*ಅಡಿವೇಶ ಮುಧೋಳ.
ಬೆಟಗೇರಿ:ಶಿಕ್ಷಕರಿಂದ ವಿಶೇಷ ಗಮನ… ಪಾಠ ಪ್ರವಚನ… ವಿದ್ಯಾರ್ಥಿಗಳಿಂದ ವಾಗ್ದಾನ.., ಫಲಿಂತಾಂಶ ಸುಧಾರಣೆÉಗೆ ಪ್ರೇರಣೆ… ಇದೇನು.? ಎಲ್ಲಿ ಅನ್ನುತ್ತೀರಾ.! ಇದು ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಬೆಟಗೇರಿ ಗ್ರಾಮದ ವಿ.ವಿ.ಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ವಾಗ್ದಾನ ಎಂಬ ವಿನೂತನ ವಿಶೇಷ ಕಾರ್ಯಕ್ರಮ ನ.7ರಂದು ನಡೆಯಿತು.
ಶಾಲೆಯ ಮುಖ್ಯಾಧ್ಯಾಪಕ, ಸಹಶಿಕ್ಷಕರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉತ್ಸಾಹ ತುಂಬಲು ವಿದ್ಯಾರ್ಥಿಗಳಿಂದ ವಾಗ್ದಾನ ಎಂಬ ವಿನೂತನ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು ಸ್ವ ಸಾಮಥ್ಯದ ಶೇ75, ಶೇ80, ಶೇ90, ಶೇ95, ಶೇ100ರಷ್ಟು ಫಲಿಂತಾಂಶ ಘೋಷಣೆಯ ಬಗ್ಗೆ ತಿಳಿಸಿದರು. ವಿದ್ಯಾರ್ಥಿಗಳು ತಮ್ಮ ಭಾವಚಿತ್ರ ಶಾಲೆಯ ನೋಟಿಸ್ ಫಲಕ ಮೇಲೆ ಅಂಟಿಸಿದ ಅಂಕ ಗಳಿಕೆ ಸಾಮಥ್ರ್ಯದ ಮೇಲೆ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಉತ್ಸಾಹ, ವಿಶೇಷ ಪಾಠ ಪ್ರವಚನ, ನುರಿತ ಶಿಕ್ಷಕರಿಂದ ಪಠ್ಯದ ಉಪನ್ಯಾಸ ಸೇರಿದಂತೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆ ತರಬೇತಿ ನೀಡಲು ಕೆಲವು ವಿದ್ಯಾರ್ಥಿಗಳ ಹಲವು ಗುಂಪುಗಳನ್ನಾಗಿಸಿ, ವಿಶೇಷ ಪಾಠ, ಪರೀಕ್ಷಾ ತಯಾರಿಯ ಕುರಿತು ಶಿಕ್ಷಕರು ತರಬೇತಿ ನೀಡಲು ಅಣಿಯಾಗಿದ್ದಾರೆ.
ಪ್ರಸಕ್ತ ವರ್ಷ 292 ಜನ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಬರೆಯಲಿದ್ದಾರೆ. 100ಕ್ಕೆ 100ರಷ್ಟು ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ವಿನೂತನ ಕಾರ್ಯಕ್ರಮಗಳನ್ನು ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡು ಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆ ಅರಿವು, ಪರೀಕ್ಷೆಯ ಭಯ ಮುಕ್ತ ವಾತಾವರಣ ನಿರ್ಮಾಣ, ಪರೀಕ್ಷೆ ಬರೆಯುವ ವಿಧಾನ ಸೇರಿದಂತೆ ಹಲವಾರು ವಿಷಯಗಳ ಕುರಿತು ತಿಳಿಸಲಾಗುವುದು ಎಂದು ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಮಾಹಿತಿ ನೀಡಿದ್ದಾರೆ.
ಬಾಕ್ಸ್ ಐಟಮ್: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಪ್ರೇರಣೆ: ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಹಮ್ಮಿಕೊಂಡಿರುವ ವಿದ್ಯಾರ್ಥಿಗಳಿಂದ ವಾಗ್ದಾನ ಎಂಬ ವಿನೂತನ ಕಾರ್ಯಕ್ರಮ ಆಯೋಜನೆ ಮೂಲಕ ಶಾಲೆಯ ಮುಖ್ಯಾಧ್ಯಾಪಕ, ಶಿಕ್ಷಕರು ಮಕ್ಕಳಲ್ಲಿ ಉತ್ಸಾಹ, ಪ್ರೋತ್ಸಾಹ ತುಂಬುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಈ ವಿನೂತನ ಕಾರ್ಯಕ್ರಮ ಆಯೋಜಿನೆ ಎಸ್ಸೆಸ್ಸೆಲ್ಸಿ ಮಕ್ಕಳು ವಾರ್ಷಿಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಪ್ರೇರಣಾ ಪೂರಕವಾಗಿವೆ ಎಂದು ಮೂಡಲಗಿ ಶೈಕ್ಷಣಿಕ ವಲಯ ಬಿಇಒ ಅಜೀತ ಮನ್ನಿಕೇರಿ ತಿಳಿಸಿದ್ದಾರೆ.
ಈ ವೇಳೆ ಚಿಕ್ಕೋಡಿ ಉಪನಿದೇರ್ಶಕ ಕಛೇರಿಯ ವಿಷಯ ಪರಿವಿಕ್ಷಕ ಅರಿಹಂತ ಬಿರಾದಾರ ಪಾಟೀಲ, ಶುಭಾ ಬಿ., ಈರಣ್ಣ ಪಟಗುಂದಿ, ರಾಕೇಶ ನಡೋಣಿ, ಯಮನಪ್ಪ ವಗ್ಗರ, ಪ್ರಕಾಶ ಕುರಬೇಟ, ಗಣಪತಿ ಭಾಗೋಜಿ, ಈಶ್ವರ ಮುನವಳ್ಳಿ, ಭಾಗ್ಯಶ್ರೀ ನಾಯಕ, ಅತಿಥಿ ಶಿಕ್ಷಕರು, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು, ಇತರರು ಇದ್ದರು.
