Breaking News
Home / Recent Posts / ಗಣೇಶ ಹಬ್ಬ ಸ್ನೇಹ, ಸೌಹಾರ್ದತೆಯ ಪ್ರತೀಕವಾಗಿದೆ: ಡಿವೈಎಸ್‍ಪಿ ಡಿ.ಎಚ್.ಮುಲ್ಲಾ

ಗಣೇಶ ಹಬ್ಬ ಸ್ನೇಹ, ಸೌಹಾರ್ದತೆಯ ಪ್ರತೀಕವಾಗಿದೆ: ಡಿವೈಎಸ್‍ಪಿ ಡಿ.ಎಚ್.ಮುಲ್ಲಾ

Spread the love

 

ಬೆಟಗೇರಿ:ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಒಂದೇ ತಿಂಗಳಲ್ಲಿ ಬಂದಿರುವದರಿಂದ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬವನ್ನು ಸ್ಥಳೀಯ ಸರ್ವ ಧರ್ಮಿಯರು ಶಾಂತಿ, ಸ್ನೇಹ, ಸೌಹಾರ್ದತೆಯಿಂದ ಆಚರಿಸಬೇಕು. ಗಣೇಶ ಹಬ್ಬ ಸ್ನೇಹ, ಸೌಹಾರ್ದತೆಯ ಪ್ರತೀಕವಾಗಿದೆ ಎಂದು ಗೋಕಾಕ ಡಿವೈಎಸ್‍ಪಿ ಡಿ.ಎಚ್.ಮುಲ್ಲಾ ಹೇಳಿದರು.
ಬೆಳಗಾವಿ ಜಿಲ್ಲಾ ಪೊಲೀಸ್ ಇಲಾಖೆ, ಮೂಡಲಗಿ ಪೊಲೀಸ್ ಠಾಣೆ ಸಿಪಿಐ ವೃತ್ತ ಕಛೇರಿ, ಕುಲಗೋಡ ಪೊಲೀಸ್ ಠಾಣೆಯ ಸಹಯೋಗದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದಲ್ಲಿ ಆ.30ರಂದು ನಡೆದ ಶಾಂತಿಪಾಲನಾ ಸಭೆಯಲ್ಲಿ ಮಾತನಾಡಿದರು.
ಸ್ಥಳೀಯರು ಗಣೇಶ ಹಬ್ಬವನ್ನು ದುಂದು ವೆಚ್ಚ ಮಾಡಿ ಆಚರಿಸುವ ಬದಲು ಬಡಕುಟುಂಬದ ಮಕ್ಕಳ ಶಿಕ್ಷಣಕ್ಕೆ, ಅನಾಥಾಶ್ರಮದ ಮಕ್ಕಳಿಗೆ ಸಹಾಯ ಮಾಡಲು ಮುಂದಾಗಬೇಕು. ಗಣೇಶ ವಿಸರ್ಜನೆಯ ಸಮಯದಲ್ಲಿ ಡಾಲ್ಬಿ ಸೌಂಡ ಸಿಸ್ಟಮ್ ಬಳಸುವುದು ನಿಷೇದಿಸಲಾಗಿದೆ. ಸಾಮಾನ್ಯ ಧ್ವನಿವರ್ದಕ ಬಳಕೆಗೆ ಅವಕಾಶವಿದ್ದು, ಸಿಪಿಐ ಕಛೇರಿಯಿಂದ ಸಾಮಾನ್ಯ ಧ್ವನಿವರ್ದಕ ಬಳಕೆಗೆ ಅನುಮತಿ ಪಡೆಯಬೇಕು. ಅಶ್ಲೀಲ, ಕೋಮು ಗಲಭೆ ಪ್ರಚೋದಿಸುವ ಹಾಡು, ಸಂಭಾಷಣೆಗಳನ್ನು ಬಿತ್ತರಿಸಬಾರದು ಎಂದು ಡಿವೈಎಸ್‍ಪಿ ಡಿವೈಎಸ್‍ಪಿ ಡಿ.ಎಚ್.ಮುಲ್ಲಾ ಅವರು ಸ್ಥಳೀಯರಿಗೆ ಸಲಹೆಗಳನ್ನು ತಿಳಿಸಿದರು.
ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೋಡ ಹಾಗೂ ಕುಲಗೋಡ ಪೊಲೀಸ್ ಠಾಣೆಯ ಪಿಎಸ್‍ಐ ಬಿ.ಆನಂದ ಅವರು ಮಾತನಾಡಿ, ಕೌಜಲಗಿ ಗ್ರಾಮದಲ್ಲಿ ಶಾಂತಿ, ಸೌಹಾರ್ದತೆಯಿಂದ ಸ್ಥಳೀಯರು ಇರಬೇಕು. ಮುಂಬರುವ ಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು ಅಹಿತಕರ ಘಟನೆ ನಡೆಯದಂತೆ ಶಾಂತತೆಯಿಂದ ಆಚರಿಸಬೇಕು. ದ್ವಿಚಕ್ರ ವಾಹನ ಸವಾರರು ಹೆಲ್ಮಿಟ್ ಧರಿಸುವುದರ ಜೋತೆಗೆ ಸಂಚಾರಿ ನಿಯಮಗಳನ್ನು ಸಹ ಪಾಲನೆ ಮಾಡಬೇಕು ಎಂದರು.
ಸ್ಥಳೀಯ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ, ಶಿವಾನಂದ ಲೋಕನ್ನವರ, ಅಶೋಕ ಉದ್ದಪ್ಪನವರ, ನೀಲಪ್ಪ ಕೇವಟಿ, ಜಾಕೀರ ಜಮಾದಾರ, ರಾಯಪ್ಪ ಬಳೊಲದಾರ, ಮಹೇಶ ಪಟ್ಟಣಶೆಟ್ಟಿ, ಗ್ರಾಪಂ ಪಿಡಿಒ ಪರಶುರಾಮ ಇಟಗೌಡರ, ಅಶೋಕ ಶಿವಾಪೂರ, ಕೌಜಲಗಿ ಗ್ರಾಮದ ಬೀಟ್‍ಪೇದೆ ಎಮ್.ಬಿ.ಆಡಿನ ಸೇರಿದಂತೆ ಸ್ಥಳೀಯ ಸರ್ವ ಸಮಾಜದ ಹಿರಿಯರು, ಗಣ್ಯರು, ಯುವಕರು, ಸ್ಥಳೀಯರು ಇದ್ದರು.


Spread the love

About inmudalgi

Check Also

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಮೂಡಲಗಿ ತಾಲೂಕಾ ಎಸ್.ಸಿ/ಎಸ್.ಟಿ ಹಾಗೂ ಅಲ್ಪ ಅಲ್ಪಸಂಖ್ಯಾತರ ಶಾಖಾ ಘಟಕ ಉದ್ಘಾಟನೆ

Spread the loveಮೂಡಲಗಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟನೆಯು ಸಮಜದಲ್ಲಿ ಹಿಂದುಳಿದ ಜನರಿಗೆ ಸರಕಾರದ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ