ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀ ಲಕ್ಷ್ಮೀದೇವಿ ದೇವರ ಜಾತ್ರಾಮಹೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನ.4 ಮತ್ತು ನ.5 ರಂದು ನಡೆಯಲಿದೆ.
ನ.4ರಂದು ಬೆಳಗ್ಗೆ, ಸಂಜೆ6ಗಂಟೆಗೆ ಇಲ್ಲಿಯ ಲಕ್ಷ್ಮೀದೇವಿ ದೇವಾಲಯದಲ್ಲಿರುವ ಶ್ರೀದೇವಿಯ ಗದ್ಗುಗೆಗೆ ಪೂಜೆ, ನೈವೇದ್ಯ ಸಮರ್ಪಿಸುವ, ದೇವರನ್ನು ಗದ್ಗುಗೆಗೊಳಿಸುವ, ಪರದೇವರ ಪಲ್ಲಕ್ಕಿಗಳ ಆಗಮನ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಜೆ ಹೊತ್ತು ಜರುಗಲಿವೆ.
ನ.5 ರಂದು ಬೆಳಗ್ಗೆ 6ಗಂಟೆಗೆ ಲಕ್ಷ್ಮೀದೇವಿಯ ಗದ್ಗುಗೆಗೆ ಮಹಾಪೂಜೆ, ಮಹಾಭಿಷೇಕ, ನೈವೇದ್ಯ ಸಮರ್ಪಿಸುವ, ಲಕ್ಷ್ಮೀದೇವಿಯ ಆರಾಧನೆ, ಸುಮಂಗಲೆಯರಿಂದ ಶ್ರೀದೇವಿಗೆ ಉಡಿ ತುಂಬುವುದು, ವಿಶೇಷ ಪೂಜೆ, ದೀಪೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪುರ ಜನರಿಂದ ನಡೆದ ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ, ಮಹಾಪ್ರಸಾದದ ಜರುಗಿ ಪ್ರಸಕ್ತ ವರ್ಷದ ಜಾತ್ರಾಮಹೋತ್ಸವ ಸಮಾರೊಪಗೊಳ್ಳಲಿದೆ.
ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ರಾಜಕೀಯ ಮುಖಂಡರು, ಗಣ್ಯರು, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಬೆಟಗೇರಿ ಗ್ರಾಮದ ಲಕ್ಷ್ಮೀದೇವಿ ದೇವರ ಜಾತ್ರಾಮಹೋತ್ಸವ ಆಚರಣಾ ಸಮಿತಿ ಸದಸ್ಯರು, ಭಕ್ತರು ಜಾತ್ರಾಮಹೋತ್ಸವದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸ್ಥಳೀಯ ಲಕ್ಷ್ಮೀದೇವಿ ಜಾತ್ರಾಮಹೋತ್ಸವ ಆಚರಣಾ ಸಮಿತಿ ಸಂಚಾಲಕ ರಾಮಣ್ಣ ಬಳಿಗಾರ ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ.