ತಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿರಿಸಿಕೊಳ್ಳಿ: ಸುರೇಶ ಬಾಣಸಿ
ಬೆಟಗೇರಿ:ಗ್ರಾಮದ ಪ್ರತಿಯೊಬ್ಬರೂ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ತಮ್ಮ ಮನೆ ಸುತ್ತಲಿನ ಪರಿಸರ ಸ್ವಚ್ಛವಾಗಿರಿಸಿಕೊಳ್ಳಬೇಕು ಎಂದು ಬೆಟಗೇರಿ ಗ್ರಾಮ ಪಂಚಾಯತಿ ಕರ ವಸೂಲಿಗಾರ ಸುರೇಶ ಬಾಣಸಿ ಹೇಳಿದರು.
ಬೆಳಗಾವಿ ಜಿಪಂ ಮತ್ತು ಗೋಕಾಕ ತಾಪಂ ಹಾಗೂ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಬೆಟಗೇರಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸ್ವಚ್ಛತಾ ಭಾರತ್ ಮಿಷನ್ (ಗ್ರಾ) ಅಡಿಯಲ್ಲಿ ಸ್ವಚ್ಛತೆಯೇ ಸೇವಾ ಆಂದೋಲನ ಕಾರ್ಯಕ್ರಮದ ಪ್ರಯುಕ್ತ ಅ.1ರಂದು ನಡೆದ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಥಳೀಯ ಗ್ರಾಮ ಪಂಚಾಯತಿ ಕಸ ವಿಲೇವಾರಿ ಸಿಬ್ಬಂದಿಗೆ ಸ್ಥಳೀಯರು ಸಹಕಾರ ನೀಡಬೇಕು.
ಸಾಂಕ್ರಾಮಿಕ ರೋಗ ರುಜೀನ ಮುಕ್ತ ಗ್ರಾಮವಾಗಿರಿಸಿಕೊಳ್ಳಬೇಕು ಎಂದು ಇಲ್ಲಿಯ ಸಾರ್ವಜನಿಕರಿಗೆ ತಿಳಿಸಿದರು.
ಬೆಟಗೇರಿ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ಕಸ ವಿಲೇವಾರಿ ಸಿಬ್ಬಂದಿ, ಸ್ಥಳೀಯರು, ಬೆಟಗೇರಿ ಗ್ರಾಮದ ಪ್ರಮುಖ ಸ್ಥಳ, ಓಣಿಗಳ ರಸ್ತೆ ಬದಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಬಸವರಾಜ ಪಣದಿ, ಮಂಜು ಕಂಬಿ, ಶಿವಾನಂದ ಐದುಡ್ಡಿ, ಈರಪ್ಪ ದಂಡಿನ, ವಿಠಲ ಚಂದರಗಿ, ಗ್ರಾಮ ಪಂಚಾಯ್ತಿ ಸದಸ್ಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ಕಸ ವಿಲೇವಾರಿ ಸಿಬ್ಬಂದಿ, ಸ್ಥಳೀಯರು, ಇತರರು ಇದ್ದರು.