ಬೆಟಗೇರಿ ಗ್ರಾಮದ ದುರ್ಗಾದೇವಿ ಜಾತ್ರಾ ಮಹೋತ್ಸವ
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ದುರ್ಗಾದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ನ.10ರಿಂದ ನ.11ರವರೆಗೆ ನಡೆಯಲಿದೆ.
ನ.10ರಂದು ಬ್ರಾಹ್ಮೀ ಮೂಹೂರ್ತದಲ್ಲಿ ಬೆಳಿಗ್ಗೆ 5 ಗಂಟೆಗೆ ದುರ್ಗಾದೇವಿ ದೇವರ ಗದ್ದುಗೆಗೆ ಅಭಿಷೇಕ, ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದ ಬಳಿಕ ಸಾಯಂಕಾಲ 5 ಗಂಟೆಗೆ ಪುರದೇವರುಗಳ ಪಲ್ಲಕ್ಕಿಗಳನ್ನು ಬರಮಾಡಿಕೊಳ್ಳುವದು ನಂತರ ಎಲ್ಲಲಾ ದೇವರುಗಳಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ. ನ.11ರಂದು ಬೆಳಗ್ಗೆ 6 ಗಂಟೆಗೆ ದುರ್ಗಾದೇವಿ ದೇವರ ಗದ್ದುಗೆಗೆ ಪೂಜೆ, ಪುನಸ್ಕಾರ ಕಾರ್ಯಕ್ರಮ ಜರುಗಿದ ಬಳಿಕ ಮುಂಜಾನೆ 10 ಗಂಟೆಗೆ ಹಾಲಲ್ಲಿ ಮತ್ತು ಓಪನ್ ಟಗರಿನ ಕಾಳಗ ಸ್ಫರ್ಧೆ, ವಿಜೇತರಾದವರಿಗೆ ಬಹುಮಾನ ವಿತರಣೆ ಜರುಗಲಿದೆ.
ಸ್ಥಳೀಯ ತಾಪಂ, ಗ್ರಾಪಂ ಹಾಗೂ ವಿವಿಧ ಸಂಘ, ಸಂಸ್ಥೆಗಳ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಸದಸ್ಯರು, ಗಣ್ಯರು, ಶ್ರೀದೇವಿ ಭಕ್ತರು, ಪಾಲ್ಗೊಳ್ಳಲಿದ್ದಾರೆ. ಟಗರಿನ ಕಾಳಗ ಸ್ಪರ್ಧೆಗೆ ಹೆಸರು ನೊಂದಾಯಿಸಲು ಮೊಬೈಲ್ ನಂ: 9980041791, 9880850851 ಸಂಪರ್ಕಿಸಬೇಕು ಎಂದು ಇಲ್ಲಿಯ ದುರ್ಗಾದೇವಿ ಕಮೀಟಿ ಅಧ್ಯಕ್ಷ ಮಾಯಪ್ಪ ಬಾಣಸಿ ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.