ಬೆಟಗೇರಿ:ಗ್ರಾಮದಲ್ಲಿ ಗಣೇಶ ಹಬ್ಬದ ಪ್ರಯುಕ್ತ ನಡೆದ ಶಾಂತಿಪಾಲನಾ ಸಭೆಯಲ್ಲಿ ಕುಲಗೋಡ ಪೊಲೀಸ್ ಠಾಣೆಯ ಪಿಎಸ್‍ಐ ಬಿ. ಆನಂದ ಮಾತನಾಡುತ್ತಿರುವದು.
ಬೆಟಗೇರಿ:ಗ್ರಾಮದ ಸರ್ವ ಧರ್ಮಿಯರು ಶಾಂತಿ, ಸ್ನೇಹ, ಸೌಹಾರ್ದತೆಯಿಂದ ಗಣೇಶ ಹಬ್ಬವನ್ನು ಆಚರಿಸಬೇಕು ಎಂದು ಕುಲಗೋಡ ಪೊಲೀಸ್ ಠಾಣೆಯ ಪಿಎಸ್‍ಐ ಬಿ. ಆನಂದ ಹೇಳಿದರು.
ಬೆಳಗಾವಿ ಜಿಲ್ಲಾ ಪೊಲೀಸ್ ಇಲಾಖೆ, ಕುಲಗೋಡ ಪೊಲೀಸ್ ಠಾಣೆಯ ಸಹಯೋಗದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ಆ.30ರಂದು ನಡೆದ ಶಾಂತಿಪಾಲನಾ ಸಭೆಯಲ್ಲಿ ಮಾತನಾಡಿದರು.
ಗಣೇಶ ಹಬ್ಬವನ್ನು ಸ್ಥಳೀಯರು ದುಂದು ವೆಚ್ಚ ಮಾಡಿ ಆಚರಿಸುವ ಬದಲು ಸಂಕಷ್ಟದಲ್ಲಿರುವ ಬಡವರಿಗೆ, ಅನಾಥಾಶ್ರಮದ ಮಕ್ಕಳಿಗೆ ಸಹಾಯ ಮಾಡಲು ಮುಂದಾಗಬೇಕು. ಗಣೇಶ ವಿಸರ್ಜನೆಯ ಸಮಯದಲ್ಲಿ ಡಾಲ್ಬಿ ಸೌಂಡ ಸಿಸ್ಟಮ್ ಬಳಸುವುದು ಸಂಪೂರ್ಣ ನಿಷೇದಿಸಲಾಗಿದೆ. ಹೆಸ್ಕಾಂ ಮತ್ತು ಸಿಪಿಐ ಕಛೇರಿಯಿಂದ ಸಾಮಾನ್ಯ ಧ್ವನಿವರ್ದಕ ಬಳಕೆಗೆ ಅನುಮತಿ ಪಡೆಯಬೇಕು. ಅಶ್ಲೀಲ, ಕೋಮು ಗಲಭೆ ಪ್ರಚೋದಿಸುವ ಹಾಡು, ಸಂಭಾಷಣೆಗಳನ್ನು ಬಿತ್ತರಿಸಬಾರದು ಎಂದು ಪಿಎಸ್‍ಐ ಬಿ. ಆನಂದ ಸ್ಥಳೀಯರಿಗೆ ಸಲಹೆಗಳನ್ನು ತಿಳಿಸಿದರು.
ತಾಪಂ ಮಾಜಿ ಸದಸ್ಯ ಲಕ್ಷ್ಮಣ ನೀಲಣ್ಣವರ, ಸುರೇಶ ಮಾಳೇದ, ಹನುಮಂತ ವಡೇರ, ಶಂಕರ ಕೋಣಿ, ಮಾರುತಿ ಚಂದರಗಿ, ಮುತ್ತೆಪ್ಪ ವಡೇರ, ಗಿರೀಶ ಗಾಣಗಿ, ವೀರಣ್ಣ ದೇಯಣ್ಣವರ, ಈರಪ್ಪ ಕಂಬಾರ, ಬಸವರಾಜ ದೇಯಣ್ಣವರ, ಅಜ್ಜಪ್ಪ ಕೊಟೂರ, ಫಿರೋಜ ಮಿರ್ಜಾನಾಯ್ಕ, ಶಿವಾನಂದ ಕಂಬಾರ, ಮಹೆಬೂಬ ಯಲಿಗಾರ, ಸ್ಥಳೀಯ ಬೀಟ್ ಪೊಲೀಸ್ ಪೇದೆ ಮಹೇಶ ಲದ್ದಿ, ಬಸವರಾಜ ಕ್ವಾನ್ಯಾಗೋಳ, ಮಾಳು ಆಡಿನ, ಸ್ಥಳೀಯ ವಿವಿಧ ಸಮಾಜದ ಮುಖಂಡರು, ಗಣ್ಯರು, ವಿವಿಧ ಯುವಕರು, ಸ್ಥಳೀಯರು ಇದ್ದರು.