Breaking News
Home / Recent Posts / ಭುವನೇಶ್ವರಿದೇವಿ-ಕೃಷ್ಣಶರ್ಮರ ಭಾವಚಿತ್ರದ ಮೆರವಣಿಗೆ

ಭುವನೇಶ್ವರಿದೇವಿ-ಕೃಷ್ಣಶರ್ಮರ ಭಾವಚಿತ್ರದ ಮೆರವಣಿಗೆ

Spread the love

ಕನ್ನಡ ನಾಡಿನ ಸಾಹಿತ್ಯ, ಕಲೆ ಜಗತ್ತಿನಲ್ಲಿಯೇ ಶ್ರೇಷ್ಠವಾಗಿದೆ: ಈರಣ್ಣ ಬಳಿಗಾರ

ಭುವನೇಶ್ವರಿದೇವಿ-ಕೃಷ್ಣಶರ್ಮರ ಭಾವಚಿತ್ರದ ಮೆರವಣಿಗೆ

ಮಹಾನ್ ವ್ಯಕ್ತಿಗಳ ಆಕರ್ಷಕ ರೂಪಕಗಳು

ಬೆಟಗೇರಿ: ಕನ್ನಡ ನಾಡು, ನುಡಿಗಾಗಿ ತಮ್ಮ ಬದುಕನ್ನೆ ತ್ಯಾಗ ಮಾಡಿದ ಮಹಾನ್ ವ್ಯಕ್ತಿಗಳನ್ನು ಇಂದು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಘಟಕದ ಕರವೇ ಅಧ್ಯಕ್ಷ ಈರಣ್ಣ ಬಳಿಗಾರ ಹೇಳಿದರು.
ಸ್ಥಳೀಯ ಕರ್ನಾಟಕ ರಕ್ಷಣಾ ವೇದಿಕೆ ಸಹಯೋಗದಲ್ಲಿ ನ.1 ರಂದು ನಡೆದ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ, ಕನ್ನಡ ನಾಡಿನ ಸಾಹಿತ್ಯ, ಕಲೆ, ಭಾಷೆ, ಸಂಸ್ಕøತಿ, ಸಂಪ್ರದಾಯ, ಜಗತ್ತಿನಲ್ಲಿಯೇ ಶ್ರೇಷ್ಠವಾಗಿದೆ ಎಂದರು.


ಇಲ್ಲಿಯ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಕನ್ನಡಪರ ಹಲವು ಗೀತೆಗಳನ್ನು ಪ್ರಸ್ತುತ ಪಡಿಸಿದ ಬಳಿಕ ನಾಡಿನ ಮಹಾನ್ ವ್ಯಕ್ತಿಗಳ ಆಕರ್ಷಕ ರೂಪಕ, ಕರಡಿ ಮಜಲು, ಜಾನಪದ ಕಲಾ ತಂಡ ಹಾಗೂ ಸಕಲ ವಾದ್ಯಮೇಳದವರಿಗೆ ಕಿರು ಕಾಣಿಕೆ, ಬಹುಮಾನಗಳನ್ನು ನೀಡಿ ಸತ್ಕರಿಸಲಾಯಿತು.
ಸ್ಥಳೀಯ ವಿವಿಧ ವೃತ್ತದಲ್ಲಿರುವ ಮಹಾನ್ ಪುರುಷರ ಪುತ್ಥಳಿಗಳಿಗೆ ಮುಂಜಾನೆ 9 ಗಂಟೆಗೆ ಪೂಜೆ, ಪುಷ್ಪಾರ್ಪನೆ ಸಮರ್ಪಿಸಿದ ಬಳಿಕ ಇಲ್ಲಿಯ ಅಶ್ವಾರೂಢ ಬಸವೇಶ್ವರ ವೃತ್ತದಿಂದ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಕನ್ನಡ ಪರ ಜಯಘೋಷ, ನಾಡಿನ ಮಹಾನ್ ವ್ಯಕ್ತಿಗಳ ಆಕರ್ಷಕ ರೂಪಕ, ಕರಡಿ ಮಜಲು, ಜಾನಪದ ಕಲಾ ತಂಡಗಳು ಹಾಗೂ ಸಕಲ ವಾದ್ಯಮೇಳಗಳೊಂದಿಗೆ ಭುವನೇಶ್ವರಿ ದೇವಿ, ಕೃಷ್ಣಶರ್ಮರ ಭಾವಚಿತ್ರದ ಭವ್ಯ ಮೆರವಣಿಗೆ ಸಡಗರದಿಂದ ನಡೆಯಿತು.


ಮಂಜು ಪತ್ತಾರ, ಭರಮಣ್ಣ ಪೂಜೇರ, ವಿಜಯ ಹಿರೇಮಠ, ಮಾಯಪ್ಪ ಕೋಣಿ, ವೀರಭದ್ರ ದೇಯಣ್ಣವರ, ನಾಗೇಶ ಬೆಳಗಲಿ, ರಾಘು ಬೆಟಗೇರಿ, ಮಹಾದೇವ ತಪಸಿ, ಫಿರೋಜ್ ಮಿರ್ಜಾನಾಯ್ಕ, ಈರಣ್ಣ ದಂಡಿನ, ಬಸವರಾಜ ಗುದಗಾಪೂರ, ಗಿರೀಶ ಗಾಣಗಿ, ಶಿವು ನಾಯ್ಕರ, ಕಾರ್ತಿಕ ತೆರದಾಳ, ಪ್ರದೀಪ ಪತ್ತಾರ, ಸುಭಾಷ ರಡರಟ್ಟಿ, ಕನ್ನಡ ಪರ ಹೋರಾಟಗಾರರು, ಕರವೇ ಕಾರ್ಯಕರ್ತರು, ಗಣ್ಯರು, ಯುವಕರು, ಗ್ರಾಮಸ್ಥರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉಪನ್ಯಾಸಕರು, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಶಿಕ್ಷಕರು ಭವ್ಯ ಮೆರವಣಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ