಿ.ಎಚ್.ಮುಲ್ಲಾ
ಬೆಟಗೇರಿ:ಸಮೀಪದ ಕುಲಗೋಡ ಪೊಲೀಸ್ ಠಾಣೆಯ ಸಹಯೋಗದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದಲ್ಲಿ ಜೂ.26ರಂದು ನಡೆದ ಸ್ಥಳೀಯ ಮುಸ್ಲಿಂ ಸಮಾಜ ಮುಖಂಡರ ಶಾಂತಿಪಾಲನಾ ಸಭೆ ನಡೆಯಿತು.
ಗೋಕಾಕ ಡಿವೈಎಸ್‍ಪಿ ಡಿ.ಎಚ್.ಮುಲ್ಲಾ ಮುಖ್ಯ ಅತಿಥಿಗಳಾಗಿ ಮಾತನಾಡಿ, ಬಕ್ರೀದ್ ಹಬ್ಬವನ್ನು ಸೌಹಾರ್ದತೆಯಿಂದ, ಯಾವುದೇ ಅಹಿತಕರ ಘಟನೆ ನಡೆಯದಂತೆÀ ಮುಸ್ಲಿಂ ಸಮಾಜದ ಮುಖಂಡರು ಮುತುವರ್ಜಿವಹಿಸಿ ಶಾಂತತೆಯಿಂದ ಹಬ್ಬಗಳನ್ನು ಆಚರಣೆ ಮಾಡಬೇಕೆಂದರು. ಸ್ಥಳೀಯ ಮುಸ್ಲಿಂ ಸಮಾಜದ ಬಾಂಧವರು ಶಾಂತಿ, ಸೌಹಾರ್ದತೆ ಬಕ್ರೀದ್ ಹಬ್ಬವನ್ನು ಆಚರಿಸಬೇಕು ಎಂದು ಹೇಳಿದರು.
ಕುಲಗೋಡ ಪೊಲೀಸ್ ಠಾಣೆ ಪಿಎಸ್‍ಐ ಜಿ.ಎಸ್.ಪಾಟೀಲ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುಲಗೋಡ ಪೊಲೀಸ್ ಠಾಣೆ ವ್ಯಾಪ್ತಿಯ ಯಾದವಾಡ, ಲಕ್ಷ್ಮೇಶ್ವರ, ಕೌಜಲಗಿ ಸೇರಿದಂತೆ ಹಲವು ಹಳ್ಳಿಗಳಲ್ಲಿ ಮುಸ್ಲಿಂ ಬಾಂದವರು ಬಕ್ರೀದ್ ಹಬ್ಬವನ್ನು ಆಚರಿಸಲು ಸ್ಥಳೀಯ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಯಾವುದೇ ಹಬ್ಬ ಹರಿದಿನಗಳಲ್ಲಿ ಕಾನೂನು ಬಾಹಿರ ಚಟುವಟಿಕೆ ಕೈಗೊಂಡವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದರು.
ಎಮ್.ಎಮ್.ಮುಲ್ತಾನಿ, ಜಾಕೀರ ಜಮಾದಾರ, ಅಲ್ಲಾಭಕ್ಷ ಹುನ್ನೂರ, ಡಿ.ಜೆ.ಮುಲ್ತಾನಿ, ಎಮ್.ಡಿ.ಖಾಜಿ, ಕುತುಬುದ್ಧೀನ ಮುಲ್ತಾನಿ, ಮೈಬೂಬ್ ಮುಲ್ತಾನಿ, ಕೌಜಲಗಿ ಗ್ರಾಮದ ಬೀಟ್ ಪೊಲೀಸ್ ಪೇದೆಗಳಾದ ಎಂ.ಬಿ.ಆಡಿನ, ಕಲ್ಮೇಶ ಬಾಗಲಿ, ಸ್ಥಳೀಯ ಮುಸ್ಲಿಂ ಸಮಾಜದ ಮುಖಂಡರು, ಸ್ಥಳೀಯರು ಇದ್ದರು.