Breaking News
Home / Recent Posts / ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಗೋದಾಮು ನೂತನ ಕಟ್ಟಡದ ಭೂಮಿ ಪೂಜೆ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಗೋದಾಮು ನೂತನ ಕಟ್ಟಡದ ಭೂಮಿ ಪೂಜೆ

Spread the love

ಬೆಟಗೇರಿ:ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ರೈತರು ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗಿವೆ ಎಂದು ಭಾಗೋಜಿಕೊಪ್ಪದ ಡಾ.ಶಿವಲಿಂಗ ಮುರುಘ ರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಜಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಗೋದಾಮು ನೂತನ ಕಟ್ಟಡದ ಭೂಮಿ ಪೂಜೆ ಶುಕ್ರವಾರದಂದು ನೆರವೇರಿಸಿ ಮಾತನಾಡಿ, ಸಹಕಾರಿ ಸಂಘಗಳು ಗ್ರಾಮೀಣ ವಲಯದ ಜನರ ಜೀವನಾಡಿಗಳಾಗಿವೆ ಎಂದರು.
ಸ್ಥಳೀಯ ಪಿಕೆಪಿಎಸ್ ಮುಖ್ಯ ಕಾರ್ಯನಿರ್ವಾಹಕ ಅಡಿವೆಪ್ಪ ಮುರಗೋಡ ಪ್ರಾಸ್ತಾವಿಕವಾಗಿ ಮಾತನಾಡಿ, ಸುಮಾರು 26 ಲಕ್ಷ ರೂ.ಗಳ ವೆಚ್ಚದಲ್ಲಿ ಗೋದಾಮು ನೂತನ ಕಟ್ಟಡ ನಿರ್ಮಿಸಲಾಗುವುದು ಎಂದು ತಿಳಿಸಿದರು. ಈರಯ್ಯ ಹಿರೇಮಠ ಸಮ್ಮುಖ, ಪಿಕೆಪಿಎಸ್ ಅಧ್ಯಕ್ಷ ಚಂದ್ರಶೇಖರ ನೀಲಣ್ಣವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಲಕ್ಷ್ಮಣ ನೀಲಣ್ಣವರ, ಲಕ್ಷ್ಮಣ ಚಂದರಗಿ, ಈಶ್ವರ ಬಳಿಗಾರ, ಧರೆಪ್ಪ ಚಂದರಗಿ, ಈರಪ್ಪ ದೇಯಣ್ಣವರ, ಈಶ್ವರ ಮುಧೋಳ, ಶಿವಾಜಿ ನೀಲಣ್ಣವರ, ಮಲ್ಲಪ್ಪ ಸೋಮಗೌಡ್ರ, ಶ್ರೀಶೈಲ ಗಾಣಗಿ, ಸುಭಾಷ ಹಾವಾಡಿ, ಗುರಬಸಪ್ಪ ಮಾಳಶೆಟ್ಟಿ, ಬಸವರಾಜ ಪಣದಿ, ಶಿವನಪ್ಪ ಮಾಳೇದ, ರಾಮಣ್ಣ ಮುಧೋಳ, ರಾಮಣ್ಣ ನೀಲಣ್ಣವರ, ಈರಪ್ಪ ಬಳಿಗಾರ, ಗುಳಪ್ಪ ಅಜ್ಜನಕಟ್ಟಿ, ಗೌಡಪ್ಪ ಮೇಳೆಣ್ಣವರ, ಬಾಳಪ್ಪ ಮಾಳೇದ, ಕೃಷಿ ಪತ್ತಿನ ಸಂಘದ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ, ಗ್ರಾಮಸ್ಥರು ಇದ್ದರು.


Spread the love

About inmudalgi

Check Also

ಕನ್ನಡ ನಾಡು ಎಲ್ಲ ಕ್ಷೇತ್ರದಲ್ಲಿ ಬಹಳಷ್ಟು ಶ್ರೀಮಂತವಾಗಿದೆ : ಈರಣ್ಣ ಬಳಿಗಾರ

Spread the love ಬೆಟಗೇರಿ:ಕನ್ನಡ ನಾಡು, ನುಡಿಗಾಗಿ ತಮ್ಮ ಬದುಕನ್ನೆ ತ್ಯಾಗ ಮಾಡಿದ ಮಹಾನ್ ವ್ಯಕ್ತಿಗಳನ್ನು ಇಂದು ಪ್ರತಿಯೊಬ್ಬರೂ ಸ್ಮರಿಸಬೇಕು. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ