ಶ್ರಮಜೀವಿಗಳನ್ನು ಸನ್ಮಾನಿಸುವುದು ಅಭಿಮಾನದ ದ್ಯೋತಕ -ರಾಜೇಂದ್ರ ಸಣ್ಣಕ್ಕಿ
ಬೆಟಗೇರಿ: ನಾಡಿನ ಭವ್ಯ ಪ್ರತಿಮೆಗಳು ವೀರ ತ್ಯಾಗ ಆದರ್ಶಗಳ ಸಂಕೇತಗಳಾಗಿದ್ದು, ಇಂತಹ ಭವ್ಯ ಶಿಲ್ಪಗಳನ್ನು ತಯಾರಿಸುವಲ್ಲಿ ಹಲವಾರು ಶ್ರಮಜೀವಿಗಳು ಎಲೆಯ ಮರೆಯ ಕಾಯಿಯಂತೆ ದುಡಿದಿರುತ್ತಾರೆ. ಈ ಶ್ರಮಜೀವಿಗಳನ್ನು ಸನ್ಮಾನಿಸುವುದು ಅಭಿಮಾನದ ದ್ಯೋತಕವಾಗಿದೆ ಎಂದು ಕೌಜಲಗಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಡಾ. ರಾಜೇಂದ್ರ ಸಣ್ಣಕ್ಕಿ ಹೇಳಿದರು.
ಗೋಕಾಕ ತಾಲೂಕಿನ ಕೌಜಲಗಿ ಪಟ್ಟಣದಲ್ಲಿ ಇತ್ತೀಚೆಗೆ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಸಮಿತಿಯ ಆಶ್ರಯದಲ್ಲಿ ಜರುಗಿದ ಸಂಗೊಳ್ಳಿ ರಾಯಣ್ಣ ಕಂಚಿನ ಮೂರ್ತಿ ಹಾಗೂ ಕಲ್ಲಿನಕೋಟೆ ನಿರ್ಮಾಣ ಮಾಡಿದ ಕುಶಲಕರ್ಮಿಗಳನ್ನು ಸತ್ಕರಿಸಿ ಸಣ್ಣಕ್ಕಿ ಅವರು ಮಾತನಾಡಿದರು.
ರಾಮ ಸೇತುವೆ ನಿರ್ಮಾಣದಲ್ಲಿ ದೊಡ್ಡ ದೊಡ್ಡ ಬಂಡೆಗಲ್ಲುಗಳನ್ನು ತಂದು ನಿಲ್ಲಿಸಿದವರ ಜೊತೆ ಮರುಳನ್ನು ತನ್ನ ಸಾಮಥ್ರ್ಯಕ್ಕೆ ತಕ್ಕಂತೆ ತಂದು ಕಲ್ಲುಗಳ ಬೆಸೆಯುವಲ್ಲಿ ತನ್ನದೇ ಸೇವೆ ಸಲ್ಲಿಸಿದ ಅಳಿಲಿನಂತೆ ಕೌಜಲಗಿ ಪಟ್ಟಣದಲ್ಲಿ ಬೃಹತ್ ಪ್ರಮಾಣದಲ್ಲಿ ನಿರ್ಮಾಣವಾದ ಸಂಗೊಳ್ಳಿ ರಾಯಣ್ಣ ಕಂಚಿನ ಮೂರ್ತಿ ಮತ್ತು ಕಲ್ಲಿನಕೋಟೆ ರೂಪಿಸುವಲ್ಲಿ ಹಲವಾರು ಶ್ರಮಜೀವಿಗಳು ಸೇವೆ ಸಲ್ಲಿಸಿದ್ದಾರೆ. ಅವರ ಸೇವೆ ಅಮರವಾದದ್ದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯ ಇಂಜಿನಿಯರ್ ನಿಂಗಪ್ಪ ಕಳ್ಳಿಗುದ್ದಿ, ಕೋಟೆ ನಿರ್ಮಾಣದ ಹನುಮಂತ ಆಡಿನ, ಎಲ್ಲಪ್ಪ ಗಾಡಿವಡ್ಡರ, ಪರಶುರಾಮ್ ಬಂಡಿವಡ್ಡರ, ಮೇಸ್ತ್ರಿಗಳಾದ ರಿಯಾಜ್ ಮುಲ್ತಾನಿ, ಹಾಲಪ್ಪ ವಾಲಿಕಾರ, ಶಿವರಾಜ ಕಂಬಾರ, ರಾಮಕೃಷ್ಣ ಪೇಂಟರ್, ಅಪತಾಬ್ ಮೇಸ್ತ್ರಿ, ಜುಬೇರ ಸಂಗನಕೇರಿ, ಚಿತ್ರ ಕಲಾವಿದ ಶಿಕ್ಷಕ ಬಿರಾದಾರ್ ಇವರೆಲ್ಲರನ್ನೂ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನಾ ಸಮಿತಿಯ ಅಧ್ಯಕ್ಷ ಡಾ ರಾಜೇಂದ್ರ ಸಣ್ಣಕ್ಕಿ, ಬೀರವಿಠ್ಠಲ ದೇವಸ್ಥಾನದ ದೇವರ್ಷಿ ವಿಠ್ಠಲ ಕುರಗುಂದ ಅವರು ಕುಶಲಕರ್ಮಿಗಳನ್ನು ಸತ್ಕರಿಸಿದರು.
ಗ್ರಾಪಂ ಅಧ್ಯಕ್ಷ ಅಶೋಕ್ ಉದ್ದಪ್ಪನವರ, ಅರ್ಬನ್ ಬ್ಯಾಂಕ್ ಅಧ್ಯಕ್ಷ ನೀಲಪ್ಪ ಕೇವಟಿ, ಪಿಕೆಪಿಎಸ್ ಅಧ್ಯಕ್ಷ ಬಿ.ಪಿ. ಬೂತಣ್ಣವರ, ಕೆಪಿಎಸ್ ಸಮಿತಿಯ ಅಧ್ಯಕ್ಷ ಎಸ್ ಬಿ ಹಳ್ಳೂರ, ಕನಕ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಮಂಜುನಾಥ್ ಸಣ್ಣಕ್ಕಿ, ಬಸವರಾಜ ಜೋಗಿ, ರಾಯಪ್ಪ ಬಳೋಲದಾರ, ಯಲ್ಲಪ್ಪ ಬೆನಚನಮರಡಿ ಸೇರಿದಂತೆ ಗ್ರಾಮಸ್ಥರು, ಯುವಕರು ಹಾಜರಿದ್ದರು.