ಅಡಿಬಟ್ಟಿ- (ತಾ.ಗೋಕಾಕ)-
ಗ್ರಾಮಸ್ಥರ ಬೇಡಿಕೆಗಳಿಗೆ ಸ್ಪಂದಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಅಡಿಬಟ್ಟಿ ಮುಖ್ಯರಸ್ತೆಯಿಂದ ವಿಠ್ಠಪ್ಪ ಗುಡಿಯವರೆಗೆ ರಸ್ತೆಯನ್ನು
ಅಭಿವೃದ್ಧಿಪಡಿಸಲಾಗುವುದೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಭರವಸೆಯನ್ನು ನೀಡಿದರು.
ಇತ್ತೀಚೆಗೆ ಗೋಕಾಕ ತಾಲೂಕಿನ ಅಡಿಬಟ್ಟಿ ಗ್ರಾಮದ ವಿಠ್ಠಪ್ಪನ ದೇವರ ಜಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಠ್ಠಪ್ಪ ದೇವಸ್ಥಾನ (ಬಸಳಿಗುಂದಿ ಮನೆಯಿಂದ ಪೂಜೇರಿ ಮನೆತನಕ) ದ ರಸ್ತೆಯನ್ನು ಸುಧಾರಿಸಲಾಗುವುದು ಎಂದು ತಿಳಿಸಿದರು.
ದಂಡಿನ ಮಾರ್ಗದ ರಸ್ತೆಯಲ್ಲಿರುವ ಅಡಿಬಟ್ಟಿ ಗ್ರಾಮಸ್ಥರು ಮೊದಲಿನಿಂದಲೂ ವಿಶ್ವಾಸವನ್ನಿಟ್ಟುಕೊಂಡು ಆಶೀರ್ವಾದ ಮಾಡುತ್ತ ಬರುತ್ತಿದ್ದಾರೆ. ಪ್ರತಿಯೊಂದು ಚುನಾವಣೆಯಲ್ಲಿ ಹೆಚ್ಚಿನ ಮತ ನೀಡುತ್ತ ತಮ್ಮ ನಿಷ್ಠೆಯನ್ನು ವ್ಯಕ್ತಪಡಿಸುತ್ತ ಬರುತ್ತಿದ್ದಾರೆ. ಆದ್ದರಿಂದ ಗ್ರಾಮಸ್ಥರಿಗೆ ಸದಾ ಋಣಿಯಾಗಿರುವುದಾಗಿ ಅವರು ತಿಳಿಸಿದರು.
ಜಾತ್ರೆಗಳು ನಮ್ಮ ಸಂಸ್ಕೃತಿಗಳನ್ನು ಬಿಂಬಿಸುತ್ತಿವೆ. ಜಾತ್ಯಾತೀತ ಮನೋಭಾವನೆಗೆ ಇಂತಹ ಜಾತ್ರೆಗಳು ಸಾಕ್ಷಿಯಾಗಿವೆ. ಎಲ್ಲ ಜಾತಿಯವರು ಕೂಡಿಕೊಂಡು ಜಾತ್ರೆಗಳನ್ನು ಮಾಡುವುದು ಈ ಮೂಲಕ ನಮ್ಮ ಆಚಾರ- ವಿಚಾರಗಳನ್ನು ಇಂದಿನ ಯುವ ಪೀಳಿಗೆಗೆ ಅರಿವು ಮೂಡಿಸುವಲ್ಲಿ ಹಿರಿಯರು ಎಲ್ಲರನ್ನೂ ಒಗ್ಗೂಡಿಸುತ್ತಿರುವ ಕಾರ್ಯವು ಪ್ರಶಂಸನೀಯ ಎಂದು ಅವರು ಹೇಳಿದರು. ಜಾತ್ರೆಗೆ ಎಲ್ಲಾ ರೀತಿಯ ಅನುಕೂಲ ಮಾಡಿಕೊಟ್ಟು ತನು,ಮನ,ಧನ ಸೇವೆ ಸಲ್ಲಿಸಿರುವ ಶಾಸಕ ಹಾಗೂ ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ದೇವಸ್ಥಾನದ ಕಮೀಟಿಯವರು ಸತ್ಕರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಸಗೌಡ ಪಾಟೀಲ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಸಿದ್ದಪ್ಪ ಹಂಜಿ, ಮೆಳವಂಕಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಯಲ್ಲವ್ವ ಶಿಂತ್ರಿ, ಶಿವಾನಂದ ಬಸಳಿಗುಂದಿ, ಕೆಂಚಪ್ಪ ಶಿಂತ್ರಿ, ನಿಂಗಪ್ಪ ಶಿಂತ್ರಿ, ಅಡಿವೆಪ್ಪ ಕಂಕಾಳಿ, ಡಾ. ಅಡಿವೆಪ್ಪ ಭಂಗಿ, ವಿಠ್ಠಪ್ಪ ಬಸಳಿಗುಂದಿ, ನಾಗಪ್ಪ ಕಾಪಶಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Home / ಬೆಳಗಾವಿ / ಗ್ರಾಮಸ್ಥರ ಬೇಡಿಕೆಗಳಿಗೆ ಸ್ಪಂದಿಸಿ , ಮುಂಬರುವ ದಿನಗಳಲ್ಲಿ ಅಡಿಬಟ್ಟಿ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು ಶಾಸಕ ಬಾಲಚಂದ್ರ ಜಾರಕಿಹೊಳಿ
Check Also
ಸಂಪನ್ಮೂಲ ವಿದ್ಯಾರ್ಥಿಗಳು ನವಸಮಾಜದ ಕಣ್ಣುಗಳು ಇದ್ದಂತೆ- ಎಸ್. ಎನ್. ಕುಂಬಾರ
Spread the loveಮೂಡಲಗಿ : ಸಂಪನ್ಮೂಲ ವಿದ್ಯಾರ್ಥಿಗಳು ನವಸಮಾಜದ ಕಣ್ಣುಗಳು ಇದ್ದಂತೆ ಮತ್ತು ವಿದ್ಯಾರ್ಥಿಗಳು ಸೃಜನಶೀಲ ಸಂಪನ್ಮೂಲ ಕೌಶಲ್ಯಗಳನ್ನು ಹೊಂದುವದರ …