Breaking News
Home / Recent Posts / ಗ್ರಾಮದೇವತೆ ಜಾತ್ರಾಮಹೋತ್ಸವಕ್ಕೆ ಸಿದ್ದವಾದ ಗ್ರಾಮ* ಎಲ್ಲರ ಮನೆ-ಮನಗಳಲ್ಲಿ ಸಂಭ್ರಮ

ಗ್ರಾಮದೇವತೆ ಜಾತ್ರಾಮಹೋತ್ಸವಕ್ಕೆ ಸಿದ್ದವಾದ ಗ್ರಾಮ* ಎಲ್ಲರ ಮನೆ-ಮನಗಳಲ್ಲಿ ಸಂಭ್ರಮ

Spread the love

ಬೆಟಗೇರಿ ಗ್ರಾಮದಲ್ಲಿ ಎತ್ತನೋಡಿದತ್ತ ಬ್ಯಾನರ್‍ಗಳದ್ದೇ ದಬ್ಬಾರ್..!

*ಗ್ರಾಮದೇವತೆ ಜಾತ್ರಾಮಹೋತ್ಸವಕ್ಕೆ ಸಿದ್ದವಾದ ಗ್ರಾಮ* ಎಲ್ಲರ ಮನೆ-ಮನಗಳಲ್ಲಿ ಸಂಭ್ರಮ

ವರದಿ: ಅಡಿವೇಶ ಮುಧೋಳ.
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದೇವತೆ ಶ್ರೀದ್ಯಾಮವ್ವದೇವಿ ಜಾತ್ರಾಮಹೋತ್ಸವಕ್ಕೆ ಬೆಟಗೇರಿ ಗ್ರಾಮ ಸಿದ್ದವಾಗಿದೆ. ಗ್ರಾಮದ ಮನೆ-ಮನಗಳಲ್ಲಿಯೂ ಸಂಭ್ರಮದ ವಾತಾವರಣ ಕಂಡುಬರುತ್ತಿದೆ. ಐದು ವರ್ಷಕ್ಕೂಮ್ಮೆ ಐದು ದಿನಗಳ ಕಾಲ ನಡೆಯುವ ಸ್ಥಳೀಯ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ಇದೇ ಜುಲೈ 24, ಸೋಮವಾರ ಆರಂಭವಾಗಲಿದೆ.


ಪ್ರಸಕ್ತ ವರ್ಷದ ಜಾತ್ರೆಯಲ್ಲಿ ಭಕ್ತರು ರಾಸಾಯನಿಕ ರಹಿತ ಉತ್ತಮ ಗುಣಮಟ್ಟದ ಸುಮಾರು ಐದಾರು ಟನ್‍ಗೂ ಅಧಿಕ ಭಂಡಾರ ಹಾರಿಸುವ ನಿರೀಕ್ಷೆ ಇದೆ. ಗ್ರಾಮದ ಖುಲ್ಲಾ ಜಾಗೆಯಲ್ಲಿ ಅಂಗಡಿಗಳ ಸಾಲು ನೆಲೆಯಾಗಿವೆ. ವಿಶೇಷ ಜೋಕಾಲಿ, ನಾಟಕ ಹಾಗೂ ಮಕ್ಕಳ ಆಟಿಕೆ ಉಪಕರಣಗಳ ಜೋಡಣೆ ಮುಂತಾದ ಮನರಂಜನೆ ಸೌಲಭ್ಯಗಳ ಸಿದ್ದತೆ ಭರದಿಂದ ಸಾಗಿದೆ.
ಝಗಮಗಿಸುವ ವಿದ್ಯುತ್ ದೀಪಗಳು: ಗ್ರಾಮದೇವಿ ಜಾತ್ರೆ ಪ್ರಯುಕ್ತ ಪುರದೇವರ ಎಲ್ಲ ದೇವಾಲಂiÀi, ಇಲ್ಲಿಯ ಮಹಾನ್ ಪುರುಷರ ವೃತ್ತಗಳಿಗೆ, ಗ್ರಾಮದ ಪ್ರಮುಖ ಬೀದಿ, ಸ್ಥಳ, ಓಣಿಗಳ ಪ್ರತಿ ಮನೆಗಳನ್ನು ರಂಗು ರಂಗಿನ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಗ್ರಾಮದಲ್ಲೇಡೆ ವಿದ್ಯುತ್ ಕಂಬಗಳಿಗೆ ವಿದ್ಯುತ್ ದೀಪ ಸ್ಥಳೀಯ ಗ್ರಾಮ ಪಂಚಾಯತ ವತಿಯಿಂದ ಅಳವಡಿಸಲಾಗಿದೆ.
ಎತ್ತನೋಡಿದತ್ತ ಕಟೌಟ್: ಗ್ರಾಮದ ಪ್ರಮುಖ ಬೀದಿ, ಸರ್ಕಲ್, ಸ್ಥಳ, ಓಣಿಗಳಲ್ಲಿ ಯುವಕರು, ಮಕ್ಕಳು, ವಿವಿಧ ಸಂಘ-ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು, ಗಣ್ಯರು ಹಾಗೂ ಸ್ವಾಮೀಜಿಗಳ ಭಾವಚಿತ್ರವಿರುವ ಒಂದಕ್ಕಿಂತ ಒಂದು ಎತ್ತರದ, ದೊಡ್ಡದಾದ ಹಾಗೂ ವಿವಿಧ ಅಳತೆಯುಳ್ಳ ಸುಮಾರು 200ಕ್ಕೂ ಹೆಚ್ಚು ಕಟೌಟ್‍ಗಳು ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಸರ್ವರನ್ನೂ ಸ್ವಾಗತಿಸುತ್ತಿವೆ.
ರಂಗು ರಂಗಾದ ಮನೆಗಳು: ಗ್ರಾಮದೇವತೆ ಜಾತ್ರೆ ಸಲುವಾಗಿ ಗ್ರಾಮಸ್ಥರು ಕಳೆದ 10-15 ದಿನಗಳಿಂದ ತಮ್ಮ ಮನೆಗಳಿಗೆ ರಂಗು ರಂಗಾದ ಬಣ್ಣ ಸುಣ್ಣ ಹಚ್ಚಿದ್ದಾರೆ. ಸ್ಥಳೀಯರ ಉಡುಗೆ, ತೊಡುಗೆ ಖರೀದಿಯೂ ಸಹ ಬಲು ಜೋರಾಗಿದೆ. ಅಲ್ಲದೇ ಬೀಗರು, ಬಂಧು, ಬಾಂದವರಿಗೆ ಜಾತ್ರಾ ಮಹೋತ್ಸವಕ್ಕೆ ಬರುವಂತೆ ಕರೆಯೋಲೆಯ ಆಹ್ವಾನ ನೀಡಿದ್ದಾರೆ. ಎಲ್ಲರ ಮನೆ-ಮನಗಳಲ್ಲಿ ಜಾತ್ರೆಯ ಸಂಭ್ರಮ ಮನೆ ಮಾಡಿದೆ. ಹೀಗಾಗಿ ಸುತ್ತಲಿನ ಹತ್ತೂರಿನಲ್ಲಿಯೇ ಬೆಟಗೇರಿ ಗ್ರಾಮದೇವತೆ ಜಾತ್ರೆ ಜೋರಾಗಿ ನಡೆಯಲಿದೆ.
ಸ್ಥಳೀಯರಲ್ಲಿ ಮನವಿ: ಈ ಸಲದ ಗ್ರಾಮದೇವಿ ಜಾತ್ರಾಮಹೋತ್ಸವ ಶಾಂತಿ, ಸೌಹಾರ್ದತೆ, ವಿಜೃಂಭನೆಯಿಂದ ಆಚರಿಸಿ, ಯಶಸ್ವಿಗೊಳಿಸುವಂತೆ ಬೆಟಗೇರಿ ಗ್ರಾಮದ ಸರ್ವ ಸಮುದಾಯದ ಹಿರಿಯ ನಾಗರಿಕರು, ಮುಖಂಡರು, ಯುವಕರಲ್ಲಿ ಇಲ್ಲಿಯ ಗ್ರಾಮದೇವತೆ ದ್ಯಾಮವ್ವದೇವಿ ಜಾತ್ರಾಮಹೋತ್ಸವ ಆಚರಣಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಮನವಿ ಮಾಡಿಕೊಂಡರು.
“ಬೆಟಗೇರಿ ಗ್ರಾಮದೇವತೆ ಜಾತ್ರೆಗೆ ಸರ್ವರನ್ನೂ ಸ್ವಾಗತಿಸುವ ಇಷ್ಟೋಂದು ಕಟೌಟ್‍ಗಳು ಬೆಳಗಾವಿ ಜಿಲ್ಲೆಯ ಯಾವ ಹಳ್ಳಿಗಳಲ್ಲಿ ಇರಲಿಕ್ಕಿಲ್ಲ, ಗ್ರಾಮದೆಲ್ಲಡೆ ಯುವಕರು ನಾ..ಮುಂದೂ.., ತಾ…ಮುಂದೂ ಅಂತಾ ವಿವಿಧ ಅಳತೆ ಕಟೌಟ್‍ಗಳನ್ನು ಮಾಡಿಸಿ, ಹಲವು ದಿನಗಳ ಹಿಂದೆಯೇ ಅವುಗಳನ್ನು ಕಟ್ಟಲು ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಕಟೌಟ್ ಜಾಗೆ ಗುರುತಿಸಿಕೊಂಡಿದ್ದು ವಿಶೇಷ ಎನಿಸುವಂತಿದೆ.” 

ವಿಠಲ ಲಕ್ಷ್ಮಣ ಕೋಣಿ. ಯುವ ಮುಖಂಡ ಬೆಟಗೇರಿ. ತಾ.ಗೋಕಾಕ


Spread the love

About inmudalgi

Check Also

ಖಾನಟ್ಟಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಉತ್ತಮ ಸಹಕಾರ ಸಂಘ ಪ್ರಶಸ್ತಿ

Spread the loveಮೂಡಲಗಿ : ಬೆಳಗಾವಿ ಜಿಲ್ಲಾ ಉತ್ತಮ ಸಹಕಾರಿ ಸಂಘ ಪ್ರಶಸ್ತಿ  ಬೆಳಗಾವಿಯಲ್ಲಿ ನಡೆದ 71ನೇ ಅಖಿಲ ಭಾರತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ